5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು ಒಂದಾಗಿದೆ. ಈಗಾಗಲೇ ಇದಕ್ಕೆ ಚಾಲನೆ ಸಿಕ್ಕಿದೆಯಾದ್ರು ಅಧಿಕೃತ ಚಾಲನೆಗೆ ಸರ್ಕಾರ ಮಹೂರ್ತ ಫಿಕ್ಸ್ ಮಾಡಿದೆ.

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು ಒಂದಾಗಿದೆ. ಈಗಾಗಲೇ ಇದಕ್ಕೆ ಚಾಲನೆ ಸಿಕ್ಕಿದೆಯಾದ್ರು ಅಧಿಕೃತ ಚಾಲನೆಗೆ ಸರ್ಕಾರ ಮಹೂರ್ತ ಫಿಕ್ಸ್ ಮಾಡಿದೆ. ನುಡಿದಂತೆ ನಡೆಯುತ್ತಿದ್ದೇವೆ ಎಂದು 200 ಯುನಿಟ್ ಉಚಿತ ವಿದ್ಯುತ್ ನೀಡಲು ಸರ್ಕಾರ ಮುಂದಾಗಿದೆ. ಗೃಹ ಲಕ್ಷ್ಮಿ ಯೋಜನೆಯ ಜಾರಿಯ ವಿಚಾರವಾಗಿ ಪೂರ್ವ ಸಿದ್ದತೆಯ ವಿವರಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಲಾಯ್ತು.. ಹಾಗಾದ್ರೆ ಈ ಸುದ್ದಿಗೋಷ್ಟಿಯಲ್ಲಿ ಸಚಿವ ಯಾವೆಲ್ಲಾ ಮಾಹಿತಿಯನ್ನ ನೀಡಿದ್ರು ಅನ್ನೋದ್ರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯು ಇಂದಿನಿಂದ ಅಧಿಕೃತ ಜಾರಿ ಹಿನ್ನೆಲೆ, ಚಾಲನಾ ಸಮಾರಂಭದ ವಿಚಾರವಾಗಿ ಪೂರ್ವ ಸಿದ್ಧತಾ ಸುದ್ದಿಗೋಷ್ಠಿ ನಡೆಸಿದ್ರು ಇಂಧನ ಸಚಿವ ಕೆ.ಜೆ ಜಾರ್ಜ್. ಈ ಸುದ್ದಿಗೋಷ್ಟಿ ಬೆಸ್ಕಾಂ ನಿರ್ದೇಶಕ ಮಹಾಂತೇಶ್ ಬೀಳಗಿ, ಇಂಧನ ಇಲಾಖೆಯ ಎಸಿಎಸ್ ಗೌರವ್ ಗುಪ್ತ, ಹಾಗೂ ಕೆಪಿಟಿಸಿಎಸ್ ಪ ವ್ಯವಸ್ಥಾಪಕ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ರು.. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಜಾರ್ಜ್ಕಾ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಯ ಐದು ಕಾರ್ಯಕ್ರಮಗಳಲ್ಲಿ ಇದು ಒಂದು.. ಸಿದ್ದರಾಮಯ್ಯ ಡಿಕೆಶಿವಕುಮಾರ್ ಸಹಿ ಮಾಡಿದ ಗ್ಯಾರಂಟಿ ಕಾರ್ಡ್ ಗಳನ್ನ ನೀಡಿದ್ವು ಇಗ ಅದರಂತೆ ನುಡಿದಂತೆ ನಡೆಯುತ್ತಿದ್ದೇವೆ ಅಂತಾ ಸಚಿವ ಜಾರ್ಜ್ ಮಾಹಿತಿ ನೀಡಿದ್ರು.
ಡಿಮಾನಿಟೈಜೇಷನ್ ಸೇರಿದಂತೆ ಜಿಎಸ್ ಟಿ, ಬೆಲೆ ಏರಿಕೆ ಕಾರಣಗಳಿಂದ ಜನ ಸಿಕ್ಕಿಹಾಕಿಕೊಂಡಿದ್ದಾರೆ.. ಬೆಲೆಗಳು ಹೆಚ್ಚಾದ್ರು ಜನರ ಹಣ ಆದಾಯ ಸಂಬಳ ಹೆಚ್ಚಾಗಲಿಲ್ಲಾ..ಅವಶ್ಯಕವಾದ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಸಮಸ್ಯೆಗಳಿಂದ ಹೊರಬರೋದಕ್ಕೆ ಅನುಕೂಲವಾಗಲಿ ಅಂತ ಈ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರಲಾಗ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರವನ್ನ ಟೀಕಿಸಿದ್ರು.. ಇನ್ನೂ ಆಗಸ್ಟ್ 5 ರಂದು ಸಿಎಂ ಸಿದ್ದರಾಮಯ್ಯರವರು ಕಲಬುರಗಿಯ ಎನ್‌ವಿ ಮೈದಾನದಲ್ಲಿ ಬಹುನಿರೀಕ್ಷಿತ ‘ಗೃಹ ಜ್ಯೋತಿ’ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯಸಭೆಯ ಪತ್ರಿ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಿರಿಯ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಅಂತ ಸಚಿವ ಜಾರ್ಜ್ ಮಾಹಿತಿ ನೀಡಿದ್ರು
ಗೃಹ ಜ್ಯೋತಿ ಯೋಜನೆಯ ಪ್ರಮುಖ ವಿವರಗಳನ್ನ ನೋಡೋದಾದ್ರೆ…
• ರಾಜ್ಯದ ಎಲ್ಲಾ ಗೃಹಬಳಕೆದಾರರಿಗೆ 200 ಯೂನಿಟ್‌ಗಳವರೆಗಿನ ವಿದ್ಯುತ್ ಬಳಕೆ ಉಚಿತ.
