Lifestyle Tips: ನಿಮ್ಮ ಕೆಲವು ಕೆಟ್ಟ ಅಭ್ಯಾಸಗಳು ನಿಮಗೆ ಮಾನಸಿಕವಾಗಿ ಸಾಕಷ್ಟು ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಅಂತಹ ಅಭ್ಯಾಸಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವು ನಿಮಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ತಕ್ಷಣ ಅವುಗಳನ್ನು ಬದಲಾಯಿಸಿಕೊಳ್ಳಿ.

ಬೆಂಗಳೂರು: ಇಂದಿನ ದಿನಗಳಲ್ಲಿ, ಒತ್ತಡ ಮತ್ತು ಆತಂಕಕ್ಕೆ ಗುರಿಯಾಗುವುದು ಒಂದು ತುಂಬಾ ಸಾಮಾನ್ಯ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮಗೂ ಕೂಡ ಒಂದು ವೇಳೆ ಸಂಗತಿಗಳು ಮರೆತು ಹೋದ ಅಥವಾ ಯಾವುದೇ ಕೆಲಸದಲ್ಲಿ ಆಸಕ್ತಿ ಹೊಂದಿಲ್ಲದ ಅನುಭವ ಉಂಟಾಗುತ್ತಿದ್ದರೆ, ನೀವು ಒತ್ತಡ ಮತ್ತು ಆತಂಕಕ್ಕೆ ಬಲಿಯಾಗಿದ್ದೀರಿ ಎಂಬುದು ಅದರ ಅರ್ಥ. ಆದರೆ ನಿಮ್ಮನ್ನು ಒತ್ತಡ ಮತ್ತು ಆತಂಕಕ್ಕೆ ಬಲಿಯಾಗಿಸುವಲ್ಲಿ ನಿಮ್ಮ ಜೀವನಶೈಲಿಗೆ ಸಂಬಂಧಿಸಿದ ಕೆಲವು ಅಭ್ಯಾಸಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಅಷ್ಟೇ ಯಾಕೆ ಆ ನಿಮ್ಮ ಕೆಟ್ಟ ಅಭ್ಯಾಸಗಳು ನಿಮಗೆ ಮಾನಸಿಕವಾಗಿ ಹಾನಿಯನ್ನುಂಟುಮಾಡುತ್ತವೆ ಎಂಬುದು ನಿಮಗೆ ತಿಳಿದಿರಬೇಕು. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಮಾನಸಿಕವಾಗಿ ಹಿಂಸಿಸಲು ಕಾರಣವಾಗುವ ಕೆಲವು ತಪ್ಪುಗಳನ್ನು ಹೇಳಲಿದ್ದೇವೆ ಮತ್ತು ಅವು ನಿಮ್ಮ ಮೆದುಳನ್ನು ಕ್ರಮೇಣ ದುರ್ಬಲಗೊಳಿಸುತ್ತವೆ.
ನಿಮ್ಮ ಮೆದುಳಿಗೆ ಹಾನಿ ಮಾಡುವ ಕೆಟ್ಟ ಅಭ್ಯಾಸಗಳು
ನಿದ್ರೆಯ ಕೊರತೆ
ನೀವು ಪ್ರತಿದಿನ 7-8 ಗಂಟೆಗಳ ನಿದ್ದೆ ಮಾಡದೆ ಹೋದಲ್ಲಿ, ನಿಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ನಿಮ್ಮ ಮನಸ್ಸು ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಕಷ್ಟು ನಿದ್ರೆ ಪಡೆಯಲು ಹೆಚ್ಚಿನ ಗಮನ ಕೊಡಿ.
ಮದ್ಯದ ಅತಿಯಾದ ಸೇವನೆ
ನಿಮಗೆ ಅತಿಯಾಗಿ ಆಲ್ಕೋಹಾಲ್ ಸೇವಿಸುವ ಅಭ್ಯಾಸವಿದ್ದರೆ, ಅದರ ಪರಿಣಾಮ ಕ್ರಮೇಣ ನಿಮ್ಮ ಮನಸ್ಸಿನ ಮೇಲೆ ಬೀಳಲು ಪ್ರಾರಂಭಿಸುತ್ತದೆ. ಇದು ನಿಮ್ಮ ನೆನಪಿನ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಅದಕ್ಕಾಗಿಯೇ ನೀವು ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡಬೇಕು.
ಹೆಚ್ಚು ಹಾಡುಗಳನ್ನು ಕೇಳುವ ಅಭ್ಯಾಸ
ಅನೇಕ ಜನರು ಯಾವಾಗಲೂ ಹಾಡುಗಳನ್ನು ಕೇಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಯಾವುದೇ ಕೆಲಸ ಮಾಡುವಾಗ ಅವರಿಗೆ ಹಾಡುಗಳನ್ನು ಕೇಳುವ ಅಭ್ಯಾಸ ಇರುತ್ತದೆ . ಆದರೆ ಈ ಹಾಡುಗಳನ್ನು ಕೇಳುವ ಅಭ್ಯಾಸವು ನಿಮ್ಮ ಮನಸ್ಸನ್ನು ದುರ್ಬಲಗೊಳಿಸುತ್ತದೆ ಎಂಬುದು ನಿಮಗೆ ಗೊತ್ತಿರಲಿ? ಇದು ನಿಮ್ಮ ಮನಸ್ಸಿನ ಮೇಲೆ ಮಾತ್ರವಲ್ಲದೆ ನಿಮ್ಮ ಕಿವಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಜಂಕ್ ಫುಡ್ ಸೇವನೆ
ನೀವು ಹೆಚ್ಚು ಜಂಕ್ ಫುಡ್ ಸೇವಿಸುತ್ತಿದ್ದರೆ, ಅದು ನಿಮ್ಮ ಮೆದುಳಿನ ಸಾಮರ್ಥ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಜಂಕ್ ಫುಡ್ ತಿನ್ನುವ ಅಭ್ಯಾಸವನ್ನು ಸಾಧ್ಯವಾದಷ್ಟು ನಿಯಂತ್ರಿಸಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)