ಕೇದಾರನಾಥ ದೇಗುಲದ ಬಳಿ ಭಾರೀ ಹಿಮಪಾತ..! ವಿಡಿಯೋ ವೈರಲ್‌

Kedarnath Temple avalanche video : ಪ್ರಸಿದ್ಧ ಯಾತ್ರಾ ಸ್ಥಳ ಕೇದಾರನಾಥ ದೇವಾಲಯದ ಸುತ್ತಲಿನ ಪರ್ವತಗಳಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಇದಕ್ಕೆ ಸಂಬಂಧಪಟ್ಟ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ವರದಿಯಾಗಿದೆ.   

Kedarnath Temple avalanche : ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥ ದೇವಾಲಯದ ಸುತ್ತಲಿನ ಪರ್ವತಗಳಲ್ಲಿ ಗುರುವಾರ ಭಾರಿ ಹಿಮಕುಸಿತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ. ಇತ್ತೀಚಿಗೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಜೂನ್ 4 ರಂದು ರಾಜ್ಯದಲ್ಲಿ ಇದೇ ರೀತಿಯ ಹಿಮ ಹಿಮಕುಸಿತ ಸಂಭವಿಸಿದೆ. ಇದು ಹೇಮಕುಂಡ್ ಸಾಹಿಬ್‌ಗೆ ಹೋಗುತ್ತಿದ್ದ ಯಾತ್ರಾರ್ಥಿಗಳ ಗುಂಪಿಗೆ ಅಪ್ಪಳಿಸಿತು. ಅವರಲ್ಲಿ ಐವರನ್ನು ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್‌ಡಿಆರ್‌ಎಫ್) ತಂಡ ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡ ನಂತರ ಜೂನ್ 5 ರಂದು ಯಾತ್ರಿಗಳ ಮೃತದೇಹವನ್ನು ಹೊರತೆಗೆಯಲಾಯಿತು.

ಮತ್ತೊಂದೆಡೆ, ಕೇದಾರನಾಥ ಧಾಮ ಯಾತ್ರೆಗೆ ಆಫ್‌ಲೈನ್ ನೋಂದಣಿಯನ್ನು ಜೂನ್ 10 ರವರೆಗೆ ಮತ್ತು ಆನ್‌ಲೈನ್ ನೋಂದಣಿಯನ್ನು ಜೂನ್ 15 ರವರೆಗೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಭಕ್ತರು ಧಾಮಕ್ಕೆ ಭೇಟಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಪ್ರಕಾರ, ಇದುವರೆಗೆ 41 ಲಕ್ಷ ಭಕ್ತರು ಚಾರ್ಧಾಮ್ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ವರದಿಯ ಪ್ರಕಾರ, ಹವಾಮಾನ ಅನುಕೂಲಕರವಾದಾಗ ಪ್ರತಿನಿತ್ಯ 60 ಸಾವಿರಕ್ಕೂ ಹೆಚ್ಚು ಯಾತ್ರಿಕರು ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳಿಗೆ ಭೇಟಿ ನೀಡುತ್ತಾರೆ.

ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥಗಳನ್ನು ಚಾರ್ ಧಾಮ್ ಎಂದು ಕರೆಯಲಾಗುತ್ತದೆ. ಗಂಗೋತ್ರಿ ಮತ್ತು ಯಮುನೋತ್ರಿಯ ದೇವಾಲಯದ ಬಾಗಿಲುಗಳನ್ನು ಭಕ್ತರ ದರ್ಶನಕ್ಕಾಗಿ ಅಕ್ಷಯ ತೃತೀಯ ಏಪ್ರಿಲ್ 22 ರಂದು ತೆರೆಯಲಾಯಿತು. ಕೇದಾರನಾಥ ಧಾಮದ ಬಾಗಿಲುಗಳನ್ನು ಏಪ್ರಿಲ್ 25 ರಂದು ಮತ್ತು ಬದರಿನಾಥ ಧಾಮದ ಬಾಗಿಲುಗಳನ್ನು ಏಪ್ರಿಲ್ 27 ರಂದು ತೆರೆಯಲಾಯಿತು.

Source : https://zeenews.india.com/kannada/entertainment/massive-avalanche-hits-mountains-near-kedarnath-temple-video-goes-viral-139333

Leave a Reply

Your email address will not be published. Required fields are marked *