ಇನ್ಮೇಲೆ ಚಿಕನ್​ ಅನ್ನು ಪೌಲ್ಟ್ರಿಯಲ್ಲಿ ಅಲ್ಲ, ಪ್ರಯೋಗಾಲಯದಲ್ಲಿ ಬೆಳೆಯಬಹುದು; ಇದು ಕೋಶ ಕೃಷಿ ಕೋಳಿ ಉತ್ಪಾದನೆ!

ಕೋಶ ಕೃಷಿ ಮೂಲಕ ಕೋಳಿ ಬೆಳೆಯಲು ಅಮೆರಿಕದ ಕೃಷಿ ಇಲಾಖೆ ಅನುಮತಿ ನೀಡಿದ್ದು, ಈ ಚಿಕನ್​ ರುಚಿ ಹೇಗಿರಲಿದೆ ಎಂಬುದು ಇದೀಗ ಅನೇಕರ ಪ್ರಶ್ನೆಯಾಗಿದೆ.

ಕ್ಯಾಲಿಫೋರ್ನಿಯಾ: ವಿಜ್ಞಾನದಲ್ಲಿ ಹೊಸ ಮೈಲಿಗಲ್ಲುಗಳತ್ತ ಸಾಗುತ್ತಿರುವ ಮನುಷ್ಯ ಇದೀಗ ಮಾಂಸ ಕೃಷಿಗೂ ಮುಂದಾಗಿದ್ದಾನೆ.

ಪ್ರಾಣಿಗಳ ಜೀವಕೋಶಗಳನ್ನು ಬಳಕೆ ಮಾಡಿ, ಸ್ವತಃ ಮಾಂಸವನ್ನು ಬೆಳೆದಿದ್ದಾನೆ. ಈ ವಿಷಯ ಕೇಳಿದಾಕ್ಷಣ ಅನೇಕ ಚಿಕನ್​ ಪ್ರಿಯರು ಮುಖ ಕಿವುಚಬಹುದು. ಆದರೆ, ಅವರಿಂದ ಬರುವ ಮತ್ತೊಂದು ಪ್ರಶ್ನೆ ಹೇಗಿರಲಿದೆ ಅದರ ರುಚಿ ಎಂಬುದು. ಕಾರಣ ಈ ಚಿಕನ್​ (ಕೋಳಿ ಮಾಂಸ) ಕೋಳಿಯಿಂದಲೇ ಬಂದಿರುವುದಿಲ್ಲ. ಇದು ಕೋಶ ಕೃಷಿಯ ಚಿಕನ್​ ಆಗಿರಲಿದೆ.

ಅಮೆರಿಕದ ಕೃಷಿ ಇಲಾಖೆ ಬುಧವಾರ ಕ್ಯಾಲಿಫೋರ್ನಿಯಾ ಎರಡು ಆಹಾರ ಘಟಕಗಳಾದ ಅಪ್​ಸೈಡ್​​ ಫುಡ್​ ಮತ್ತು ಗುಡ್​​ ಮೀಟ್​​ಗೆ ಹಸಿರು ನಿಶಾನೆ ತೋರಿದೆ. ಜೊತೆಗೆ ಇದು ಮಾಂಸ ಉತ್ಪಾದನೆಯ ರುಚಿ ಸವಿಯಲು ಕೂಡ ಉತ್ಸಾಹ ತೋರಿದೆ. ಈ ಮೂಲಕ ಲಕ್ಷಾಂತರ ಪ್ರಾಣಿಗಳ ವಧೆಯನ್ನು ತಪ್ಪಿಸುವ ಗುರಿಯನ್ನು ಇದೆ ಹೊಂದಿದೆ. ಜೊತೆಗೆ ಹುಲ್ಲುಗಾವಲಿನ ನಾಶದ ಪರಿಣಾಮ, ಆ ಪ್ರಾಣಿಗಳಿಗೆ ಆಹಾರ ಬೆಳೆಸುವ ಚಿಂತೆ ಮತ್ತು ಪ್ರಾಣಿಗಳ ತ್ಯಾಜ್ಯಕ್ಕೆ ಇದು ಮುಕ್ತಿ ಹಾಡಲಿದೆ ಎಂಬ ಲೆಕ್ಕಾಚಾರ ಕೂಡ ನಡೆಸಲಾಗಿದೆ.

ಮಾಂಸದ ವಿರೋಧಾಭಾಸ: ಜೀವನ ಪರ್ಯಾಂತ ಮಾಂಸ ಪ್ರಿಯರಾದರೂ, ಮಾಂಸವನ್ನು ತಿನ್ನುವಾಗ ಅದರ ಹಿಂದಿನ ಪರಿಣಾಮಗಳನ್ನು ನೆನೆದು ಕೆಲವರು ದೋಷಿ ಭಾವನೆಗೆ ಒಳಗಾಗುತ್ತಾರೆ. ಕಾರಣ ಮಾಂಸಗಳ ವಧೆ ಸಂದರ್ಭದಲ್ಲಿ ಇದರಿಂದ ಕಟುಕರು ಅನೇಕ ರೋಗಕ್ಕೆ ತುತ್ತಾಗುವುದು ಸುಳ್ಳಲ್ಲ. ಅಲ್ಲದೇ, ನಾವು ಮಾಂಸ ತಿನ್ನಲು ಪ್ರಾಣಿಗಳನ್ನು ಬಲಿ ಕೊಡಬೇಕು ಎಂಬ ಮಾನಸಿಕ ಸಂಘರ್ಷ ಅನೇಕರಲ್ಲಿ ಇರುತ್ತದೆ. ಇಂತಹವರಿಗೆ ಈ ಮಾಂಸ ವರವಾಗಲಿದೆ. ಈ ಕುರಿತು ಮಾತನಾಡಿರುವ ಅನೇಕ ಮಂದಿ ಇದರ ರುಚಿ ಸವಿಯಲು ಉತ್ಸುಕರಾಗಿದ್ದಾರೆ. ವಿಭಿನ್ನ ಬಗೆಯ ಮಾಂಸವನ್ನು ತಿನ್ನಲು ಉತ್ಸಾಹ ಹೊಂದಿದ್ದೇವೆ. ಈ ಬಗ್ಗೆ ಕುತೂಹಲ ಇದ್ದು, ಇದು ನೈಜ ಮಾಂಸದಂತೆ ರುಚಿ ನೀಡಲಿದೆಯಾ ಎಂಬ ಬಗ್ಗೆ ಕಾಯುತ್ತಿದ್ದೇವೆ ಎಂದಿದ್ದಾರೆ.

