3 ರನ್’ಗೆ 5 ವಿಕೆಟ್ ಕಿತ್ತ ಟೀಂ ಇಂಡಿಯಾದ ಈ ಸೂಪರ್ ಬೌಲರ್: ನಾರಿಶಕ್ತಿಗೆ ಇತಿಹಾಸ ಬರೆಯಿತು ಭಾರತ…

ACC Womens Emerging Asia Cup 2023: ಯಾವುದೇ ಪಂದ್ಯವನ್ನು ಆಡದೆ ಟೀಂ ಇಂಡಿಯಾ ಫೈನಲ್ ತಲುಪಿತ್ತು. ಭಾರತ ಎ ಮಹಿಳಾ ಮತ್ತು ಶ್ರೀಲಂಕಾ ಎ ಮಹಿಳೆಯರ ನಡುವಿನ ಟೂರ್ನಿಯ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ನಡೆಯಲಿಲ್ಲ. ಇದಾದ ಬಳಿಕ ಟೀಂ ಇಂಡಿಯಾ ಫೈನಲ್‌ ಗೆ ಪ್ರವೇಶ ಪಡೆಯಿತು.

ACC Womens Emerging Asia Cup 2023: ಟೀಮ್ ಇಂಡಿಯಾ ಮಹಿಳಾ ಉದಯೋನ್ಮುಖ ಏಷ್ಯಾ ಕಪ್ 2023 ಪ್ರಶಸ್ತಿಯನ್ನು ಗೆದ್ದಿದೆ. ಹಾಂಕಾಂಗ್‌ ನಲ್ಲಿ ನಡೆದ ಈ ಟೂರ್ನಿಯ ಫೈನಲ್‌ ನಲ್ಲಿ ಭಾರತ ಎ ಮಹಿಳಾ ತಂಡ, ಬಾಂಗ್ಲಾದೇಶ ಎ ಮಹಿಳಾ ತಂಡವನ್ನು ಸೋಲಿಸಿತು. ಮಹಿಳೆಯರ ಉದಯೋನ್ಮುಖ ಏಷ್ಯಾ ಕಪ್ 2023 ರಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು.

ಇತಿಹಾಸ ಸೃಷ್ಟಿ:

ಯಾವುದೇ ಪಂದ್ಯವನ್ನು ಆಡದೆ ಟೀಂ ಇಂಡಿಯಾ ಫೈನಲ್ ತಲುಪಿತ್ತು. ಭಾರತ ಎ ಮಹಿಳಾ ಮತ್ತು ಶ್ರೀಲಂಕಾ ಎ ಮಹಿಳೆಯರ ನಡುವಿನ ಟೂರ್ನಿಯ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ನಡೆಯಲಿಲ್ಲ. ಇದಾದ ಬಳಿಕ ಟೀಂ ಇಂಡಿಯಾ ಫೈನಲ್‌ ಗೆ ಪ್ರವೇಶ ಪಡೆಯಿತು. ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ಈ ಗುರಿಗೆ ಉತ್ತರವಾಗಿ ಮಹಿಳಾ ಬಾಂಗ್ಲಾದೇಶ-ಎ ತಂಡ ಕೇವಲ 96 ರನ್ ಗಳಿಸಲಷ್ಟೇ ಶಕ್ತವಾಯಿತು.

ಟೂರ್ನಿಯಲ್ಲಿ ಟೀಂ ಇಂಡಿಯಾದ ಪಯಣ ಹೀಗಿತ್ತು…

ವುಮೆನ್ ಇಂಡಿಯಾ ಎ (ಭಾರತ ಎ ಮಹಿಳಾ) ಪಂದ್ಯಾವಳಿಯ ಮೊದಲ ಪಂದ್ಯವನ್ನು ಹಾಂಗ್ ಕಾಂಗ್ ವಿರುದ್ಧ ಆಡಿತು, ಇದರಲ್ಲಿ ತಂಡವು 9 ವಿಕೆಟ್‌ ಗಳಿಂದ ಗೆದ್ದಿತು. ಇದೇ ವೇಳೆ ನೇಪಾಳ ಹಾಗೂ ಪಾಕಿಸ್ತಾನ-ಎ ತಂಡದ ವಿರುದ್ಧದ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಇದಾದ ಬಳಿಕ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ಮಹಿಳಾ ತಂಡವನ್ನು ಎದುರಿಸಬೇಕಿತ್ತು. ಆದರೆ ಮಳೆಯಿಂದಾಗಿ ಈ ಪಂದ್ಯವನ್ನು ಆಡಲಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಿನ್ನೆಲೆಯಲ್ಲಿ ಫೈನಲ್‌ ಗೆ ಲಗ್ಗೆ ಇಡಲು ಸಾಧ್ಯವಾಯಿತು.

ಶ್ರೇಯಾಂಕಾ ಪಾಟೀಲ್ ಮತ್ತೊಮ್ಮೆ ಅದ್ಭುತ ಪ್ರದರ್ಶನ:

ಹಾಂಕಾಂಗ್ ವಿರುದ್ಧ ಭಾರತದ ಮಹಿಳಾ ಬೌಲರ್ ಶ್ರೇಯಾಂಕಾ ಪಾಟೀಲ್ ಗೆಲುವಿನ ಹೀರೋ ಆದರು. ಈ ಪಂದ್ಯದಲ್ಲಿ ಶ್ರೇಯಾಂಕಾ 3 ಓವರ್‌ಗಳಲ್ಲಿ ಕೇವಲ 3 ರನ್ ನೀಡಿ 5 ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್ ಅವರ ಈ ಅದ್ಭುತ ಬೌಲಿಂಗ್‌ನಿಂದಾಗಿ ಇಡೀ ಹಾಂಕಾಂಗ್ ತಂಡ ಕೇವಲ 34 ರನ್‌ ಗಳಿಗೆ ಆಲೌಟ್ ಆಯಿತು. ಶ್ರೇಯಾಂಕಾ ಪಾಟೀಲ್ ಅವರ ಈ ಅದ್ಭುತ ಪ್ರದರ್ಶನ ಫೈನಲ್‌ನಲ್ಲಿಯೂ ಮುಂದುವರೆದಿದೆ. ಬಾಂಗ್ಲಾದೇಶ ವಿರುದ್ಧ ಶ್ರೇಯಾಂಕಾ ಪಾಟೀಲ್ 4 ವಿಕೆಟ್ ಪಡೆದರು.

Source : https://zeenews.india.com/kannada/sports/asia-cup-2023-team-india-created-history-and-won-the-emerging-asia-cup-2023-title-141430

Leave a Reply

Your email address will not be published. Required fields are marked *