FASTag Recharge: ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಫಾಸ್ಟ್ಯಾಗ್ ತುಂಬಾ ಪ್ರಯೋಜನಕಾರಿ ಆಗಿದೆ. ಇದರ ಪ್ರಯೋಜನವನ್ನು ಪಡೆಯಲು ನೀವು ಸೂಕ್ತ ಸಮಯದಲ್ಲಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡಿಸುವುದು ಕೂಡ ಅತ್ಯಗತ್ಯವಾಗಿದೆ. ನೀವು ಇರುವಲ್ಲಿಯೇ ಆನ್ಲೈನ್ನಲ್ಲಿ ಬಹಳ ಸುಲಭವಾಗಿ ಫಾಸ್ಟ್ಯಾಗ್ ರೀಚಾರ್ಜ್ ಮಾಡಬಹುದು.

FASTag Recharge: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಎಕ್ಸ್ಪ್ರೆಸ್ವೇಗಳು ಮತ್ತು ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಎಕ್ಸ್ಪ್ರೆಸ್ವೇಯಲ್ಲಿ ಪಾಸ್ ಆಗುವಾಗ ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುವುದನ್ನು ತಪ್ಪಿಸಲು ಸರ್ಕಾರವು ಫಾಸ್ಟ್ಟ್ಯಾಗ್ ಅನ್ನು ಪ್ರಾರಂಭಿಸಿದೆ. ಫಾಸ್ಟ್ಟ್ಯಾಗ್ ಬಳಕೆಯಿಂದ ಟೋಲ್ ಪ್ಲಾಜಾಗಳಲ್ಲಿ ಉದ್ದನೆಯ ಸಾಲುಗಳಲ್ಲಿ ಕಾಯುವುದರಿಂದ ವಿನಾಯಿತಿ ಪಡೆಯಬಹುದು.
ತಂತ್ರಜ್ಞಾನದ ಸಹಾಯದಿಂದ ಫಾಸ್ಟ್ಟ್ಯಾಗ್ ಖಾತೆಯಿಂದ ಟೋಲ್ ತೆರಿಗೆಯನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಆದರೆ, ಇದಕ್ಕಾಗಿ ನಿಮ್ಮ ಫಾಸ್ಟ್ಟ್ಯಾಗ್ ನಲ್ಲಿ ಹಣ ಇರುವುದು ಮುಖ್ಯ. ಹಲವು ಬಾರಿ ಟೋಲ್ ಪ್ಲಾಜಾ ಬಳಿ ತಲುಪಿದಾಗ ನಮ್ಮ ಫಾಸ್ಟ್ಟ್ಯಾಗ್ ನಲ್ಲಿ ಬಾಲನ್ಸ್ ಇಲ್ಲ ಎಂಬುದು ತಿಳಿಯುತ್ತದೆ. ಅಂತಹ ಸಂದರ್ಭದಲ್ಲಿ ಗಾಬರಿಯಾಗುವ ಅಗತ್ಯವಿಲ್ಲ. ಬದಲಿಗೆ, ಕೆಲವು ಸುಲಭ ಮಾರ್ಗಗಳನ್ನು ಅನುಸರಿಸುವ ಮೂಲಕ ನೀವು ಕೆಲವೇ ಕ್ಷಣಗಳಲ್ಲಿ ಸುಲಭವಾಗಿ ಫಾಸ್ಟ್ಟ್ಯಾಗ್ ರಿಚಾರ್ಜ್ ಮಾಡಬಹುದು.
