ಫುಡ್‌ ಅಡ್ಡಾ: ಬಿಸಿಲಿರಲಿ, ಮಳೆಯಿರಲಿ ಒಮ್ಮೆ ಬೂಂದಿ ಕಡಿ ಮಾಡಿ ನೋಡಿ.. ಬಾಯಿ ಚಪ್ಪರಿಸಿ ತಿನ್ನುವರು!

Boondi Kadhi Recipe: ಹೆಚ್ಚಿನ ಜನರು ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ಇಷ್ಟಪಡುವುದಿಲ್ಲ. ಚಳಿಗಾಲದಲ್ಲಿ ಬಿಸಿ ಅನ್ನದ ಜೊತೆ ಈ ಕಡಿ ತಿಂದರೆ ಬಾಯಿಗೆ ರುಚಿ ನೀಡುತ್ತೆ.   

Boondi Kadhi Recipe: ಬೇಸಿಗೆಯಿರಲಿ ಅಥವಾ ಚಳಿಗಾಲವಾಗಿರಲಿ ಕಡಿ ರೈಸ್  ಆರಾಮದಾಯಕ ಆಹಾರವಾಗಿದೆ. ಇದನ್ನು ತಯಾರಿಸಲು ತುಂಬಾ ಸುಲಭವಾಗಿದೆ. ಮಾನ್ಸೂನ್‌ನಲ್ಲಿ ಮಳೆಯ ನಡುವೆ ಈ ಭಕ್ಷ್ಯ ಸವಿಯುತ್ತಿದ್ದರೆ ನಿಮ್ಮ ನಾಲಿಗೆ ಜೊತೆ ದೇಹಕ್ಕೂ ಹಿತವಾಗಿದೆ. ನೀವೂ ಸಹ ಒಮ್ಮೆ ಈ ಬೂಂದಿ ಕಡಿ ಟ್ರೈ ಮಾಡಿ, ನಿಮಗೆ ಇದು ತುಂಬಾ ಇಷ್ಟವಾಗುತ್ತದೆ. ನೀವು ಪಕೋಡ ಕಡಿ ಅಥವಾ ಪಾಲಕ್ ಕಡಿಯನ್ನು ತಿಂದಿರಬೇಕು, ಆದರೆ ನೀವು ಎಂದಾದರೂ ಬೂಂದಿ ಕಡಿ ತಿಂದಿದ್ದೀರಾ? ಇದು ರುಚಿಕರವಾದ ಖಾದ್ಯ. ಮನೆಯ ಮುದುಕರಿಂದ ಹಿಡಿದು ಮಕ್ಕಳ ವರೆಗೆ ಈ ರೆಸಿಪಿಯನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ.

ಒಮ್ಮೆ ಬೂಂದಿ ಕಡಿ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತದೆ. ಇದರ ರುಚಿಯನ್ನು ಹೆಚ್ಚಿಸಲು, ನೀವು ಇದಕ್ಕೆ ಪಕೋಡಗಳನ್ನು ಕೂಡ ಸೇರಿಸಬಹುದು. ನಿಮ್ಮ ಆಹಾರದಲ್ಲಿ ನೀವು ಮಸಾಲೆಯನ್ನು ಬಯಸಿದರೆ, ನೀವು ಅದಕ್ಕೆ ತಡ್ಕಾವನ್ನು ಕೂಡ ಸೇರಿಸಬಹುದು. ನೀವು ಇದನ್ನು ಅನ್ನ ಅಥವಾ ಚಪಾತಿಯೊಂದಿಗೆ ತಿನ್ನಬಹುದು. ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ. 

ಒಂದು ಬ್ಲೆಂಡರ್‌ನಲ್ಲಿ ಮೊಸರಿನ ಜೊತೆ ಕಡಲೆ ಹಿಟ್ಟು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, ನಯವಾದ ಪೇಸ್ಟ್ ಮಾಡಿ. ಈಗ ಪೇಸ್ಟ್‌ಗೆ 4 ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಲೆಯ ಮೇಲೆ ಒಂದು ಪ್ಯಾನ್‌ ಇಟ್ಟು 2 ಚಮಚ ಎಣ್ಣೆಯನ್ನು ಸೇರಿಸಿ. ಇಂಗು, ಮೆಂತ್ಯ, ಜೀರಿಗೆ, ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಪದಾರ್ಥಗಳನ್ನು ಫ್ರೈ ಮಾಡಿ.

ಈಗ ಬಾಣಲೆಯಲ್ಲಿ ಕಡಲೆ ಹಿಟ್ಟಿನ ಮಿಶ್ರಣವನ್ನು ಹಾಕಿ. ಸಣ್ಣ ಉರಿಯಲ್ಲಿ ಇಡಿ. ಅದು ಕುದಿಯಲು ಪ್ರಾರಂಭವಾಗುವವರೆಗೆ ಕೈಯಾಡಿಸಿ. ಮಿಶ್ರಣವನ್ನು ನಿರಂತರವಾಗಿ ಕೈಯಾಡಿಸಿ, ಇಲ್ಲದಿದ್ದರೆ ಅದು ಒಡೆಯಬಹುದು. ಕುದಿಯಲು ಪ್ರಾರಂಭಿಸಿದ ನಂತರ, ನೀವು ನಿರಂತರವಾಗಿ ಕೈಯಾಡಿಸುವುದನ್ನು ನಿಲ್ಲಿಸಬಹುದು. ಈಗ ಅರಿಶಿನ, ಆಮ್‌ಚೂರ್‌ ಪೌಡರ್‌ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಮಧ್ಯಮದ ಉರಿಯಲ್ಲಿ ಕುದಿಸಿ. ನಂತರ ಇದಕ್ಕೆ ಒಗ್ಗರಣೆ ಸೇರಿಸಿ, 10-15 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಗ್ಯಾಸ್‌ ಆಫ್ ಮಾಡಿ.

Source : https://zeenews.india.com/kannada/lifestyle/how-to-make-boondi-kadi-with-minimum-items-143364

Views: 0

Leave a Reply

Your email address will not be published. Required fields are marked *