Solar Car Vayve EVA: ಮಾರುಕಟ್ಟೆಯಲ್ಲಿ ಪ್ರತಿದಿನ ಹೊಸ ಹೊಸ ರೀತಿಯ ಕಂಪನಿ ಕಾರುಗಳು ಬಿಡುಗಡೆಯಾಗುತ್ತಿರುತ್ತವೆ. ಇದೀಗ ಭಾರತದಲ್ಲಿ ಗ್ರೇಟರ್ ರೀತಿಯ ವಾಹನಗಳನ್ನು ಪರಿಚಯಿಸಲಾಗಿದ್ದು, ಇದರಿಂದ ಪೆಟ್ರೋಲ್, ಡೀಸೆಲ್, ಚಾರ್ಜಿಂಗ್ ಇವೆಲ್ಲದರ ಖರ್ಚನ್ನು ಉಳಿಸಬಹುದಾಗಿದೆ.

Solar Car : ಸದ್ಯದ ಪರಿಸ್ಥಿತಿಯಲ್ಲಿ ಕಾರು ಖರೀದಿಸಬೇಕೆಂಬುದು ಎಲ್ಲರ ಆಸೆ. ಹೊಸ ಹೊಸ ಕಂಪನಿಗಳು ವಿವಿಧ ರೀತಿಯ ಕಾರುಗಳನ್ನು ಪರಿಚಯಿಸುತ್ತಿವೆ. ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇನ್ನು ಕಾರ್ ಖರೀದಿಸಿದವರು ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಹಾಕುವುದಕ್ಕೆ ಕಷ್ಟಪಡುತ್ತಿದ್ದಾರೆ. ಇಂತಹ ಜನರಿಗೆ ಸಹಾಯವಾಗಲೇಂದೆ ಮತ್ತು ಪೆಟ್ರೋಲ್ ಡೀಸೆಲ್ ಖರ್ಚನ್ನು ಕಡಿಮೆ ಮಾಡಲು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದೆ. ಈ ತೈಲಗಳ ಬೆಲೆ ಹೆಚ್ಚಳದಿದಾಗಿ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಸದ್ಯ ಪೆಟ್ರೋಲ್, ಡೀಸೆಲ್, ಚಾರ್ಜಿಂಗ್ ಇವೆಲ್ಲದರ ಖರ್ಚನ್ನು ಉಳಿಸಲು ಹೊಸ ತಂತ್ರಜ್ಞಾನ ಬಿಡುಗಡೆಯಾಗಿದ್ದು, ಪುಣೆಯ ಸ್ಟಾರ್ಟ್ ಅಪ್ ಕಂಪನಿ ವೇವ್ ಮೊಬಿಲಿಟಿ ಭಾರತದ ಮೊದಲ ಸೋಲಾರ್ ಕಾರನ್ನು ಲಾಂಚ್ ಮಾಡಿದೆ. 3 ಜನ ಈ ಕಾರಿನಲ್ಲಿ ಕುಳಿತುಕೊಳ್ಳಬಹುದಾಗಿದೆ. ಈ ಕಾರಿನ ವಿಶೇಷ ಏನೆಂದರೆ ಕಾರನ್ನು 45 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಿ 250 ಕೀ ಮೀ ಓಡಿಸಬಹುದಾಗಿದ್ದು, ಇದು ಬ್ಯಾಟರಿ ಚಾಲಿತ ಸಿಂಗಲ್ ಡೋರ್ ಕಾರಾಗಿದೆ.
ಈ ಸೋಲಾರ್ ಕಾರ್ 6 kW ಲಿಕ್ವಿಡ್ ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಿದ್ದು, 14 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ 250 ಕಿಮೀ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ. ಮನೆಯ ಸಾಕೆಟ್‌ನಿಂದ 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಇನ್ನು ಈ ಕಾರು ಗಾತ್ರದಲ್ಲಿ ಟಾಟಾ ನ್ಯಾನೊವನ್ನು ಹೋಲುತ್ತದೆ. ಕಂಪನಿಯು ಈ ಕಾರ್‌ನ್ನು 7 ಲಕ್ಷ ಬೆಲೆಯನ್ನು ನಿಗಧಿಪಡಿಸಿದೆ.