2000 ರೂ. ಮುಖಬೆಲೆಯ ನೋಟುಗಳಿವೆಯಾ? Amazon pay ಮೂಲಕ ಮನೆಯಲ್ಲೇ ಕುಳಿತು ಬದಲಾಯಿಸಿಕೊಳ್ಳಿ!

2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯವುದಾಗಿ ಆರ್​ಬಿಐ ಘೋಷಿಸಿದೆ. ನಿಮ್ಮ ಬಳಿಯೂ 2000 ರೂಪಾಯಿ ನೋಟುಗಳಿದ್ದರೆ ಅವನ್ನು ನೀವು ಅಮೆಜಾನ್ ಪೇ ಮೂಲಕ ಬದಲಾಯಿಸಿಕೊಳ್ಳಬಹುದು.

ನವದೆಹಲಿ: 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಮೇ 19 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಿಸಿರುವುದು ಎಲ್ಲರಿಗೂ ತಿಳಿದ ಸಂಗತಿ.

ನೋಟು ಬದಲಾವಣೆಗೆ ಸೆ. 30ರವರೆಗೆ ಕಾಲಾವಕಾಶ ನೀಡಲಾಗಿದೆ. ಜನರು ಬ್ಯಾಂಕ್‌ಗೆ ಹೋಗಿ ತಮ್ಮ ನೋಟುಗಳನ್ನು ಬದಲಾಯಿಸಬಹುದು. ಆದರೆ ಬ್ಯಾಂಕ್‌ಗಳಿಗೆ ಹೋಗುವ ಬದಲು ಜನ ಪೆಟ್ರೋಲ್ ಪಂಪ್‌ಗಳು ಮತ್ತು ಚಿನ್ನದ ಅಂಗಡಿಗಳಲ್ಲಿ ತಮ್ಮ 2000 ರೂ ಮುಖಬೆಲೆಯ ನೋಟುಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಈಗ 2000 ರೂ. ನೋಟು ಬದಲಾಯಿಸಲು ಹೊಸ ಮಾರ್ಗವೊಂದು ತೆರೆದುಕೊಂಡಿದೆ. ಅದೂ ಕೂಡ ನೀವು ಮನೆಯಲ್ಲೇ ಕುಳಿತು ನೋಟು ಬದಲಾಯಿಸಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ.

ದೇಶದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಈಗ 2000 ನೋಟು ಬದಲಾಯಿಸುವ ಸೌಲಭ್ಯವನ್ನು ಪರಿಚಯಿಸಿದೆ. ಇದಕ್ಕಾಗಿ ಅಮೆಜಾನ್ ಬುಧವಾರದಿಂದ ಅಮೆಜಾನ್ ಪೇ ಕ್ಯಾಶ್ ಲೋಡ್ ಸೌಲಭ್ಯವನ್ನು ಪ್ರಾರಂಭಿಸಿದೆ.

ಇದರ ಅಡಿಯಲ್ಲಿ ನೀವು ರೂ 2000 ನೋಟುಗಳನ್ನು Amazon Pay ನಲ್ಲಿ ಠೇವಣಿ ಮಾಡಬಹುದು. ಹೀಗೆ ಒಂದು ತಿಂಗಳಲ್ಲಿ 50 ಸಾವಿರ ರೂಪಾಯಿವರೆಗೆ ಠೇವಣಿ ಮಾಡಬಹುದು. ಹಣ ಠೇವಣಿ ಮಾಡಿದ ನಂತರ, ಅಮೆಜಾನ್ ಡೆಲಿವರಿ ಏಜೆಂಟ್‌ಗಳು ನಿಮ್ಮ ಮನೆಗೆ ಬಂದು ಹಣ ಸಂಗ್ರಹಿಸುತ್ತಾರೆ ಮತ್ತು ಹಣವನ್ನು ನಿಮ್ಮ Amazon Pay ಬ್ಯಾಲೆನ್ಸ್‌ಗೆ ಕ್ರೆಡಿಟ್ ಮಾಡುತ್ತಾರೆ.

