SBI WhatsApp Banking: SBI ಬಳಕೆದಾರರು ಪ್ರಮುಖ ಬ್ಯಾಂಕಿಂಗ್ ಸೇವೆಗಳಾದ ಬ್ಯಾಲೆನ್ಸ್ ಚೆಕ್, ಮಿನಿ ಸ್ಟೇಟ್‌ಮೆಂಟ್, ಠೇವಣಿ ಮಾಹಿತಿ, ಪಿಂಚಣಿ ಸ್ಲಿಪ್ ಮುಂತಾದವುಗಳನ್ನು ಮೆಟಾ ಒಡೆತನದ WhatsApp ಮೂಲಕ ಪಡೆದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ WhatsApp ಬ್ಯಾಂಕಿಂಗ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ತನ್ನ ಗ್ರಾಹಕರಿಗೆ WhatsApp ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದೆ. ಬಳಕೆದಾರರು ಪ್ರಮುಖ ಬ್ಯಾಂಕಿಂಗ್ ಸೇವೆಗಳಾದ ಬ್ಯಾಲೆನ್ಸ್ ಚೆಕ್, ಮಿನಿ ಸ್ಟೇಟ್‌ಮೆಂಟ್, ಠೇವಣಿ ಮಾಹಿತಿ, ಪಿಂಚಣಿ ಸ್ಲಿಪ್ ಮುಂತಾದವುಗಳನ್ನು ಮೆಟಾ ಒಡೆತನದ WhatsApp ಮೂಲಕ ಪಡೆದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರತುಪಡಿಸಿ ಇತರ ಹಲವು ಬ್ಯಾಂಕ್‌ಗಳು ಸಹ ತಮ್ಮ ಸೇವೆಗಳನ್ನು ಸುಲಭ ಮತ್ತು ಬಳಕೆದಾರ ಸ್ನೇಹಿಯಾಗಿಸಲು WhatsApp ಬ್ಯಾಂಕಿಂಗ್ ಅಳವಡಿಸಿಕೊಂಡಿವೆ. ಸದ್ಯಕ್ಕೆ SBI WhatsApp ಬ್ಯಾಂಕಿಂಗ್ ಉಳಿತಾಯ ಖಾತೆ, ಚಾಲ್ತಿ ಖಾತೆ, NRI ಖಾತೆಗಳು ಮತ್ತು CC-OD ಖಾತೆಗಳ ಮಾಲೀಕರಿಗೆ ಮಾತ್ರ ಲಭ್ಯವಿವೆ.
WhatsApp ಬ್ಯಾಂಕಿಂಗ್ ಬಳಸಿಕೊಂಡು ಮಿನಿ SBI ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಹೇಗೆ generate ಮಾಡುವುದು ಎಂಬುದರ ಕುರಿತು ತಿಳಿಯಿರಿ.
SBI WhatsApp ಬ್ಯಾಂಕಿಂಗ್: ನೀಡಲಾದ ಸೇವೆಗಳ ಪಟ್ಟಿ
ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಗ್ರಾಹಕರಿಗೆ ಈ ಕೆಳಗಿನ ಸೇವೆಗಳನ್ನು ಪಡೆಯಬಹುದು:
ಬ್ಯಾಲೆನ್ಸ್ ಪರಿಶೀಲನೆ: ಬಳಕೆದಾರರು ಚಾಲ್ತಿ ಖಾತೆಯ ಬ್ಯಾಲೆನ್ಸ್ ಅನ್ನು ತ್ವರಿತವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ.
ಮಿನಿ ಸ್ಟೇಟ್‌ಮೆಂಟ್: SBI WhatsApp ಬ್ಯಾಂಕಿಂಗ್ ಬಳಕೆದಾರರಿಗೆ ಒಂದೇ ಕ್ಲಿಕ್‌ನಲ್ಲಿ ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಲು ಇದು ಅನುಮತಿಸುತ್ತದೆ.
ಪಿಂಚಣಿ ಸ್ಲಿಪ್ ಸೇವೆ: ನಿವೃತ್ತ ನೌಕರರು ಪಿಂಚಣಿ ಸ್ಲಿಪ್‌ಗಳನ್ನು ಪಡೆಯುವ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ವಾಟ್ಸಾಪ್ ಬ್ಯಾಂಕಿಂಗ್ ನೋಂದಣಿ ನಂತರ ಅವರು ಇದನ್ನು ಸುಲಭವಾಗಿ ಪಡೆಯಬಹುದು.
