SBI ಖಾತೆ ಇಲ್ಲದಿದ್ದರೂ ಯೋನೋ ಅಪ್ಲಿಕೇಷನ್ ಮೂಲಕ ಯುಪಿಐ ಪೇಮೆಂಟ್ ಮಾಡಬಹುದು, ಹೇಗ್ ಗೊತ್ತಾ?

SBI YONO UPI Service For All: ಎಸ್‌ಬಿಐನಲ್ಲಿ ಖಾತೆಯನ್ನು ಹೊಂದಿರದ ಜನರು, ಈಗ ಅವರು ಯೊನೊ ಅಪ್ಲಿಕೇಶನ್ ಮೂಲಕ ಯುಪಿಐ ಪಾವತಿಗಳನ್ನು ಮಾಡಬಹುದು. ಇದಕ್ಕಾಗಿ, ನಿಮ್ಮ ಫೋನ್‌ನಲ್ಲಿ YONO ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಮೂಲಕ ನೀವು ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

SBI YONO UPI Service For All: ಭಾರತದ ಜನಪ್ರಿಯ ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ಯಾವುದೇ ಬ್ಯಾಂಕ್ ಗ್ರಾಹಕರು ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಪಾವತಿಗಳಿಗಾಗಿ ತನ್ನ YONO ಅಪ್ಲಿಕೇಶನ್ ಅನ್ನು ಬಳಸಲು ಅನುಮತಿಸಿದೆ. ಸರಳವಾಗಿ ಹೇಳುವುದಾದರೆ, ಇನ್ಮುಂದೆ ಎಸ್‌ಬಿ‌ಐ ಯೋನೋ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಯುಪಿಐ  ವೈಶಿಷ್ಟ್ಯಗಳನ್ನು ಬಳಸಲು ನೀವು ಎಸ್‌ಬಿ‌ಐ ಬ್ಯಾಂಕ್ ಖಾತೆಯನ್ನು ಹೊಂದಿರಲೇ ಬೇಕು ಎಂಬುದು ಅನಿವಾರ್ಯವಲ್ಲ. 

ವಾಸ್ತವವಾಗಿ, ಆರಂಭದಲ್ಲಿ YONO ಅಪ್ಲಿಕೇಶನ್ ಅನ್ನು SBI ಖಾತೆದಾರರಿಗಾಗಿ ವಿನ್ಯಾಸಗೊಳಿಸಲಾಗಿತ್ತು. ಆದರೆ ಈಗ ಎಸ್‌ಬಿ‌ಐ ಅಲ್ಲದ ಖಾತೆದಾರರನ್ನು ಸೇರಿಸಲು ಅದರ ಸೇವೆಗಳನ್ನು ವಿಸ್ತರಿಸಿದೆ. ಇದರೊಂದಿಗೆ ಎಸ್‌ಬಿ‌ಐ ಖಾತೆದಾರರಲ್ಲದಿದ್ದರೂ ಅವರು ಯಾವುದೇ ತೊಂದರೆಯಿಲ್ಲದೆ ಯೋನೋ ಅಪ್ಲಿಕೇಶನ್ ಮೂಲಕ UPI ಪಾವತಿ ಸೇವೆಯನ್ನು ಆನಂದಿಸಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಕ್ರಮದಿಂದಾಗಿ ದೇಶಾದ್ಯಂತ ಕೋಟ್ಯಾಂತರ ಗ್ರಾಹಕರಿಗೆ ಪ್ರಯೋಜನವಾಗಲಿದೆ. 

ಹಾಗಿದ್ದರೆ, ಎಸ್‌ಬಿ‌ಐನಲ್ಲಿ ಖಾತೆ ಹೊಂದಿಲ್ಲದ ಖಾತೆದಾರರು ಎಸ್‌ಬಿ‌ಐ ಯೋನೋ  ಅಪ್ಲಿಕೇಶನ್ ಮೂಲಕ ಯುಪಿಐ ಪಾವತಿಯನ್ನು ಹೇಗೆ ಮಾಡಬಹುದು ಎಂಬುದನ್ನು ತಿಳಿಯೋಣ… 

ಮೊದಲಿಗೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ:
SBI YONO ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಐಫೋನ್ ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ. ನೀವು ನಿಮ್ಮ ಸಾಧನದಲ್ಲಿ SBI Yono ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಇನ್ಸ್ಟಾಲ್ ಮಾಡಿ. 

