
ಭಾರತ ಕ್ರಿಕೆಟ್ ತಂಡ ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (ICC World Test Championship) ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ (India vs Australia) ಆಡುತ್ತಿದೆ. ಈಗಾಗಲೇ 3 ದಿನಗಳು ಮುಗಿದಿದ್ದು, ಆಟ 4ನೇ ದಿನಕ್ಕೂ ಕಾಲಿಟ್ಟಿದೆ. ಆದರೂ ಈ ಪಂದ್ಯದಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದನ್ನು ಹೇಳುವುದು ಕಷ್ಟಕರವಾಗಿದೆ. ಆದರೆ ಪಂದ್ಯ ಆರಂಭದ ಮೊದಲ ದಿನದಿಂದಲೂ ಟೀಂ ಇಂಡಿಯಾಕ್ಕಿಂತ ಕೊಂಚ ಮೇಲುಗೈ ಸಾಧಿಸಿರುವ ಆಸ್ಟ್ರೇಲಿಯಾ 300 ರನ್ ಗಳಿಗೂ ಅಧಿಕ ಮುನ್ನಡೆ ಸಾಧಿಸಿದೆ. ಇನ್ನೊಂದೆಡೆ ಈ ಪಂದ್ಯದಲ್ಲಿ ಭಾರತ ತಂಡದಿಂದ ನಿರೀಕ್ಷಿಸಿದ ರೀತಿಯ ಆಟ ಹೊರಬಂದಿಲ್ಲ. ಈ ಮಧ್ಯೆ, ಪಾಕಿಸ್ತಾನದ ಮಾಜಿ ಆಟಗಾರ, ಭಾರತದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕೋಚ್ ಆಗಲು ನಾಲಾಯಕ್ ಎಂಬರ್ಥದಲ್ಲಿ ಮಾತನಾಡಿ ಟೀಂ ಇಂಡಿಯಾ ಅಭಿಮಾನಿಗಳನ್ನು ಕೆರಳಿಸಿದ್ದಾರೆ.
ಟೀಂ ಇಂಡಿಯಾವನ್ನು ಅದೇಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲುವಿನ ದಡ ಸೇರಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್, ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2021 ರಲ್ಲಿ ನಡೆದ ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾದ ದ್ರಾವಿಡ್ ಅವರ ಕೋಚಿಂಗ್ನಲ್ಲಿ ಭಾರತ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆದರೆ ಈ ಪ್ರಶಸ್ತಿಯ ಪಂದ್ಯದಲ್ಲಿ ದ್ರಾವಿಡ್ ಅವರ ತಂತ್ರವನ್ನು ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಬಸಿತ್ ಅಲಿ ಪ್ರಶ್ನಿಸಿದ್ದಾರೆ.
India vs Australia Live Score, WTC Final 2023 Day 4: ಆಸೀಸ್ 150 ರನ್ ಪೂರ್ಣ; ಲಬುಶೇನ್ ಔಟ್
‘ಕೋಚ್ ಆಗಿ ದ್ರಾವಿಡ್ ಬಿಗ್ ಜೀರೋ’