ಏನಿದರ ಕೃತಕ ಮಾಂಸ : ದಪಡ್ಡ ತೊಟ್ಟಿಯಲ್ಲಿ ಬೆಳೆಯುವ ಕೋಶಗಳಿಂದಾಗಿ ಈ ಕೃಷಿ ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಇದು ಕೇವಲ ಆಕಾರ ಮತ್ತು ರಚನೆಯಾಗಿರುತ್ತದೆ. ಆದರೆ, ಈ ಮಾಂಸವೂ ನೈಜ ಮಾಂಸದಂತೆ ರುಚಿಯಾಗಿರುತ್ತದೆಯೇ ಇಲ್ಲವೇ ಎಂಬುದು ಅಂತಿಮವಾಗಿ ತೀರ್ಮಾನವಾಗಬೇಕಿದೆ.

ಬಾಯಿ ರುಚಿ ಪ್ರಮುಖ: ಜನವರಿಯಲ್ಲಿ ಕ್ಯಾಲಿಫೋರ್ನಿಯಾದಲ್ಲಿನ ಎಮೆರಿವಿಲ್ಲೆಯ ಅಪ್​ಸೈಡ್​ ಫುಡ್​ ತಯಾರಕರ ಕಚೇರಿಗೆ ಖ್ಯಾತ ಶೆಫ್​​ ಸೆಜ್​ ವೆವರ್​ ಭೇಟಿ ನೀಡಿದ್ದರು. ಈ ವೇಳೆ ಅವರು ಬೆಳೆದ ಚಿಕನ್​ ಬ್ರೆಸ್​​ (ಕೋಳಿಯ ಎದೆಯ ಭಾಗ)ವನ್ನು ಬಿಳಿ ವೈನ್​, ಬಟರ್​ ಸಾಸ್​ ಜೊತೆಗೆ ಟೊಮೆಟೊ, ಕೇಪರ್ಸ್​​ ಮತ್ತು ಹಸಿರುವ ಮೆಣಸಿನಕಾಯಿಯೊಂದಿಗೆ ತಯಾರಿಸಿದರು. ಇದರ ಘಮ ಮಾತ್ರ ಅದ್ಬುತವಾಗಿತ್ತು. ಇದರ ರುಚಿ ಕೂಡ ಅದ್ಬುತವಾಗಿದ್ದು, ವಿನ್ಯಾಸ ಕೂಡ ಚೆನ್ನಾಗಿ ಮೂಡಿ ಬಂದಿದ್ದು, ಮನೆಯಲ್ಲಿ ಮಾಡಿದ ಚಿಕನ್​ ಬ್ರೆಸ್ಟ್​ ರೀತಿಯೇ ಇತ್ತು ಎಂದಿದ್ದರು.

ಇನ್ನು, ಕಳೆದ ವಾರ ಆಲ್ಮೆಡಾ, ಕ್ಯಾಲಿಫೋರ್ನಿಯಾದ ಗುಡ್​ ಮೀಟ್​ ಘಟಕಕ್ಕೆ ಭೇಟಿ ನೀಡಿ, ಚಿಕನ್​ ಉತ್ಪಾದನೆಯನ್ನು ಗಮನಿಸಿದರು. ಶೆಫ್​ ಜ್ಯಾಕ್​​ ಟೈಂಡಲ್​, ಮಯೋನಿಸ್, ಗೋಲ್ಡನ್​ ರೈಸಿನ್​ ಮತ್ತು ವಾಲ್ನಟ್​​ ಜೊತೆಗೆ ಸ್ಮೂಕಡ್​​ ಚಿಕನ್​ ಸೇವಿಸಿದರು. ಈ ಚಿಕನ್​ ಖಾದ್ಯವೂ, ಚಿಕನ್​ ಬ್ರೆಸ್ಟ್​​ಗಿಂತ ಅದ್ಬುತವಾಗಿತ್ತು ಎಂದರು.

ಈ ಚಿಕನ್​ ಎಲ್ಲರ ಗಮನ ಸೆಳೆದರೂ ಇದು ಅನೇಕ ಸವಾಲುಗಳನ್ನು ಹೊಂದಿದೆ. ಉತ್ಪಾದನೆಯನ್ನು ಹೇಗೆ ಹೆಚ್ಚಿಸುವುದು ಮತ್ತು ವೆಚ್ಚವನ್ನು ಹಿಂತಿರುಗಿಸುವುದು ಹೇಗೆ ಎಂಬುದನ್ನು ತಜ್ಞರು ಕೇಳುತ್ತಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/inmele+chikan+annu+poultriyalli+alla+prayogaalayadalli+beleyabahudu+idu+kosha+krushi+koli+utpaadane+-newsid-n511738544?listname=newspaperLanding&topic=scienceandtechnology&index=2&topicIndex=7&mode=pwa&action=click

Leave a Reply

Your email address will not be published. Required fields are marked *