ನೋಂದಾಯಿಸಿ ಮತ್ತು ಖಾತೆಯನ್ನು ರಚಿಸಿ (ಹೊಸ ಖಾತೆಗಾಗಿ ನೋಂದಾಯಿಸಿ): 
ನಿಮ್ಮ ಸಾಧನದಲ್ಲಿ ಯೋನೋ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಆಪ್ ಅನ್ನು ತೆರೆದು ನೀವು ಅಸ್ತಿತ್ವದಲ್ಲಿರುವ ಯೋನೋ ಬಳಕೆದಾರರಲ್ಲದಿದ್ದರೆ “ಹೊಸ ಬಳಕೆದಾರ” ಆಯ್ಕೆಯನ್ನು ಆರಿಸಿ. ನಂತರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಪರಿಶೀಲನೆಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ. ನಂತರ ನಿಗದಿತ ಜಾಗದಲ್ಲಿ ಓಟಿಪಿ ನಮೂದಿಸಿ. 

ನಿಮ್ಮ ಎಸ್‌ಬಿ‌ಐ ಅಲ್ಲದ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ: 
ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ,  ನಿಮ್ಮ ಎಸ್‌ಬಿ‌ಐ ಅಲ್ಲದ ಬ್ಯಾಂಕ್ ಖಾತೆಯನ್ನು ಯೋನೋ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಬಹುದು. ಇದಕ್ಕಾಗಿ, “ಖಾತೆಗಳು” ವಿಭಾಗಕ್ಕೆ ಹೋಗಿ ಮತ್ತು “ಹೊಸ ಖಾತೆಯನ್ನು ಸೇರಿಸಿ” ಎಂಬ ಆಯ್ಕೆಯನ್ನು ಆರಿಸಿ. ಲಭ್ಯವಿರುವ ಬ್ಯಾಂಕ್‌ಗಳ ಪಟ್ಟಿಯಿಂದ ನಿಮ್ಮ ಎಸ್‌ಬಿ‌ಐ ಅಲ್ಲದ ಬ್ಯಾಂಕ್ ಅನ್ನು ಆಯ್ಕೆಮಾಡಿ ಮತ್ತು ನಿಮ್ಮ ಖಾತೆ ಸಂಖ್ಯೆ ಮತ್ತು ಐ‌ಎಫ್‌ಎಸ್‌ಸಿ ಕೋಡ್‌ನಂತಹ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. 

ಯುಪಿಐ ಪಿನ್: 
ಮೇಲಿನ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಯುಪಿಐ ವಿಭಾಗಕ್ಕೆ ಹೋಗಿ ಅಲ್ಲಿ ಯುಪಿಐ ಪಿನ್ ಅನ್ನು ಹೊಂದಿಸಿ. ಇದಕ್ಕಾಗಿ ನೀವು ಯಾವ ಬ್ಯಾಂಕ್ ಅನ್ನು ಆಯ್ಕೆ ಮಾಡಿದ್ದೀರೋ ಆ ಬ್ಯಾಂಕ್ ನ ನಿಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ನೋಂದಾಯಿಸಿ. ಪರಿಶೀಲನೆಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ಅನ್ನು ನೋಂದಾಯಿಸಿ ಮತ್ತು ಸುರಕ್ಷಿತ ಯುಪಿಐ ಪಿನ್ ಅನ್ನು ಹೊಂದಿಸಿ.

ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಮತ್ತು ಯುಪಿಐ ಐಡಿ ರಚಿಸಿ: 
ನಿಮ್ಮ ಯುಪಿಐ ಪಿನ್ ಅನ್ನು ಹೊಂದಿಸಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಅಪ್ಲಿಕೇಶನ್ ನಿಮ್ಮನ್ನು ಕೇಳುತ್ತದೆ. ವಹಿವಾಟು ಎಚ್ಚರಿಕೆಗಳು ಮತ್ತು ನವೀಕರಣಗಳನ್ನು ಸ್ವೀಕರಿಸಲು ಇದು ಮುಖ್ಯವಾಗಿದೆ. ಒಮ್ಮೆ ಪರಿಶೀಲಿಸಿದ ನಂತರ, ಅನನ್ಯ ಯುಪಿಐ ಐಡಿಯನ್ನು ರಚಿಸಿ, ಅದನ್ನು ಯುಪಿಐ ವಹಿವಾಟುಗಳಿಗಾಗಿ ಬಳಸಬಹುದಾಗಿದೆ.  

Source :https://zeenews.india.com/kannada/business/upi-payment-through-yono-app-even-without-sbi-account-here-is-step-by-step-process-146543

Leave a Reply

Your email address will not be published. Required fields are marked *