Bhola Shankar Trailer: ಸೂಪರ್ಸ್ಟಾರ್ ಚಿರಂಜೀವಿ ಅಭಿನಯದ ‘ಭೋಲಾ ಶಂಕರ್’ ಟ್ರೇಲರ್ ಅನಾವರಣಗೊಂಡಿದೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಭೋಲಾ ಶಂಕರ್’. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದ್ದು, ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮೆಹರ್ ರಮೇಶ್ ಆಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ಮತ್ತು ಕೀರ್ತಿ ಸುರೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಸಿನಿಮಾ ಆಗಸ್ಟ್ 11 ರಂದು ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದೆ. ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಮೆಗಾ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸರ್ಪ್ರೈಸ್ ಕೊಟ್ಟಿದೆ. ಇಂದು ಸಿನಿಮಾದ ಟ್ರೇಲರ್ ಅನ್ನು ಚಿರಂಜೀವಿ ಪುತ್ರ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅನಾವರಣಗೊಳಿಸಿದ್ದಾರೆ. ಚಿರಂಜೀವಿ ಪಂಚಿಂಗ್ ಡೈಲಾಗ್ಸ್, ಎಕ್ಸ್‌ಪ್ರೆಶನ್ಸ್ ಸಿನಿಪ್ರೇಮಿಗಳನ್ನು ಆಕರ್ಷಿಸುತ್ತಿದೆ.
ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮೆಗಾಸ್ಟಾರ್ ಚಿರಂಜೀವಿ ತಮ್ಮ ಸಿನಿ ವೃತ್ತಿಜೀವನದಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ‘ಭೋಲಾ ಶಂಕರ್’ ಸಲುವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಮೆಚ್ಚಿನ ನಟನ ಸಿನಿಮಾ ಬಗ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.
ಭೋಲಾ ಶಂಕರ್ ಟೀಸರ್: ಚಿರಂಜೀವಿ ಮತ್ತು ತಮನ್ನಾ ಭಾಟಿಯಾ ಅಭಿನಯದ ‘ಭೋಲಾ ಶಂಕರ್’ ಟೀಸರ್ ಅನ್ನು ಚಿತ್ರತಂಡ ಕೆಲ ದಿನಗಳ ಹಿಂದೆ ಅನಾವರಣಗೊಳಿಸಿತ್ತು. ಈ ಚಿತ್ರದಲ್ಲಿ ಬಹುಬೇಡಿಕೆ ನಟಿ ಕೀರ್ತಿ ಸುರೇಶ್ ಅವರು ನಟ ಚಿರಂಜೀವಿ ಅವರ ಸಹೋದರಿಯಾಗಿ ಅಭಿನಯಿಸಿದ್ದಾರೆ. ಮಾಸ್ ಆಯಕ್ಷನ್ ಸಿನಿಮಾ ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿರಲಿದೆ. ನಿರ್ದೇಶಕ ಮೆಹರ್ ರಮೇಶ್ ಈ ಚಿತ್ರವನ್ನು ವಿಭಿನ್ನವಾಗಿ ನಿರ್ದೇಶಿಸಿದ್ದಾರೆ. ‘ಭೋಲಾ ಶಂಕರ್’ ಚಿತ್ರದಲ್ಲಿ ನಟ ಚಿರಂಜೀವಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅನಾವರಣಗೊಂಡಿರುವ ಟೀಸರ್, ಟ್ರೇಲರ್ ಸಂಪೂರ್ಣ ಆಯಕ್ಷನ್ ಅಂಶಗಳಿಂದ ಕೂಡಿದೆ.
ತೆಲುಗು ಪಂಚಿಂಗ್ ಡೈಲಾಗ್ಗಳಿಂದ ಅಭಿಮಾನಿಗಳನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ. ಟೀಸರ್, ಟ್ರೇಲರ್ ನೋಡಿದ ಅಭಿಮಾನಿಗಲು ಸಿನಿಮಾ ವೀಕ್ಷಿಸಲು ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಸಂಗೀತಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ, ಡೈಲಾಗ್ಗಳು ಪಂಚಿಂಗ್ ಆಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರದ ಪೋಸ್ಟರ್ ಸಹ ಅಭಿಮಾನಿಗಳ ಗಮನ ಸೆಳೆದಿದೆ. ಸದ್ಯ ‘ಭೋಲಾ ಶಂಕರ್’ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಟ್ರೆಂಡಿಗ್ನಲ್ಲಿದೆ. ಆಗಸ್ಟ್ 11 ರಂದು ‘ಭೋಲಾ ಶಂಕರ್’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.