Akshay kumar gets indian citizenship : ಕೆನಡಾ ದೇಶದ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇದೀಗ ಭಾರತೀಯ ಪೌರತ್ವ ಪಡೆದಿದ್ದಾರೆ. ಈ ಕುರಿತು ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.

Akshay Kumar : ಸದ್ಯ ನಾವು 77ನೇ ಸ್ವಾತಂತ್ಯ ದಿನವನ್ನು ಆಚರಿಸುತ್ತಿದ್ದೇವೆ. ಇದೇ ಸಮಯದಲ್ಲಿ ಅಕ್ಷಯ್ ಕುಮಾರ್ ಭಾರತೀಯ ಪೌರತ್ವ ದೊರೆತಿರುವ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡು ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸಿದ್ದಾರೆ.
ಇನ್ನು ಅಕ್ಷಯ್ ಕುಮಾರ್ ಪೌರತ್ವದ ವಿಚಾರವಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಇನ್ನು ವರ್ಷದ ಆರಂಭದಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ನಟ ಅಕ್ಷಯ್ ಕುಮಾರ್ ಭಾರತವೆಂದರೇ ನನಗೆ ಸರ್ವಸ್ವ..ಅದಕ್ಕೆ ನಾನು ಇಲ್ಲಿನ ಪೌರತ್ವ ಪಡೆಯಲು ಈಗಾಗಲೇ ಪಾಸ್‌ಪೋರ್ಟ್ ಬದಲಾವಣೆಗೆ ಅರ್ಜಿಯನ್ನು ಸಲ್ಲಸಿದ್ದೇನೆ ಎಂದು ಹೇಳಿದ್ದರು.
1990 ರ ದಶಕದಲ್ಲಿ ಸತತ 15 ಕ್ಕೂ ಹೆಚ್ಚು ಫ್ಲಾಪ್ ಸಿನಿಮಾಗಳನ್ನು ನೀಡಿದ್ದ ಅಕ್ಷಯ್ ಕುಮಾರ್ ಅನಿವಾರ್ಯವಾಗಿ ಕೆನಡಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾಯಿತು ಎಂದು ಹೇಳಿಕೊಂಡಿದ್ದರು. ಈ ನಿರ್ಧಾರ ತಮ್ಮ ಜೀವನದಲ್ಲಿ ತೆಗೆದುಕೊಂಡ ಅತ್ಯಂತ ದೊಡ್ಡ ಮತ್ತು ಕಠಿಣ ನಿರ್ಧಾರ ಎಂದು ತಿಳಿಸಿದ್ರು.
2019 ರ ಲೋಕಸಭಾ ಚುನಾವಣೆಯಲ್ಲಿ ಅಕ್ಷಯ್ ಕುಮಾರ್ ವೋಟ್ ಮಾಡಿದಾಗಲೂ ಸಾಕಷ್ಟು ಟೀಕೆಗಳು ಬಂದಿದ್ದವು. ಇದಕ್ಕಿಂತ ಮುಂಚೆ ಅಕ್ಷಯ್ ಕುಮಾರ್ ಮೋದಿ ಅವರನ್ನು ರಾಜಕೀಯೇತರ ಸಂದರ್ಶನ ಮಾಡಿದ್ದರು ಆಗಲೂ ಪೌರತ್ವದ ವಿಚಾರವಾಗಿ ಅಕ್ಷಯ್ ಕುಮಾರ್ ಚರ್ಚೆಯಲ್ಲಿದ್ದರು.
Views: 0