ಸಾಲದ ಮಾಹಿತಿ: ಗೃಹ ಸಾಲ, ಶೈಕ್ಷಣಿಕ ಸಾಲ, ಕಾರು ಖರೀದಿ ಸಾಲ, ಚಿನ್ನದ ಸಾಲ ಮುಂತಾದವುಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿಯು ಈ ಸೇವೆಯ ಮೂಲಕ ಲಭ್ಯವಿರುತ್ತದೆ.
ಠೇವಣಿ ಮಾಹಿತಿ: ಉಳಿತಾಯ ಖಾತೆ, ಮರುಕಳಿಸುವ(recurring) ಠೇವಣಿ, ಅವಧಿ ಠೇವಣಿ ಮುಂತಾದ ಎಲ್ಲಾ ರೀತಿಯ ಠೇವಣಿ ಮಾಹಿತಿಯನ್ನು WhatsApp ಬ್ಯಾಂಕಿಂಗ್ ಮೂಲಕ ಪಡೆಯಬಹುದು.
ಮೇಲೆ ತಿಳಿಸಿದ ಸೇವೆಗಳ ಹೊರತಾಗಿ WhatsApp ಬ್ಯಾಂಕಿಂಗ್‌ನಲ್ಲಿ ಸಿಗುವ ಇತರ ಸೇವೆಗಳು:
ಬ್ಯಾಂಕಿಂಗ್ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡುವುದು
ಹತ್ತಿರದ ಎಟಿಎಂ ಪತ್ತೆ
NRI ಸೇವೆಗಳು
ತ್ವರಿತ ಖಾತೆಗಳನ್ನು ತೆರೆಯುವ ಮಾಹಿತಿ
ಸಾಲ ಸೌಲಭ್ಯ ಮಾಹಿತಿ
ಸಂಪರ್ಕಗಳ ಮಾಹಿತಿ ಮತ್ತು ಕುಂದುಕೊರತೆ ಪರಿಹಾರ
ಬ್ಯಾಂಕ್ ಹಾಲಿಡೇ ಕ್ಯಾಲೆಂಡರ್
ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಬಗ್ಗೆ ಮಾಹಿತಿ
ಕದ್ದ/ಕಳೆದುಹೋದ ಕಾರ್ಡ್‌ಗಳ ಮಾಹಿತಿ
ವಿವರವಾದ ಮಾಹಿತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
SMS ಮೂಲಕ ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್‌ಗಾಗಿ ನೋಂದಾಯಿಸಲು ಕ್ರಮಗಳು:
- ನಿಮ್ಮ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ತೆರೆಯಿರಿ.
- ಹೊಸ ಸಂದೇಶವನ್ನು ರಚಿಸಿ ಮತ್ತು WAREG>ಬ್ಯಾಂಕ್ ಖಾತೆ ಸಂಖ್ಯೆಯನ್ನು ಟೈಪ್ ಮಾಡಿ.
- ಈಗ ಬ್ಯಾಂಕಿನಲ್ಲಿ ನೋಂದಾಯಿಸಿರುವ ನಿಮ್ಮ ಮೊಬೈಲ್ ಸಂಖ್ಯೆಯಿಂದ +917208933148ಗೆ ಈ ಸಂದೇಶವನ್ನು ಕಳುಹಿಸಿ.
- ನೋಂದಣಿ ಯಶಸ್ವಿಯಾದರೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ WhatsApp ಖಾತೆಯಲ್ಲಿ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.
WhatsAppನಲ್ಲಿ SBI WhatsApp ಬ್ಯಾಂಕಿಂಗ್ ಸೇವೆಗಳನ್ನು ಹೇಗೆ ಬಳಸುವುದು?
ಒಮ್ಮೆ ನಿಮ್ಮ SBI WhatsApp ಬ್ಯಾಂಕಿಂಗ್ ನೋಂದಣಿ ಯಶಸ್ವಿಯಾದರೆ, ಯಾವುದೇ ಸೇವೆಗಳನ್ನು ಪ್ರವೇಶಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
- +919022690226 ಗೆ ‘ Hi ‘ ಎಂದು WhatsApp ಸಂದೇಶವನ್ನು ಕಳುಹಿಸಿ.
- ನೀವು ಎಲ್ಲಾ SBI ಬ್ಯಾಂಕಿಂಗ್ ಸೇವೆಗಳಿಗೆ ಆಯ್ಕೆಗಳನ್ನು ಪಡೆಯುತ್ತೀರಿ.
- ಚಾಟ್‌ಬಾಟ್‌ನಿಂದ ಸೂಚಿಸಲಾದ ಸೂಚನೆಗಳನ್ನು ಅನುಸರಿಸಿ ಮತ್ತು ಯಾವುದೇ ಸೇವೆಗಳನ್ನು ಸುಲಭವಾಗಿ ಪ್ರವೇಶಿಸಿ.