ಇದರ ಹೊರತಾಗಿ, ನೀವು ಅಮೆಜಾನ್​ನಿಂದ ಯಾವುದೇ ಸರಕುಗಳನ್ನು ಖರೀದಿಸಿದರೆ ಅಂಥ ಸಂದರ್ಭದಲ್ಲಿ ಪೇಮೆಂಟ್​ ಮಾಡುವಾಗ ನೀವು ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಈ ವೈಶಿಷ್ಟ್ಯವು Amazon Pay ಬ್ಯಾಲೆನ್ಸ್‌ನಲ್ಲಿ ಹಣ ಠೇವಣಿ ಮಾಡುವ ಸೌಲಭ್ಯವನ್ನು ನೀಡುತ್ತದೆ. ಸರಕು ನಿಮ್ಮ ಮನೆ ಬಾಗಿಲಿಗೆ ಬಂದಾಗ ನಿಮ್ಮ Amazon Pay ಬ್ಯಾಲೆನ್ಸ್‌ನಲ್ಲಿ ನೀವು ಹಣವನ್ನು ಠೇವಣಿ ಮಾಡಬೇಕೆಂದು ಡೆಲಿವರಿ ಏಜೆಂಟ್‌ಗೆ ತಿಳಿಸಿ. ಅವರಿಗೆ ನಗದು ರೂಪದಲ್ಲಿ 2,000 ನೋಟು ನೀಡಿ. ಸರಕುಗಳ ಬೆಲೆಯನ್ನು ಕಡಿತಗೊಳಿಸಿದ ನಂತರ, ಉಳಿದ ಹಣವು ನಿಮ್ಮ Amazon Pay ಬ್ಯಾಲೆನ್ಸ್‌ನಲ್ಲಿ ಬರುತ್ತದೆ. ಇದರ ನಂತರ, ನೀವು Amazon ಅಪ್ಲಿಕೇಶನ್‌ಗೆ ಹೋಗುವ ಮೂಲಕ ನಿಮ್ಮ Amazon Pay ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

ಅಮೆಜಾನ್​​ ಅಪ್ಲಿಕೇಶನ್‌ನಲ್ಲಿ ಶಾಪಿಂಗ್ ಮಾಡಲು ನೀವು ನಿಮ್ಮ Amazon Pay ಬ್ಯಾಲೆನ್ಸ್ ಅನ್ನು ಬಳಸಬಹುದು. ಅಲ್ಲದೆ ಅಂಗಡಿಗಳಲ್ಲಿ ಪೇಮೆಂಟ್​ ಮಾಡುವಾಗ ಕೂಡ ಸ್ಕ್ಯಾನ್ ಮಾಡಬಹುದು. ಇದಲ್ಲದೆ ನೀವು ಈ ಬ್ಯಾಲೆನ್ಸ್‌ನಿಂದ ಹಣವನ್ನು ವರ್ಗಾಯಿಸಬಹುದು ಮತ್ತು ನೀವು ಈ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. Amazon Pay ಎನ್ನುವುದು ಆನ್‌ಲೈನ್ ಪಾವತಿ ಪ್ರಕ್ರಿಯೆ ಸೇವೆಯಾಗಿದೆ. ಬಳಸಿ ಅಮೆಜಾನ್ ಗ್ರಾಹಕರು ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಖರೀದಿಗಳನ್ನು ಮಾಡಬಹುದು.

Source : https://m.dailyhunt.in/news/india/kannada/etvbhar9348944527258-epaper-etvbhkn/2000+ru+mukhabeleya+notugaliveya+amazon+pay+mulaka+maneyalle+kulitu+badalaayisikolli+-newsid-n511772046?listname=newspaperLanding&topic=business&index=5&topicIndex=8&mode=pwa&action=click

Views: 0

Leave a Reply

Your email address will not be published. Required fields are marked *