ವಿದ್ಯುತ್ ಸ್ಪರ್ಶದಿಂದ 10 ಮಂದಿ ಸಾವು : ಉತ್ತರಾಖಂಡದ ಚಮೋಲಿಯಲ್ಲಿ ಅವಘಡ

Chamoli namami gange project sewerage plant accident:ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ನಂತರ ವಿದ್ಯುತ್ ಸ್ಪರ್ಶದಿಂದ  ಈ ಅವಘಡ ನಡೆದಿದೆ ಎಂದು ಹೇಳಲಾಗುತ್ತಿದೆ. ಚಮೋಲಿ ಅಪಘಾತದಲ್ಲಿ ಈವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ.  

Chamoli namami gange project sewerage plant accident : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಒಳಚರಂಡಿ ಘಟಕದಲ್ಲಿ ವಿದ್ಯುತ್ ಸ್ಪರ್ಶದಿಂದ 10 ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅನೇಕ ಜನರಿಗೆ ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ನಮಾಮಿ ಗಂಗೆ ಯೋಜನೆಯಡಿ ಈ ಒಳಚರಂಡಿ ಸ್ಥಾವರ ನಿರ್ಮಾಣ ನಡೆಯುತ್ತಿದೆ. ತೀವ್ರವಾಗಿ ಸುಟ್ಟ ಗಾಯಗಳಾಗಿರುವ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೃತರಲ್ಲಿ ಒಬ್ಬ ಪೊಲೀಸ್ : 
ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ನಂತರ ವಿದ್ಯುತ್ ಸ್ಪರ್ಶದಿಂದ  ಈ ಅವಘಡ ನಡೆದಿದೆ ಎಂದು ಹೇಳಲಾಗುತ್ತಿದೆ. ಚಮೋಲಿ ಅಪಘಾತದಲ್ಲಿ ಈವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಬ್ಬ ಪೊಲೀಸ್ ಪೇದೆಯೂ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ, ಸ್ಥಳೀಯರಿಂದ ಬಂದ ಮಾಹಿತಿಯ ಪ್ರಕಾರ, ಅಪಘಾತದಲ್ಲಿ 20 ಕ್ಕೂ ಹೆಚ್ಚು ಜನರು ಸುಟ್ಟು ಕರಕಲಾಗಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾದಾಗ ಅವರನ್ನು ಶ್ರೀನಗರದ ಹೈಯರ್ ಸೆಂಟರ್ ಗೆ ರವಾನಿಸಲಾಗಿದೆ. ವೈದ್ಯರ ತಂಡ ಎಲ್ಲರ ಸ್ಥಿತಿಯ ಮೇಲೆ ನಿಗಾ ಇಟ್ಟಿದೆ. 

ಎಸ್ಪಿ ಹೇಳಿಕೆ : 
ಚಮೋಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಈ ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಮತ್ತೊಂದೆಡೆ ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ, ಔಟ್ ಪೋಸ್ಟ್ ಇನ್ ಚಾರ್ಜ್ ಕೂಡಾ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

Source : https://zeenews.india.com/kannada/india/10-death-in-chamoli-namami-gange-project-sewerage-plant-accident-146759

Leave a Reply

Your email address will not be published. Required fields are marked *