Chinese Fried Rice : ಉಳಿದ ಅನ್ನದಿಂದ ಚೈನೀಸ್‌ ಫ್ರೈಡ್ ರೈಸ್ ಮಾಡುವ ವಿಧಾನ

Chinese Fried Rice Recipe : ರಸ್ತೆ ಬದಿ ತಯಾರಿಸುವ ಚೈನೀಸ್‌ ಫ್ರೈಡ್ ರೈಸ್ ಅನ್ನು ಮನೆಯಲ್ಲೇ ಮಾಡಬಹುದು. ಈ ಚೈನೀಸ್‌ ಫ್ರೈಡ್ ರೈಸ್ ರುಚಿ ನಿಮ್ಮ ಮನೆಯವರ ಮನ ಗೆಲ್ಲುತ್ತದೆ. 

Chinese Fried Rice Recipe : ಮನೆಯಲ್ಲಿ ಅಡುಗೆ ಮಾಡಿದಾಗ ಸಾಮಾನ್ಯವಾಗಿ ಅನ್ನ ಉಳಿಯುತ್ತದೆ. ತಂಗಳು ಅನ್ನವನ್ನು ಹಾಗೆಯೇ ತಿನ್ನಲು ಕೆಲವರು ಇಷ್ಟ ಪಡುವುದಿಲ್ಲ. ಇಂತಹ ಸಮಯದಲ್ಲಿ ರಸ್ತೆ ಬದಿ ತಯಾರಿಸುವ ಚೈನೀಸ್‌ ಫ್ರೈಡ್ ರೈಸ್ ಅನ್ನು ಮನೆಯಲ್ಲೇ ಮಾಡಬಹುದು. ಈ ಚೈನೀಸ್‌ ಫ್ರೈಡ್ ರೈಸ್ ರುಚಿ ನಿಮ್ಮ ಮನೆಯವರ ಮನ ಗೆಲ್ಲುತ್ತದೆ. 

ಚೈನೀಸ್‌ ಫ್ರೈಡ್ ರೈಸ್ ಮಾಡಲು ಬೇಕಾದ ಸಾಮಗ್ರಿಗಳು : 

ಉಳಿದ ಅನ್ನ – 1 ಬೌಲ್‌ 

ಎಣ್ಣೆ –  4 ರಿಂದ 5 ಚಮಚ

ಈರುಳ್ಳಿ – 2 

ಕ್ಯಾರೆಟ್, ಬೀನ್ಸ್ – 1 ಕಪ್‌ 

ಉಪ್ಪು – ರುಚಿಗೆ ತಕ್ಕಷ್ಟು

ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು

ಚಿಲ್ಲಿ ಫ್ಲೇಕ್ಸ್ – ಸ್ವಲ್ಪ 

ಫ್ರೈಡ್ ರೈಸ್ ಮಸಾಲಾ – 1/2 ಸ್ಪೂನ್‌

ಕೆಚಪ್ ಮತ್ತು ವಿನೆಗರ್ – 1 ಚಮಚ 

ಚೈನೀಸ್‌ ಫ್ರೈಡ್ ರೈಸ್ ಮಾಡುವ ವಿಧಾನ : 

ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ ಮತ್ತು ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಮತ್ತು ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ ಚೆನ್ನಾಗಿ ಬೆಂದಾಗ ಅದಕ್ಕೆ ಕತ್ತರಿಸಿದ ಕ್ಯಾರೆಟ್ ಮತ್ತು ಬೀನ್ಸ್ ಹಾಕಿ ಎರಡು ಮೂರು ನಿಮಿಷ ಫ್ರೈ ಮಾಡಿ. ಈಗ ಅದಕ್ಕೆ ಉಪ್ಪು, ಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ಫ್ರೈಡ್ ರೈಸ್ ಮಸಾಲಾ, ಕೆಚಪ್ ಮತ್ತು ವಿನೆಗರ್ ಸೇರಿಸಿ, ಈಗ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

ಈಗ ಇದಕ್ಕೆ ಬೇಯಿಸಿದ ಅನ್ನವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮುಚ್ಚಳವನ್ನು ಮುಚ್ಚಿ ಮತ್ತು ಒಂದು ನಿಮಿಷ ಅಥವಾ 2 ನಿಮಿಷಗಳ ಕಾಲ ಬೇಯಲು ಬಿಡಿ. ಇದರಿಂದ ಮಸಾಲದ ಸುವಾಸನೆಯು ಅನ್ನಕ್ಕೆ ಚೆನ್ನಾಗಿ ಬೆರೆಯುತ್ತದೆ. ಈಗ ಬಿಸಿಯಾದ ಫ್ರೈಡ್ ರೈಸ್ ಸಿದ್ಧವಾಗಿದೆ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಬಡಿಸಿ.

Source : https://zeenews.india.com/kannada/lifestyle/how-to-make-chinese-fried-rice-152345

Views: 0

Leave a Reply

Your email address will not be published. Required fields are marked *