
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (World Test Championship ) ಫೈನಲ್ಗೆ ಇನ್ನು 2 ದಿನಗಳು ಮಾತ್ರ ಬಾಕಿ ಉಳಿದಿವೆ. ಆಸ್ಟ್ರೇಲಿಯಾ ಹಾಗೂ ಭಾರತ (India vs Australia) ನಡುವಿನ ಅಂತಿಮ ಪಂದ್ಯ ಜೂನ್ 7 ರಿಂದ ಓವಲ್ ಮೈದಾನದಲ್ಲಿ ನಡೆಯಲಿದೆ. ಬರೋಬ್ಬರಿ ಮೂರು ತಂಡವಾಗಿ ಐಪಿಎಲ್ ನಡುವೆ ಹಾಗೂ ಫೈನಲ್ ಮುಗಿದ ಬಳಿಕ ಇಂಗ್ಲೆಂಡ್ ತಲುಪಿದ್ದ ಟೀಂ ಇಂಡಿಯಾ (Team India) ಇಷ್ಟು ದಿನ ಬೇರೆ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿತ್ತು. ಆದರೆ ನಿನ್ನೆ ಲಂಡನ್ ತಲುಪಿದ ಟೀಂ ಇಂಡಿಯಾ ಜೂನ್ 4ರಂದು ಓವಲ್ ಮೈದಾನದಲ್ಲಿ ಮೊದಲ ಅಭ್ಯಾಸ ನಡೆಸಿತು. ಮುಂಜಾನೆಯಿಂದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಸಾರಥ್ಯದಲ್ಲಿ ಟೀಂ ಇಂಡಿಯಾ ಅಭ್ಯಾಸ ನಡೆಸಿತು. ಆದರೆ ತಂಡದ ಆರಂಭಿಕ ಆಟಗಾರ ಗಿಲ್ ಮಾಡಿದ ಎಡವಟ್ಟಿನಿಂದ ಕೋಚ್ ದ್ರಾವಿಡ್ ಕೊಂಚ ಸಮಯ ಶುಭ್ಮನ್ ಗಿಲ್ (Shubman Gill) ಮೇಲೆ ಗರಂ ಆದ ದೃಶ್ಯವೂ ಕಂಡುಬಂತು.
ಅಭ್ಯಾಸಕ್ಕೆ ತಡವಾಗಿ ಬಂದ ಗಿಲ್
ವಾಸ್ತವವಾಗಿ, ಅಭ್ಯಾಸದ ಸಮಯದಲ್ಲಿ ಸಹನ ಮೂರ್ತಿ ದ್ರಾವಿಡ್ ಕೋಪಗೊಳ್ಳಲು ಕಾರಣವೆನೆಂದರೆ, ಲಂಡನ್ನ ಓವಲ್ ಮೈದಾನದಲ್ಲಿ ಮೊದಲ ಅಭ್ಯಾಸ ನಡೆಸಿದ್ದ ಟೀಂ ಇಂಡಿಯಾದ ಕ್ಯಾಂಪ್ಗೆ ಶುಭ್ಮನ್ ಗಿಲ್ ಸ್ವಲ್ಪ ತಡವಾಗಿ ಬಂದಿದ್ದಾರೆ. ಇದು ಗುರು ದ್ರಾವಿಡ್ ಕಣ್ಣುಗಳನ್ನು ಕೆಂಪಾಗುವಂತೆ ಮಾಡಿತ್ತು. ಗಿಲ್ ಅಭ್ಯಾಸಕ್ಕೆ ಬರುವುದಕ್ಕೂ ಮುನ್ನವೇ ಟೀಂ ಇಂಡಿಯಾದ ಅಭ್ಯಾಸ ಶುರುವಾಗಿತ್ತು. ಈ ಅಭ್ಯಾಸದ ಅವಧಿಯಲ್ಲಿ ಭಾರತ ತಂಡ, ಡಬ್ಲ್ಯುಟಿಸಿ ಫೈನಲ್ನಲ್ಲಿ ಯಾವ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೋ ಅದೇ ಕ್ರಮದಲ್ಲಿ ಅಭ್ಯಾಸ ಮಾಡಬೇಕಾಗಿತ್ತು. ಆದರೆ, ಗಿಲ್ ತಡವಾಗಿ ಆಗಮಿಸಿದ್ದರಿಂದ ಇದು ಸಾಧ್ಯವಾಗಲಿಲ್ಲ.
WTC Final 2023: 5 ನಾಯಕರು, ಇಬ್ಬರು ಕೋಚ್, 10 ಗೆಲುವು; ಹೀಗಿತ್ತು ಭಾರತದ ಫೈನಲ್ ಜರ್ನಿ
ಗಿಲ್ಗೆ ಕಾಯುವ ಶಿಕ್ಷೆ ಕೊಟ್ಟ ದ್ರಾವಿಡ್
ಮೊದಲ ಆವೃತ್ತಿಯ ಸೋಲನ್ನು ಗಂಭೀರವಾಗಿ ತೆಗೆದುಕೊಂಡಿರುವ ದ್ರಾವಿಡ್ ಈ ಬಾರಿಯಾದರೂ ಚಾಂಪಿಯನ್ ಆಗಲೇಬೇಕೆಂಬ ಗುರಿಯೊಂದಿಗೆ ಲಂಡನ್ಗೆ ಕಾಲಿಟ್ಟಿದ್ದಾರೆ. ಆದರೆ ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಶುಭ್ಮನ್ ಗಿಲ್ ಬರದಿರುವುದು ದ್ರಾವಿಡ್ ಕೋಪಗೊಳ್ಳುವಂತೆ ಮಾಡಿತು. ಹೀಗಾಗಿ ಆರಂಭಿಕರಾಗಿ ಗಿಲ್ ಬದಲು ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿಯನ್ನು ಅಭ್ಯಾಸಕ್ಕೆ ಕಳುಹಿಸಿದರು. ಬಳಿಕ ತಡವಾಗಿ ಬಂದ ಗಿಲ್ ತಮ್ಮ ಬ್ಯಾಟಿಂಗ್ ಅಭ್ಯಾಸದ ಸರದಿ ಬರುವವರೆಗು ಕಾಯಬೇಕಾಗಿ ಬಂತು. ತಡವಾಗಿ ಬಂದ ಗಿಲ್ ಅವರೊಂದಿಗೆ ರಾಹುಲ್ ದ್ರಾವಿಡ್ ಸ್ವಲ್ಪ ಸಮಯ ಸುದೀರ್ಘ ಚರ್ಚೆ ನಡೆಸಿದರು.
WTC ಫೈನಲ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕೆಎಸ್ ಭರತ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕಟ್.
ಮೀಸಲು ಆಟಗಾರರು | ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಮುಖೇಶ್ ಕುಮಾರ್
WTC ಫೈನಲ್ಗೆ ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಮೈಕೆಲ್ ನೆಸರ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ ಮತ್ತು ಮ್ಯಾಥ್ಯೂ ರೆನ್ಶಾ.
ಮೀಸಲು ಆಟಗಾರರು | ಮಿಚೆಲ್ ಮಾರ್ಷ್ ಮತ್ತು ಮ್ಯಾಥ್ಯೂ ರೆನ್ಶಾ
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