Hallikar Breed Bull: ಬ್ರಾಂಡ್ ಜಾಗ್ವಾರ್ ಹೆಸರಿನ ಈ ಎತ್ತು ರಾಜ್ಯವು ಸೇರಿದಂತೆ ಹೊರ ರಾಜ್ಯಗಳಲ್ಲಿ ಎತ್ತು ಗಾಡಿ ರೇಸ್ ನಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ ಗಳಿಸಿತ್ತು. ತಮಿಳುನಾಡಿನಲ್ಲಿ ನಡೆದ ರೇಸ್ ನಲ್ಲಿ ಈ ಎತ್ತು ತನ್ನ ವೇಗದಿಂದ ಸಾಕಷ್ಟು ಪ್ರಸಿದ್ದಿ ಪಡೆದಿತ್ತು.

Hallikar Breed Bull: ಸಾಮಾನ್ಯವಾಗಿ ನಮ್ಮ ಅಕ್ಕ-ಪಕ್ಕದ ತಾಲೂಕುಗಳಲ್ಲಿ, ಗ್ರಾಮಗಳ ಸಂತೆಗಳಲ್ಲಿ ಜಾನುವಾರುಗಳ ಮಾರಾಟದ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಇಂತಹ ಜಾಗಗಳಲ್ಲಿ ಜಾನುವಾರುಗಳನ್ನು ಹರಾಜು ಪ್ರಕ್ರಿಯೆಯ ಮೂಲಕವೂ ಭಾರೀ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದೀಗ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿದ್ದು, ಇದು ಮಾರಾಟವಾದ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ!
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮಸ್ಥರಾದ ನವೀನ್ ಎಂಬುವವರು ಸಾಕಿದ್ದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು ಇದೀಗ ತಮಿಳುನಾಡು ಮೂಲದ ಸಿರವೈ ತಂಬಿ ಎಂಬುವ ಗ್ರಾಹಕರು ಬರೋಬ್ಬರಿ 9 ಲಕ್ಷದ 20 ಸಾವಿರ ರೂ.ಗಳಿಗೆ ಖರೀದಿಸಿದ್ದಾರೆ.
ಬ್ರಾಂಡ್ ಜಾಗ್ವಾರ್ ಹೆಸರಿನ ಈ ಎತ್ತು ರಾಜ್ಯವು ಸೇರಿದಂತೆ ಹೊರ ರಾಜ್ಯಗಳಲ್ಲಿ ಎತ್ತು ಗಾಡಿ ರೇಸ್ ನಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ ಗಳಿಸಿತ್ತು. ತಮಿಳುನಾಡಿನಲ್ಲಿ ನಡೆದ ರೇಸ್ ನಲ್ಲಿ ಈ ಎತ್ತು ತನ್ನ ವೇಗದಿಂದ ಸಾಕಷ್ಟು ಪ್ರಸಿದ್ದಿ ಪಡೆದಿತ್ತು. ಈ ಜಾಗ್ವಾರ್ ಹೆಸರಿನ ಹಳ್ಳಿಕಾರ್ ತಳಿಯ ಎತ್ತಿನ ವೇಗ, ಅದರ ಸಾಧನೆಗಳ ಬಗ್ಗೆ ಕೇಳಿದ್ದ ಗ್ರಾಹಕರು ಈ ಎತ್ತನ್ನು 9.20 ಲಕ್ಷ ರೂ ಗಳ ಭಾರೀ ಮೊತ್ತಕ್ಕೆ ಖರೀದಿಸುವ ಮೂಲಕ ದಾಖಲೆ ಬರೆದಿದ್ದಾರೆ.
ದಾಖಲೆ ಬೆಲೆಗೆ ಮಾರಾಟವಾದ ಈ ಎತ್ತಿಗೆ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಬೀಳ್ಕೋಡಿಗೆ ನೀಡಲಾಗಿದೆ. ಇನ್ನೂ ಈ ಎತ್ತನ್ನು ಇಷ್ಟು ವರ್ಷಗಳ ಕಾಲ ಸಾಕಿ ಸಲಹಿದ್ದ ಕುಟುಂಬಸ್ಥರು ಬೀಳ್ಕೋಡಿಗೆ ವೇಳೆ ಎತ್ತಿಗೆ ಆರತಿ ಬೆಳಗಿ ನಮಸ್ಕರಿಸಿ ಭಾರದ ಮನಸ್ಸಿನಿಂದ ಬೀಳ್ಕೊಟ್ಟರು.