KGF Film In Japan: ಪ್ರಶಾಂತ್ ನೀಲ್ ಹಾಗೂ ರಾಕಿಭಾಯ್ ಯಶ್ ಮೋಡಿಯ ‘KGF’1 ಭಾರತದಾದ್ಯಂತ ಸದ್ದು ಮಾಡಿದರೆ ಇದರ ಮುಂದುವರಿದ ಭಾಗ ‘KGF’ ಚಾಪ್ಟರ್- 2 ವಿಶ್ವದಾದ್ಯಂತ ಹೆಸರು ಗಳಿಸಿತ್ತು. ಇದೀಗ ಜಪಾನ್‌ನಲ್ಲಿ ಕನ್ನಡದ ‘KGF’ ಚಾಪ್ಟರ್ -1 ಹಾಗೂ ಚಾಪ್ಟರ್-2 ಸಿನಿಮಾಗಳು ಮತ್ತೆ ಅಬ್ಬರಿಸುತ್ತಿವೆ.

ಪ್ರಶಾಂತ್ ನೀಲ್ ಹಾಗೂ ರಾಕಿಭಾಯ್ ಯಶ್ ಮೋಡಿಯ ‘KGF’1 ಭಾರತದಾದ್ಯಂತ ಸದ್ದು ಮಾಡಿದರೆ ಇದರ ಮುಂದುವರಿದ ಭಾಗ ‘KGF’ ಚಾಪ್ಟರ್- 2 ವಿಶ್ವದಾದ್ಯಂತ ಹೆಸರು ಗಳಿಸಿತ್ತು. ಇದೀಗ ಜಪಾನ್‌ನಲ್ಲಿ ಕನ್ನಡದ ‘KGF’ ಚಾಪ್ಟರ್ -1 ಹಾಗೂ ಚಾಪ್ಟರ್-2 ಸಿನಿಮಾಗಳು ಮತ್ತೆ ಅಬ್ಬರಿಸುತ್ತಿವೆ. ಇದರ ಜೊತೆಯಲ್ಲಿ ರಾಮ್ ಚರಣ್ ನಟನೆಯ ʼರಂಗಸ್ಥಳಂʼ ಸಿನಿಮಾ ರೀಲಿಸ್ ಆಗಿದೆ.
ರಾಕಿ ಭಾಯ್ ನಟನೆಯನ್ನು ನೋಡಿದ ಜಪಾನೀಸ್ ತಮ್ಮದೇ ಶೈಲಿಯಲ್ಲಿ ಸಿನಿಮಾ ಹೊಗಳುತ್ತಿದ್ದಾರೆ. ಜಪಾನಿ ಪ್ರೇಕ್ಷಕರ ರಿವ್ಯೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ಯಶ್ ಅಭಿಮಾನಿಗಳು ನಾವು ನಿಮ್ಮವರು, ನೀವು ನಮ್ಮವರು ಎನ್ನುತ್ತಿದ್ದಾರೆ. ಸದ್ಯ ಜಪಾನೀಸ್ ಅಭಿಮಾನಿಗಳ ಪ್ರೀತಿಗೆ ರಾಕಿಭಾಯ್ ಧನ್ಯವಾದ ತಿಳಿಸಿದ್ದಾರೆ.
ಅದರ ಜೊತೆಯಲ್ಲಿ ಜಪಾನ್ ಬಾಕ್ಸಾಫೀಸ್‌ನಲ್ಲಿ ‘ಮುತ್ತು’ ಸಿನಿಮಾ ಕೂಡ ರೀಲಿಸ್ ಆಗಿ ಆದರೆ KGF’ ಬಗ್ಗೆ ಹೆಚ್ಚೆಚ್ಚು ಮಾತುಗಳು ಕೇಳಿ ಬರುತ್ತಿದೆ. ಸದ್ಯ ಯಶ್19 ಸಿನಿಮಾಕ್ಕಾಗಿ ಕನ್ನಡಿಗರೆಲ್ಲಾ ಕಾತುರದಿಂದ ಕಾಯುತ್ತಿದ್ದಾರೆ.
ಆದರೆ ಇವರ ಮುಂದಿನ ಸಿನಿಮಾದ ಬಗ್ಗೆ ಯಾವುದೇ ರೀತಿಯ ಅಪ್ಡೇಟ್ ಬಂದಿಲ್ಲ. ಹೆಚ್ಚಿನವರು ಇವರ ಮುಂದಿನ ಸಿನಿಮಾದಲ್ಲಿ ವೈಲೈನ್ಸ್ , ಇರುತ್ತೋ ಪ್ರೀತಿ ಪ್ರೇಮ ಇರುತ್ತೋ ಎಂದು ಹಲವರ ನಿರೀಕ್ಷೆಯಾಗಿದೆ.