MusicGen ಮೆಟಾದ ಸ್ವಂತ ಸಂಗೀತ ಲೈಬ್ರರಿಯನ್ನು ಬಳಸಿಕೊಂಡು ಪಠ್ಯ ಇನ್‌ಪುಟ್‌ಗಳಿಂದ ಸಂಗೀತವನ್ನು ರಚಿಸಬಹುದು. ಆಡಿಯೋಜೆನ್ ಹೊರಗಿನ ಸೌಂಡ್ಗಳ ಆಡಿಯೋವನ್ನು ಉಪಯೋಗಿಸಿ ರಚಿಸಬಹುದು.

ಪ್ರಸಿದ್ಧ ಮೆಟಾ (Meta) ಕಂಪನಿ ಆಡಿಯೋ ಕ್ರಾಫ್ಟ್ ಎಂಬ ಹೊಸ ಓಪನ್ ಸೋರ್ಸ್ ಎಐ ಟೂಲ್ ಅನ್ನು ಬಿಡುಗಡೆ ಮಾಡಿದೆ. ಸರಳ ಪಠ್ಯದಿಂದ ಆಡಿಯೋ ಮತ್ತು ಸಂಗೀತವನ್ನು ಕ್ರಿಯೆಟ್ ಮಾಡಲು ವೃತ್ತಿಪರ ಸಂಗೀತಗಾರರು ಮತ್ತು ಇತರೆ ಬಳಕೆದಾರರನ್ನು ಸಕ್ರಿಯಗೊಳಿಸಲು ಈ ಉಪಕರಣವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಆಡಿಯೋಕ್ರಾಫ್ಟ್ ಒಟ್ಟು MusicGen, AudioGen ಮತ್ತು EnCodec ಎಂದು ಮೂರು ಮಾದರಿಗಳಿಂದ ಮಾಡಲ್ಪಟ್ಟಿದೆ.
MusicGen ಮೆಟಾದ ಸ್ವಂತ ಸಂಗೀತ ಲೈಬ್ರರಿಯನ್ನು ಬಳಸಿಕೊಂಡು ಪಠ್ಯ ಇನ್‌ಪುಟ್‌ಗಳಿಂದ ಸಂಗೀತವನ್ನು ರಚಿಸಬಹುದು. ಆಡಿಯೋಜೆನ್ ಹೊರಗಿನ ಸೌಂಡ್ಗಳ ಆಡಿಯೋವನ್ನು ಉಪಯೋಗಿಸಿ ರಚಿಸಬಹುದು. ಇದರಲ್ಲಿ ಎನ್‌ಕೋಡೆಕ್ ಡಿಕೋಡರ್ ಅನ್ನು ಸುಧಾರಿಸಲಾಗಿದೆ. ಅಂದರೆ ಅನಗತ್ಯ ಧ್ವನಿಯನ್ನು ತೆಗೆದು ಹಾಕಿ ಉತ್ತಮ-ಗುಣಮಟ್ಟದ ಸಂಗೀತವನ್ನು ರಚಿಸಲು ಇದು ಅನುವು ಮಾಡಿಕೊಡುತ್ತದೆ.
ಸದ್ಯ ಮೆಟಾ ತಮ್ಮ ಪೂರ್ವ-ತರಬೇತಿ ಪಡೆದ ಆಡಿಯೋಜೆನ್ ಅನ್ನು ಲಭ್ಯವಾಗುವಂತೆ ಮಾಡಿದೆ. ಇದು ಬಳಕೆದಾರರಿಗೆ ಹೊರಗಿನ ಶಬ್ದಗಳು ಅಂದರೆ ನಾಯಿಗಳು ಬೊಗಳುವುದು, ಕಾರುಗಳ ಹಾರ್ನ್ನಂತಹ ಧ್ವನಿಯನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಆಡಿಯೋ ಕ್ರಾಫ್ಟ್ ಇದಕ್ಕೆ ಅಗತ್ಯವಿರುವ ಎಲ್ಲ ಕೋಡ್ ಅನ್ನು ಮೆಟಾ ಹಂಚಿಕೊಂಡಿದೆ.
AI ಚಿತ್ರಗಳು, ವಿಡಿಯೋ ಮತ್ತು ಪಠ್ಯದಲ್ಲಿ ನಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ ಎಂದು ಮೆಟಾ ಹೇಳಿಕೊಂಡಿದೆ. ಆಡಿಯೋ ಕ್ರಾಫ್ಟ್ ದೀರ್ಘಾವಧಿಯಲ್ಲಿ ಉತ್ತಮ ಗುಣಮಟ್ಟದ ಆಡಿಯೋವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಆಡಿಯೋಗಾಗಿ ಉತ್ಪಾದಕ ಮಾದರಿಗಳ ವಿನ್ಯಾಸವನ್ನು ಸರಳಗೊಳಿಸುತ್ತದೆ ಎಂದು ಹೇಳಿದೆ.