Private Bus Fares Hike: ಆಗಸ್ಟ್ ಸೇರಿ ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆ ಇರುವ ಕಾರಣ ಬೆಂಗಳೂರು ಬಿಟ್ಟು ವಾಸಸ್ಥಳಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದಾರೆ.

ಬೆಂಗಳೂರು: ಆಗಸ್ಟ್ ಸೇರಿ ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆ ಇರುವ ಕಾರಣ ಬೆಂಗಳೂರು ಬಿಟ್ಟು ವಾಸಸ್ಥಳಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದಾರೆ. ಖಾಸಗಿ ಬಸ್‍ಗಳ ಟಿಕೆಟ್ ದರ ಒನ್ ಟು ಡಬಲ್ ಮಾಡಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದಾರೆ. ಬಸ್ ಬುಕ್ಕಿಂಗ್ ಹೆಚ್ಚಳವಾಗ್ತಿದ್ದಂತೆ ಏಕಾಏಕಿ ಟಿಕೆಟ್ ದರ ಏರಿಸಿರುವ ಖಾಸಗಿ ಬಸ್‍ಗಳು ಪ್ರತಿ ಟಿಕೆಟ್‍ಗೆ ಶೇ.50 ರಿಂದ 60ರಷ್ಟು ಏರಿಕೆ ಮಾಡಿದ್ದಾರೆ.
ಟಿಕೆಟ್ ಬುಕ್ಕಿಂಗ್ ಆ್ಯಪ್‍ನಲ್ಲಿ ಒನ್ ಟು ಡಬಲ್ ರೇಟ್
1. ಬೆಂಗಳೂರು-ಶಿವಮೊಗ್ಗ
ಇಂದಿನ ಟಿಕೆಟ್ ದರ ₹450-₹55೦
ನಾಳೆಯ ಟಿಕೆಟ್ ದರ ₹1100-₹1200
2. ಬೆಂಗಳೂರು- ಹುಬ್ಬಳಿ
ಇಂದಿನ ಟಿಕೆಟ್ ದರ ₹700-₹900
ನಾಳೆಯ ಟಿಕೆಟ್ ದರ ₹1100-₹1600
3. ಬೆಂಗಳೂರು-ಮಂಗಳೂರು
ಇಂದಿನ ಟಿಕೆಟ್ ದರ ₹850-₹900
ನಾಳೆಯ ಟಿಕೆಟ್ ದರ ₹1400-₹2100
4. ಬೆಂಗಳೂರು – ಉಡುಪಿ
ಇಂದಿನ ಟಿಕೆಟ್ ದರ(ನಾನ್ ಎಸಿ) ₹750-₹950
ನಾಳೆಯ ಟಿಕೆಟ್ ದರ ₹1350-₹2400
ಇಂದಿನ ಟಿಕೆಟ್ ದರ(ಎಸಿ) ₹1000-₹1200
ನಾಳೆಯ ಟಿಕೆಟ್ ದರ ₹2100-₹3500
5. ಬೆಂಗಳೂರು-ಧಾರವಾಡ
ಇಂದಿನ ಟಿಕೆಟ್ ದರ ₹800-₹1000
ನಾಳೆಯ ಟಿಕೆಟ್ ದರ ₹1300-₹1600
6. ಬೆಂಗಳೂರು-ಬೆಳಗಾವಿ
ಇಂದಿನ ಟಿಕೆಟ್ ದರ ₹750-₹1100
ನಾಳೆಯ ಟಿಕೆಟ್ ದರ ₹1200-₹1900
7. ಬೆಂಗಳೂರು – ದಾವಣಗೆರೆ
ಇಂದಿನ ಟಿಕೆಟ್ ದರ ₹ 500-₹700
ನಾಳೆಯ ಟಿಕೆಟ್ ದರ ₹750-₹1200
8. ಬೆಂಗಳೂರು – ಚಿಕ್ಕಮಗಳೂರು
ಇಂದಿನ ಟಿಕೆಟ್ ದರ ₹650-₹800
ನಾಳೆಯ ಟಿಕೆಟ್ ದರ ₹1200-₹1500
9. ಬೆಂಗಳೂರು – ಹಾಸನ
ಇಂದಿನ ಟಿಕೆಟ್ ದರ ₹750- ₹950
ನಾಳೆಯ ಟಿಕೆಟ್ ದರ ₹1300-₹1800