ಐದು ನೂರು ಮುಖಬೆಲೆಯ ನೋಟು ನಿಷ್ಕ್ರೀಯಗೊಳ್ಳಲಿದೆಯೇ? ಮಹತ್ವದ ಹೇಳಿಕೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!

Nirmala Sitharaman: ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಕರೆನ್ಸಿ ನೋಟುಗಳ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದೆ. ಹಾಗಾದರೆ ಸರ್ಕಾರ (Business News In Kannada) ಇದೀಗ  500 ರೂಪಾಯಿ ನೋಟು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. 

ನವದೆಹಲಿ: ನೋಟುಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಹಲವು ಬಾರಿ ದೊಡ್ಡ ನಿರ್ಧಾರ ಕೈಗೊಂಡಿದೆ. ಇತ್ತೀಚೆಗಷ್ಟೇ 2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಇದೀಗ ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಕರೆನ್ಸಿ ನೋಟುಗಳ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ಹಾಗಾದರೆ ಸರ್ಕಾರ ಈಗ 500 ರೂಪಾಯಿ ನೋಟು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆಯೇ ಎಂಬುದರ ಮಾಹಿತಿ ನಿಮಗೂ ಇರಬೇಕು. ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ 500, 1000, 2000 ರೂಪಾಯಿಗಳ ನೋಟುಗಳ ಬಗ್ಗೆ ಮಹತ್ವದ ಅಪ್ಡೇಟ್ ಪ್ರಕಟಿಸಿದೆ

ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ
ರಿಸರ್ವ್ ಬ್ಯಾಂಕ್‌ನಿಂದ ಪಡೆದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 30, 2023 ರವರೆಗೆ ನೀವು 2000 ರೂಪಾಯಿ ನೋಟನ್ನು ಬದಲಾಯಿಸಬಹುದು . 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30, 2023ರವರೆಗೆ ಗಡುವು ಇದ್ದು, ಅದನ್ನು ಮತ್ತಷ್ಟು ವಿಸ್ತರಿಸುವ ಯಾವುದೇ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಹಣಕಾಸು ಸಚಿವಾಲಯ ಲೋಕಸಭೆಗೆ ತಿಳಿಸಿದೆ.

500 ನೋಟು ಕೂಡ ಬ್ಯಾನ್ ಆಗುತ್ತಾ?
ಕಪ್ಪುಹಣಕ್ಕೆ ಕಡಿವಾಣ ಹಾಕಲು ಸರ್ಕಾರವೂ 500 ರೂಪಾಯಿ ನೋಟು ನಿಲ್ಲಿಸುತ್ತದೆಯೇ ಎಂದು ಮಾಧ್ಯಮಗಳು ಹಣಕಾಸು ಸಚಿವಾಲಯವನ್ನು ಪ್ರಶ್ನಿಸಿವೆ. ಕಪ್ಪುಹಣವನ್ನು ತಡೆಯಲು ಸರ್ಕಾರ ದೊಡ್ಡ ನೋಟುಗಳ ಚಲಾವಣೆಯನ್ನು ನಿಲ್ಲಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ 500 ರೂಪಾಯಿ ನೋಟು ಮಾತ್ರ ದೊಡ್ಡ ಮುಖಬೆಲೆಯ ಕರೆನ್ಸಿಯಾಗಿದೆ, ಮುಂದಿನ ದಿನಗಳಲ್ಲಿ 500 ರೂಪಾಯಿ ನೋಟು ಕೂಡ ಬ್ಯಾನ್ ಆಗಬಹುದೇ? ಸದ್ಯ ಅಂತಹ ಯಾವುದೇ ಯೋಜನೆಯನ್ನು ಪರಿಗಣಿಸಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

2016ರಲ್ಲಿ ಮೊದಲ ಬಾರಿಗೆ ಮೋದಿ ಸರ್ಕಾರ ತನ್ನ ನೋಟು ಅಮಾನ್ಯೀಕರಣ ಪ್ರಕಟಿಸಿತ್ತು
2016 ರಲ್ಲಿ ಮೊದಲ ಬಾರಿಗೆ, ಮೋದಿ ಸರ್ಕಾರವು ನೋಟು ಅಮಾನ್ಯೀಕರಣದ ನಿರ್ಧಾರವನ್ನು ತೆಗೆದುಕೊಂಡಿತು, ಅದರಲ್ಲಿ 500 ಮತ್ತು 1000 ರೂಪಾಯಿಗಳ ನೋಟುಗಳು ಚಲಾವಣೆಯಿಂದ ಅಮಾನ್ಯಗೊಂಡಿದ್ದವು, ಇದಾದ ಬಳಿಕ ಸಾಮಾನ್ಯ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಇದೀಗ ಇತ್ತೀಚೆಗಷ್ಟೇ 2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆಯಲು ಸರ್ಕಾರ ನಿರ್ಧರಿಸಿದ್ದು, ಇದಾದ ಬಳಿಕ ಸರ್ಕಾರ ಮತ್ತೊಮ್ಮೆ 1000 ರೂಪಾಯಿ ನೋಟು ವಾಪಸ್ ತರಲು ಸಾಧ್ಯವೇ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಈ ಬಗ್ಗೆಯೂ ಹಣಕಾಸು ಸಚಿವಾಲಯವು ಪ್ರಸ್ತುತ ಅಂತಹ ಯಾವುದೇ ಯೋಜನೆಯನ್ನು ಪರಿಗಣಿಸಿಲ್ಲ ಎಂದು ಹೇಳಿದೆ.

Source : https://zeenews.india.com/kannada/business/business-news-in-kannada-will-modi-government-also-considering-barring-500-rupees-currency-from-transaction-147785

Leave a Reply

Your email address will not be published. Required fields are marked *