Ajinkya Rahane: ಇಂಜುರಿ ಆಗಿದ್ದರೂ ಸಂಕಷ್ಟದ ನಡುವೆ ಭಾರತದ ಕೈಬಿಡದ ರಹಾನೆ: ಸಲಾಂ ಎನ್ನಲೇ ಬೇಕು

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಭಾರತ ಸಂಕಷ್ಟದಲ್ಲಿದೆ. ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್​ನಲ್ಲಿ 123 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದರೂ 296 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಟೀಮ್ ಇಂಡಿಯಾ ಬೌಲರ್​ಗಳು ಇಂದು ಆದಷ್ಟು ಬೇಗ ಕಾಂಗರೂ ಪಡೆಯನ್ನು ಆಲೌಟ್ ಮಾಡಬೇಕಿದೆ.ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 296 ರನ್ ಕಲೆಹಾಕಿತ್ತು. ಇದಕ್ಕೆ ನೆರವಾಗಿದ್ದು ಅಜಿಂಕ್ಯ ರಹಾನೆ. 71 ರನ್​ಗೆ ರೋಹಿತ್, ಗಿಲ್, ಪೂಜಾರ, ಕೊಹ್ಲಿ ಹೀಗೆ 4 ವಿಕೆಟ್ ಕಳೆದುಕೊಂಡ ಸಂದರ್ಭ ರಹಾನೆ ಅವರು ಜಡೇಜಾ ಜೊತೆಗೂಡಿ ತಂಡಕ್ಕೆ ಆಸರೆ ಆದರು.ಜಡೇಜಾ ನಿರ್ಗಮನದ ಬಳಿಕ ಶಾರ್ದೂಲ್ ಠಾಕೂರ್ ಜೊತೆಯಾಗಿ ರಹಾನೆ ಫಾಲೋಆನ್​ ಭೀತಿಯಲ್ಲಿದ್ದ ಭಾರತಕ್ಕೆ ಆಪದ್ಬಾಂಧವನಾದರು. ಪುಟಿದೇಳುತ್ತಿದ್ದ ಪಿಚ್​ನಲ್ಲಿ ಸೊಗಸಾಗಿ ಬ್ಯಾಟ್​ ಮಾಡಿದ ರಹಾನೆ ತಂಡವನ್ನ ಭಾರಿ ಸಂಕಷ್ಟದಿಂದ ಪಾರು ಮಾಡಿದರು. ಅದುಕೂಡ ಇಂಜುರಿ ಮಧ್ಯೆ ಎಂಬುದು ವಿಶೇಷ.ಪ್ಯಾಟ್ ಕಮ್ಮಿನ್ಸ್ ಅವರ ಓವರ್​ನಲ್ಲಿ ಅಜಿಂಕ್ಯ ರಹಾನೆ ಬೆರಳಿಗೆ ಚೆಂಡು ತಾಗಿ ಇಂಜುರಿಗೆ ತುತ್ತಾದರು. ಭಾರತೀಯ ಫಿಸಿಯೋ ತಕ್ಷಣವೇ ಮೈದಾನಕ್ಕೆ ಧಾವಿಸಿ ರಹಾನೆ ಅವರ ಬೆರಳಿಗೆ ಪಟ್ಟಿ ಸುತ್ತಿದರು. ಕೈ ಬೆರಳಿನ ಗಾಯದ ಮಧ್ಯೆಯೇ ರಹಾನೆ ತಂಡಕ್ಕೆ ನೆರವಾದರು.ಶತಕ ವಂಚಿರಾದರೂ ರಹಾನೆ 89 ರನ್ ಬಾರಿಸುವುದರೊಂದಿಗೆ ತಮ್ಮ ಹೆಸರಿನಲ್ಲಿ ವಿನೂತನ ದಾಖಲೆಯನ್ನು ಕೂಡ ಬರೆದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.ಆಸ್ಟ್ರೇಲಿಯಾ ವೇಗಿ ಮಿಚೆಲ್​ ಸ್ಟಾರ್ಕ್​ ಅವರು ರಹಾನೆ ಆಟವನ್ನು ಶ್ಲಾಘಿಸಿದ್ದಾರೆ. ವೇಗದ ಪಿಚ್​ನಲ್ಲಿ 89 ರನ್​ ಮಾಡುವ ಮೂಲಕ ಹೇಗೆ ಬ್ಯಾಟ್​ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಹಾನೆ ನಿಜವಾಗಿಯೂ ಚೆನ್ನಾಗಿ ಆಡಿದರು. ಆ ರೀತಿಯ ಇನ್ನಿಂಗ್ಸ್‌ಗಳನ್ನು ಅವರು ಕಟ್ಟಿದ್ದಾರೆ ಎಂದು ಹೇಳಿದ್ದಾರೆ.

source https://tv9kannada.com/photo-gallery/cricket-photos/ajinkya-rahane-injury-concerns-while-batting-in-the-second-innings-during-the-wtc-final-against-australia-vb-598020.html

Leave a Reply

Your email address will not be published. Required fields are marked *