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿದ ಬಸಿತ್ ಅಲಿ, ನಾನೊಬ್ಬ ದ್ರಾವಿಡ್ ಅವರ ದೊಡ್ಡ ಅಭಿಮಾನಿ. ಅವರೊಬ್ಬ ಕ್ಲಾಸ್ ಪ್ಲೇಯರ್, ಲೆಜೆಂಡ್. ಅವರೊಬ್ಬ ಶ್ರೇಷ್ಠ ಬ್ಯಾಟ್ಸ್ ಮನ್ ಆದರೆ ಕೋಚ್ ಆಗಿ ಶೂನ್ಯ ಎಂದಿದ್ದಾರೆ. ಭಾರತದಲ್ಲಿ ಸ್ಪಿನ್ನರ್ಗಳಿಗೆ ನೆರವಾಗುವ ಪಿಚ್ಗಳನ್ನು ಸಿದ್ಧಪಡಿಸಿದ್ದೀರಿ. ನೀವು ಆಸ್ಟ್ರೇಲಿಯಾಕ್ಕೆ ಹೋದರೆ ನಿಮಗಲ್ಲಿ ಭಾರತದ ಪಿಚ್ಗಳನ್ನು ಹೊಲುವ ಪಿಚ್ಗಳು ಸಿಗುತ್ತವೆಯೇ? ಅಲ್ಲಿ ಬೌನ್ಸಿ ಪಿಚ್ಗಳು ಸಿಗುತ್ತವೆ. (ಇಲ್ಲಿ ವಾಸ್ತವವಾಗಿ ಅಲಿ, ಭಾರತ ಇನ್ನಾದರೂ ಸ್ಪಿನ್ನರ್ಗಳಿಗೆ ನೆರವಾಗುವ ಪಿಚ್ಗಳನ್ನು ಸಿದ್ದಪಡಿಸುವುದರಿಂದ ಹೊರಗೆ ಬರಬೇಕು ಎಂಬುದನ್ನು ವಿವರಿಸಲು ಯತ್ನಿಸಿದ್ದಾರೆ) ಹೀಗಾಗಿ ದ್ರಾವಿಡ್ ಯಾವ ರೀತಿಯ ಯೋಚನೆ ಮಾಡುತ್ತಿದ್ದಾರೆ ಎಂಬುದು ದೇವರು ಮಾತ್ರಬಲ್ಲ ಎಂದು ಬಸಿತ್ ದ್ರಾವಿಡ್ ಆಲೋಚನೆಯನ್ನು ಟೀಕಿಸಿದ್ದಾರೆ.
ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ರನ್ನು ಕಟುವಾಗಿ ಟೀಕಿಸಿದ ಅಲಿ, ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದಾಗಲೇ ಭಾರತ ಪಂದ್ಯವನ್ನು ಕಳೆದುಕೊಂಡಿತು. ಭಾರತ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಕೇವಲ ಎರಡು ಗಂಟೆಗಳಲ್ಲಿ ತೆಗೆದುಕೊಂಡಿತು. ಅದಕ್ಕಾಗಿಯೇ ಅವರು ಮೊದಲು ಬೌಲಿಂಗ್ ಮಾಡಿದರು ಎಂದಿದ್ದಾರೆ. ಹಾಗೆಯೇ ಭಾರತದ ಬೌಲಿಂಗ್ ಟೆಸ್ಟ್ ಮಟ್ಟದ್ದಲ್ಲ, ಐಪಿಎಲ್ ಮಟ್ಟದ್ದಾಗಿದೆ ಎಂದು ಭಾರತದ ಬೌಲಿಂಗ್ ವಿಭಾಗವನ್ನು ಅಲಿ ಟೀಕಿಸಿದ್ದಾರೆ.
ಸಂಕಷ್ಟದಲ್ಲಿ ಭಾರತ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರ ಶತಕಗಳ ನೆರವಿನಿಂದ 469 ರನ್ ಗಳಿಸಿತು. ಈ ಸ್ಕೋರ್ನ ಮುಂದೆ ಟೀ. ಇಂಡಿಯಾ ತತ್ತರಿಸಿ 296 ರನ್ ಗಳಿಸಲಷ್ಟೇ ಶಕ್ತವಾಯಿತು, ಅದೂ ಕೂಡ ಅಜಿಂಕ್ಯ ರಹಾನೆ ಅವರ 89 ರನ್ಗಳ ಅದ್ಭುತ ಇನ್ನಿಂಗ್ಸ್ನಿಂದ. ಸದ್ಯ 4ನೇ ದಿನದಾಟ ಆರಂಭಿಸಿರುವ ಆಸ್ಟ್ರೇಲಿಯಾ ಈ ಸುದ್ದಿ ಬರೆಯುವ ವೇಳೆಗೆ 335 ರನ್ಗಳ ಮುನ್ನಡೆಯಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