India-Pakistan Hockey: ಭಾರತ ಮತ್ತು ಪಾಕಿಸ್ತಾನವು ಜಪಾನ್, ಬಾಂಗ್ಲಾದೇಶ, ಸಿಂಗಾಪುರ್ ಮತ್ತು ಉಜ್ಬೇಕಿಸ್ತಾನ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 24 ರಂದು ಉಜ್ಬೇಕಿಸ್ತಾನ್ ವಿರುದ್ಧ ಆಡಲಿದೆ.

India-Pakistan Hockey in Asian Games: ಚೀನಾದ ಹ್ಯಾಂಗ್’ಝೌ’ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್’ಗಾಗಿ ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡವನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದ್ದು, ಈ ಎರಡೂ ತಂಡಗಳು ಸೆಪ್ಟೆಂಬರ್ 30 ರಂದು ಮುಖಾಮುಖಿಯಾಗಲಿವೆ.
ಭಾರತ ಮತ್ತು ಪಾಕಿಸ್ತಾನವು ಜಪಾನ್, ಬಾಂಗ್ಲಾದೇಶ, ಸಿಂಗಾಪುರ್ ಮತ್ತು ಉಜ್ಬೇಕಿಸ್ತಾನ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 24 ರಂದು ಉಜ್ಬೇಕಿಸ್ತಾನ್ ವಿರುದ್ಧ ಆಡಲಿದೆ. ಅದರ ನಂತರ ಸಿಂಗಾಪುರ (ಸೆಪ್ಟೆಂಬರ್ 26), ಜಪಾನ್ (ಸೆಪ್ಟೆಂಬರ್ 28), ಪಾಕಿಸ್ತಾನ (ಸೆಪ್ಟೆಂಬರ್ 30) ಮತ್ತು ಬಾಂಗ್ಲಾದೇಶ (ಅಕ್ಟೋಬರ್ 2) ವಿರುದ್ಧ ಪಂದ್ಯಗಳು ನಡೆಯಲಿವೆ.
ಭಾರತ ಮಹಿಳಾ ಹಾಕಿ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಹಾಂಕಾಂಗ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳನ್ನು ಎದುರಿಸಲಿದೆ. ಭಾರತ ಮಹಿಳಾ ತಂಡ ಸೆಪ್ಟೆಂಬರ್ 27 ರಂದು ಸಿಂಗಾಪುರ ವಿರುದ್ಧ ಅಭಿಯಾನ ಆರಂಭಿಸಲಿದೆ. ಪುರುಷರ ಫೈನಲ್ ಪಂದ್ಯ ಅಕ್ಟೋಬರ್ 6 ರಂದು ನಡೆಯಲಿದ್ದು, ಮಹಿಳೆಯರ ತಂಡ ಪ್ರಶಸ್ತಿ ಸುತ್ತಿನ ಪಂದ್ಯ ಅಕ್ಟೋಬರ್ 7 ರಂದು ನಡೆಯಲಿದೆ.