ಚಿನ್ನ ಪ್ರಿಯರಿಗೆ ಸಿಹಿಸುದ್ದಿ… ಹಿಂದೆಂದೂ ಸಂಭವಿದಷ್ಟು ಕುಸಿತ ಕಂಡ ಬಂಗಾರದ ಬೆಲೆ: 10ಗ್ರಾ ದರ ಎಷ್ಟಾಗಿದೆ ಗೊತ್ತಾ?

Gold Price Today: ನೀವೂ ಕೂಡ ಇಂದು ಮಾರುಕಟ್ಟೆಗೆ ಹೋಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಕಾದಿದೆ.

ನೀವೂ ಕೂಡ ಇಂದು ಮಾರುಕಟ್ಟೆಗೆ ಹೋಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಕಾದಿದೆ. ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. Goodreturns ವರದಿಯ ಪ್ರಕಾರ, ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 60000 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55,000 ರೂ. ಇದೆ

. ಸ್ಥಿರತೆ ಕಂಡುಬಂದರೂ ಸಹ, ಮೇ ತಿಂಗಳಿನಿಂದ ಇಲ್ಲಿಯವರೆಗಿನ ಲೆಕ್ಕಾಚಾರವನ್ನು ನೋಡುವುದಾದರೆ ಚಿನ್ನದ ಬೆಲೆಯಲ್ಲಿ ರೂ.2400 ಇಳಿಕೆ ಕಂಡಿದೆ.

ಮೇ 5ರಂದು 22 ಕ್ಯಾರೆಟ್ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡು ರೂ.57,200ರಲ್ಲಿ ವಹಿವಾಟು ನಡೆಸುತ್ತಿತ್ತು. ಆದರೆ ಇದೀಗ 55 ಸಾವಿರಕ್ಕೆ ಇಳಿಕೆ ಕಂಡಿದೆ.

ಮತ್ತೊಂದೆಡೆ 24 ಕ್ಯಾರೆಟ್ ಬಂಗಾರದ ಬೆಲೆಯೂ ಮೇ 5ರಂದು 62,400 ರೂ, ಇತ್ತು. ಇದೀಗ 60 ಸಾವಿರಕ್ಕೆ ಇಳಿಕೆ ಕಂಡಿದೆ.

ಇನ್ನು ಬೆಳ್ಳಿ ಬಗ್ಗೆ ನೋಡುವುದಾದರೆ ಇಂದು ಯಾವುದೇ ದರ ಬದಲಾವಣೆಯಾಗಿಲ್ಲ. ಭಾನುವಾರ ಬೆಳ್ಳಿಯ ಬೆಲೆ 500 ರೂ.ಗಳ ಜಿಗಿತವಿತ್ತು, ಈ ಮೂಲಕ ಪ್ರತಿ ಕೆಜಿಗೆ 81,800 ರೂ.ಗೆ ಏರಿದೆ.

ಇನ್ನು ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ ಮೂಲಕ ಹಾಲ್ ಮಾರ್ಕ್‌ಗಳನ್ನು ನೀಡಲಾಗುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 99.9 ಗ್ರಾಂ ಶುದ್ಧತೆ, 23 ಕ್ಯಾರೆಟ್ ನಲ್ಲಿ 95.8, 22 ಕ್ಯಾರೆಟ್ ನಲ್ಲಿ 91.6, 21 ಕ್ಯಾರೆಟ್ ನಲ್ಲಿ 87.5 ಮತ್ತು 18 ಕ್ಯಾರೆಟ್ ನಲ್ಲಿ 75.0 ಗ್ರಾಂ ಶುದ್ಧತೆ ಎಂದು ಬರೆಯಲಾಗಿದೆ. ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್‌ ನಲ್ಲಿ ಮಾರಾಟ ಮಾಡಲಾಗುತ್ತದೆ, ಆದರೆ ಕೆಲವರು 18 ಕ್ಯಾರೆಟ್‌ ಗಳನ್ನು ಸಹ ಬಳಸುತ್ತಾರೆ.

Source : https://zeenews.india.com/kannada/photo-gallery/gold-price-today-july-17-2023-decreased-rs-2400-in-gold-rate-no-changes-today-in-bengaluru-146170/-146171

Leave a Reply

Your email address will not be published. Required fields are marked *