ಫಾಸ್ಟ್ಯಾಗ್ ರೀಚಾರ್ಜ್ ಮಾಡಲು ಐದು ಅತ್ಯುತ್ತಮ ಮಾರ್ಗಗಳಿವು:
ಕಂಪನಿ ವೆಬ್ಸೈಟ್:
ಫಾಸ್ಟ್ಯಾಗ್ ನೀಡಿದ ಕಂಪನಿಯ ವೆಬ್ಸೈಟ್ ಮೂಲಕ ಫಾಸ್ಟ್ಯಾಗ್ ಅನ್ನು ಸುಲಭವಾಗಿ ರೀಚಾರ್ಜ್ ಮಾಡಬಹುದು. ಇದಲ್ಲದೆ, ಆನ್ಲೈನ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ಫಾಸ್ಟ್ಟ್ಯಾಗ್ ಅನ್ನು ಸುಲಭವಾಗಿ ರೀಚಾರ್ಜ್ ಮಾಡಬಹುದು. ಇದಕ್ಕಾಗಿ ಮೊದಲು ನೀವು ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಡಿಜಿಟಲ್ ವ್ಯಾಲೆಟ್ಗಳಿಗೆ ನಿಮ್ಮ ಫಾಸ್ಟ್ಟ್ಯಾಗ್ ಖಾತೆಯನ್ನು ಲಿಂಕ್ ಮಾಡಿರಬೇಕು.
ಮೊಬೈಲ್ ವ್ಯಾಲೆಟ್ ಅಪ್ಲಿಕೇಶನ್ಗಳು:
ನಿಮ್ಮ ಮೊಬೈಲ್ ವ್ಯಾಲೆಟ್ ಅಪ್ಲಿಕೇಶನ್ಗಳ ಮೂಲಕವೂ ಸಹ ನೀವು ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡಬಹುದು. ಇದಕ್ಕಾಗಿ ಫೋನ್ನಲ್ಲಿ ಯಾವುದೇ ಮೊಬೈಲ್ ವ್ಯಾಲೆಟ್ ಅಪ್ಲಿಕೇಶನ್ ಅನ್ನು ಸ್ಥಾಪಿಸಿ, ನಿಮ್ಮ ಫಾಸ್ಟ್ಟ್ಯಾಗ್ ಖಾತೆಯನ್ನು ಇದರೊಂದಿಗೆ ಲಿಂಕ್ ಮಾಡಿರಬೇಕು ಎಂಬುದನ್ನೂ ನೆನಪಿನಲ್ಲಿಡಿ.
UPI:
ಕೆಲವು ಬ್ಯಾಂಕ್ಗಳು ಮತ್ತು ಪಾವತಿ ಅಪ್ಲಿಕೇಶನ್ಗಳು ಯುಪಿಐ ಮೂಲಕ ಫಾಸ್ಟ್ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತವೆ. ಇದಕ್ಕಾಗಿ ಮೊದಲು ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅಪ್ಲಿಕೇಶನ್ ತೆರೆಯಿರಿ. ನಂತರ, ನಿಗದಿತ ಜಾಗದಲ್ಲಿ ಯುಪಿಐ ಐಡಿ ಅನ್ನು ನಮೂದಿಸಿ ಬಳಿಕ ನೀವು ರೀಚಾರ್ಜ್ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ ವಹಿವಾಟನ್ನು ಪೂರ್ಣಗೊಳಿಸಿ.
ನೆಟ್ ಬ್ಯಾಂಕಿಂಗ್:
ನೀವು ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ ನೆಟ್ ಬ್ಯಾಂಕಿಂಗ್ ಪೋರ್ಟಲ್ ಮೂಲಕ ಫಾಸ್ಟ್ಯಾಗ್ ರೀಚಾರ್ಜ್ ಸೌಲಭ್ಯವನ್ನು ಒದಗಿಸುತ್ತವೆ. ಇದಕ್ಕಾಗಿ ನೆಟ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ ಗೆ ಹೋಗಿ ಲಾಗಿನ್ ಆಗಿ. ಫಾಸ್ಟ್ಟ್ಯಾಗ್ ರೀಚಾರ್ಜ್ ಆಯ್ಕೆಯನ್ನು ಆರಿಸಿ ಅಗತ್ಯ ಮಾಹಿತಿಗಳನ್ನು ಒದಗಿಸಿ ರಿಚಾರ್ಜ್ ಮಾಡಬಹುದು.
NEFT:
ನೀವು NEFT ಮೂಲಕವೂ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡಬಹುದು.
Source : https://zeenews.india.com/kannada/business/here-are-five-easy-ways-to-recharge-fastag-151034