Mohammed Siraj: ಬಾಲ್ ಹಾಕಲು ಬಂದಾಗ ಕ್ರೀಸ್ ಬಿಟ್ಟು ನಿಂತ ಸ್ಮಿತ್: ಕೋಪದಲ್ಲಿ ಸಿರಾಜ್ ಏನು ಮಾಡಿದ್ರು ನೋಡಿ

Mohammed Siraj: ಬಾಲ್ ಹಾಕಲು ಬಂದಾಗ ಕ್ರೀಸ್ ಬಿಟ್ಟು ನಿಂತ ಸ್ಮಿತ್: ಕೋಪದಲ್ಲಿ ಸಿರಾಜ್ ಏನು ಮಾಡಿದ್ರು ನೋಡಿ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ (WTC Final) ಭಾರತ ವಿರುದ್ಧ ಆಸ್ಟ್ರೇಲಿಯಾ (India vs Australia) ತಂಡ ಬಿಗಿ ಹಿಡಿತ ಸಾಧಿಸಿದೆ. ಮೊದಲ ಎರಡೂ ದಿನ ಯಶಸ್ಸು ಸಾಧಿಸಿರುವ ಕಾಂಗರೂ ಪಡೆ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದೆ. ಆಸೀಸ್ ಪಡೆಯನ್ನು 469 ರನ್​ಗಳಿಗೆ ಆಲೌಟ್ ಮಾಡಿ ತನ್ನ ಪ್ರಥಮ ಇನ್ನಿಂಗ್ಸ್ ಶುರು ಮಾಡಿರುವ ಭಾರತ ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆಯಷ್ಟೆ. 318 ರನ್​ಗಳ ಹಿನ್ನಡೆಯಲ್ಲಿದೆ. ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿರುವ ಟೀಮ್ ಇಂಡಿಯಾಕ್ಕೆ ಅಜಿಂಕ್ಯಾ ರಹಾನೆ (Ajinkya Rahane) ಆಸರೆಯಾಗಿ ನಿಂತಿದ್ದಾರೆ. ಡಬ್ಲ್ಯೂಟಿಸಿ ಫೈನಲ್​ನ ದ್ವಿತೀಯ ದಿನ ಕೂಡ ಕೆಲ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.

ಮೊಹಮ್ಮದ್ ಸಿರಾಜ್ ಹಾಗೂ ಸ್ಟೀವ್ ಸ್ಮಿತ್ ನಡುವೆ ಚಿಕ್ಕ ಮಟ್ಟದ ಚಕಮಕಿ ನಡೆಯಿತು. 86ನೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ 4ನೇ ಎಸೆತ ಹಾಕಲು ಓಡಿ ಬರುತ್ತಿದ್ದರು. ಇನ್ನೇನು ಚೆಂಡು ಎಸೆಯ ಬೇಕು ಎನ್ನುವಷ್ಟರಲ್ಲಿ ಸ್ಮಿತ್ ಸ್ಟ್ರೈಕ್​ನಿಂದ ಹಿಂದೆ ಸರಿದಿದ್ದಾರೆ. ಈರೀತಿ ಸ್ಮಿತ್ ಮಾಡಿದ್ದು ಇದೇ ಮೊದಲಲ್ಲ. ಈ ಪಂದ್ಯದಲ್ಲಿ ಅನೇಕ ಬಾರಿ ಚೆಂಡು ಎಸೆಯಲು ಬಂದಾಗ ಕ್ರೀಸ್​ ನಿಂದ ಹಿಂದಚೆ ಸರಿಯುತ್ತಿದ್ದರು. ಈ ಬಾರಿ ತಾಳ್ಮೆ ಕಳೆದುಕೊಂಡ ಸಿರಾಜ್, ವಿಕೆಟ್‌ಗೆ ಚೆಂಡೆಸೆದಿದ್ದಾರೆ.

Rohit Sharma: ಮತ್ತೊಮ್ಮೆ ಕೈ ಕೊಟ್ಟ ರೋಹಿತ್ ಶರ್ಮಾ..!

View this post on Instagram

A post shared by ICC (@icc)

ಇಷ್ಟಕ್ಕೆ ಸುಮ್ಮನಾಗದ ಸಿರಾಜ್ ಅವರು ಸ್ಮಿತ್​ಗೆ ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರೆ. ಗಮನ ವಿಕೆಟ್‌ನ ಮುಂದಿರಲಿ ಬೇರೆಡೆಗಲ್ಲ ಎಂದು ಸ್ಮಿತ್‌ಗೆ ಖಾರವಾಗಿ ಹೇಳಿದ ಘಟನೆ ಕೂಡ ನಡೆಯಿತು. ಸ್ಪೈಡರ್‌ ಕ್ಯಾಮೆರಾದಿಂದ ತಮ್ಮ ಏಕಾಗ್ರತೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಈರೀತಿ ಮಾಡಬೇಕಾಗಿ ಬಂತು ಎಂಬುದು ಸ್ಮಿತ್‌ ದೂರಾಗಿತ್ತು.

ಸ್ಮಿತ್​ರಿಂದ ಶತಕದ ಸಾಧನೆ:

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ 268 ಎಸೆತಗಳಲ್ಲಿ 121 ರನ್​ ಬಾರಿಸಿ ಶತಕ ಸಿಡಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್​ನ ಜೋ ರೂಟ್ ಭಾರತದ ವಿರುದ್ಧ 9 ಶತಕ ಬಾರಿಸಿದ್ದರು. ಇದೀಗ ಸ್ಮಿತ್ ಕೂಡ 9 ಶತಕ ಸಿಡಿಸಿ ರೂಟ್​ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂತೆಯೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಸ್ಟ್ರೇಲಿಯಾ ಆಟಗಾರ ಎಂಬ ದಾಖಲೆ ಸ್ಮಿತ್ ಪಾಲಾಗಿದೆ. ಆಸ್ಟ್ರೇಲಿಯಾ ಪರ ಟೆಸ್ಟ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ (31) ಮೂರನೇ ಸ್ಥಾನಕ್ಕೇರಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ ಸ್ಟೀವ್ ಸ್ಮಿತ್ 2000 ರನ್ ಕೂಡ ಪೂರೈಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/steve-smith-who-left-the-crease-when-mohammed-came-to-bowl-see-what-siraj-did-in-anger-in-ind-vs-aus-wtc-final-vb-597404.html

Leave a Reply

Your email address will not be published. Required fields are marked *