• 2023ರ ಆಗಸ್ಟ್‌ನಲ್ಲಿ ‘ಗೃಹ ಜ್ಯೋತಿ’ ಯೋಜನೆಯಿಂದ 1.42 ಕೋಟಿ ಕುಟುಂಬಗಳಿಗೆ ಲಾಭ.
• ಈ ಯೋಜನೆಯು ವಾಣಿಜ್ಯ ಗ್ರಾಹಕರಿಗೆ ಅನ್ವಯಿಸುವುದಿಲ್ಲ.
• 2022- 2023ರ ಹಣಕಾಸು ವರ್ಷದ ಸರಾಸರಿ ವಿದ್ಯುತ್ ಬಳಕೆಯನ್ನು ಗಣನೆಗೆ ತೆಗೆದುಕೊಂಡು ಪ್ರತಿ ಗ್ರಾಹಕರ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ 10 ಪ್ರತಿಶತವನ್ನು ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲಾಗುತ್ತದೆ.
• ಗರಿಷ್ಠ ಉಚಿತ ವಿದ್ಯುತ್ ಬಳಕೆಯ ಮಿತಿಯನ್ನು 200 ಯುನಿಟ್‌ಗಳಿಗೆ ನಿರ್ಬಂಧಿಸಲಾಗಿದೆ.
• ಪ್ರತಿ ಬಳಕೆದಾರರಿಗೆ ನಿಗದಿಪಡಿಸಲಾದ ತಿಂಗಳ ಸರಾಸರಿ ಯೂನಿಟ್‌ಗೆ ಅನುಗುಣವಾಗಿ ವಿದ್ಯುತ್ ಬಳಕೆ ಮಾಡುವ ಗ್ರಾಹಕರ ಬಿಲ್ ಮೊತ್ತ ಶೂನ್ಯವಾಗಿರುತ್ತದೆ.
• ನಿಗದಿತ ಸರಾಸರಿ ಬಳಕೆಯ ಮಿತಿ ಮೀರಿದರೂ 200 ಯೂನಿಟ್ ಒಳಗಿದ್ದರೆ ಹೆಚ್ಚುವರಿ ಯೂನಿಟ್‌ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ.
• ಗ್ರಾಹಕರ ಮಾಸಿಕ ಸರಾಸರಿ ಬಳಕೆಯು 200 ಯುನಿಟ್‌ಗಳನ್ನು ಮೀರಿದರೆ ಬಿಲ್‌ನ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
• ಯೋಜನೆಯ ಲಾಭ ಪಡೆಯಲು ಬಯಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು.
• ಗ್ರಾಹಕರು ತಮ್ಮ ಆಧಾರ್ ಸಂಖ್ಯೆಗಳನ್ನು ಬಿಲ್‌ನಲ್ಲಿಹ ನಮೂದಿಸಲಾದ ಗ್ರಾಹಕ ID ಅಥವಾ ಖಾತೆ ID ಯೊಂದಿಗೆ ಲಿಂಕ್ ಮಾಡಬೇಕು.
• ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಫಲಾನುಭವಿಗಳನ್ನು ಹೊಸದಾಗಿ ಪ್ರಾರಂಭಿಸಲಾದ ಗೃಹ ಜ್ಯೋತಿ ಯೋಜನೆಗೆ ಜೋಡಣೆ ಮಾಡಲಾಗುತ್ತದೆ.
• ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರವು ಗೃಹ ಜ್ಯೋತಿ ಸಬ್ಸಿಡಿ ಮೊತ್ತ ಮತ್ತು FPPAC ಮೊತ್ತವನ್ನು ಎಲ್ಲಾ ESCOM ಗಳಿಗೆ ಮುಂಚಿತವಾಗಿ ಪಾವತಿಸುತ್ತದೆ. ಇಂಧನ ಇಲಾಖೆಗೆ ಇದರಿಂದ ಆರ್ಥಿಕ ಹೊರೆ ಬೀಳದು ಅಂತಾ ಸಚಿವ ಜಾರ್ಜ್ ಸೇರಿದಂತೆ ಅಧಿಕಾರಿಗಳು ಮಾಹಿತಿ ನೀಡಿದ್ರು..
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದೆ.. 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿ ಇಗ ಕಂಡಿಷನ್ ಹಾಕಿದೆ ಅಂತ ವಿಪಕ್ಷನಾಯಕರ ಆರೋಪಕ್ಕೆ ತಿರುಗೇಟು ನಿಡೋದಕ್ಕೆ ಸಚಿವರು ಮುಂದಾಗಿದ್ದಾರೆ.. ಕೆಲವು ಗೊಂದಲಗಳನ್ನ ಬಗೆಹರಿಸಿರುವ ಸರ್ಕಾರ ಮುಂದಿನ ದಿನಗಳಲ್ಲಿ ಈ ಯೋಜನೆಯ ಲೆಕ್ಕಾಚಾರ ಯಾವ ರೀತಿ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
Views: 0