Tatsama Tadbhava Movie : ಮೇಘನಾ ರಾಜ್ ನಟಿಸಿರುವ “ತತ್ಸಮ ತದ್ಭವ” ಚಿತ್ರದ ಮೊದಲ ಹಾಡು “ದೂರಿ ಲಾಲಿ” ಇತ್ತೀಚೆಗೆ Betel music youtube channal ಮೂಲಕ ಬಿಡುಗಡೆಯಾಗಿದೆ.

Tatsama Tadbhava Movie : ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ “ತತ್ಸಮ ತದ್ಭವ”. ಪನ್ನಗ ಭರಣ , ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಜಂಟಿಯಾಗಿ ನಿರ್ಮಿಸಿರುವ ಹಾಗೂ ವಿಶಾಲ್ ಆತ್ರೇಯ ನಿರ್ದೇಶನದ “ತತ್ಸಮ ತದ್ಭವ” ಚಿತ್ರದ ಮೊದಲ ಹಾಡು “ದೂರಿ ಲಾಲಿ” ಇತ್ತೀಚೆಗೆ Betel music youtube channal ಮೂಲಕ ಬಿಡುಗಡೆಯಾಗಿದೆ.
“ತತ್ಸಮ ತದ್ಭವ” ಚಿತ್ರದ ಮೊದಲ ಹಾಡು “ದೂರಿ ಲಾಲಿ” ಜನರ ಮನ ಗೆಲ್ಲುತ್ತಿದೆ. ವಾಸುಕಿ ವೈಭವ್ ಅವರೇ ಬರೆದು ಈ ಹಾಡಿಗೆ ಸಂಗೀತ ನೀಡಿದ್ದಾರೆ. ಸುನಿಧಿ ಗಣೇಶ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಮೇಘನಾ ರಾಜ್ ಹಾಗೂ ಮಹತಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಮೇಘನಾ ರಾಜ್ ಅಭಿನಯಕ್ಕೆ ಜನರು ಮನಸೋತಿದ್ದಾರೆ.
ಇದೀಗ “ತತ್ಸಮ ತದ್ಭವ” ಚಿತ್ರತಂಡ ಜನರಿಗೆ ಟಾಸ್ಕ್ ಒಂದನ್ನು ನೀಡಿದೆ. ತನ್ನ ಮೊದಲ ಹಾಡಿನ ಕುರಿತಾಗಿ ಈ ಟಾಸ್ಕ್ ನೀಡಲಾಗಿದೆ. ಜನಪ್ರಿಯವಾಗುತ್ತಿರುವ “ದೂರಿ ಲಾಲಿ” ಹಾಡನ್ನು ಹಾಡುತ್ತಾ ತಾಯಿಯಂದಿರು ತಮ್ಮ ಮಗುವನ್ನು ಹೇಗೆ ಮಲಗಿಸುತ್ತಾರೆ? ಎಂಬ ವಿಡಿಯೋವನ್ನು ಮಾಡಿ ಪೋಸ್ಟ್ ಮಾಡಬೇಕು.
ಮಗುವಿಗೆ ಲಾಲಿ ಹಾಡಿ ಮಲಗಿಸುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಮೂಲಕ @megsraj @prajwaldevaraj @pannagabharana @vishal.atreya @vasuki_vaibhav_ @pbstudios_productions @anvitcinemas @tatsamatadbhava @betelmusic.in ಐಡಿಗಳಿಗೆ ಟ್ಯಾಗ್ ಮಾಡಬೇಕು. ಈ ವಿಡಿಯೋಗಳಲ್ಲಿ ಮೂರು ವಿಡಿಯೋಗಳನ್ನು ಆಯ್ಕೆ ಮಾಡಲಾಗುವುದು.
ಆಯ್ಕೆಯಾದ ಆ ಮೂವರು ತಮ್ಮ ಮಕ್ಕಳೊಂದಿಗೆ ಮೇಘನಾ ರಾಜ್ ಅವರನ್ನು ಭೇಟಿ ಮಾಡುವ ಅವಕಾಶ ಪಡೆಯುತ್ತಾರೆ. ಅಲ್ಲದೇ ಮೇಘನಾ ರಾಜ್ ಅವರೊಂದಿಗೆ ಊಟ ಮಾಡುತ್ತಾ ಕೆಲವು ವಿಷಯಗಳನ್ನು ಹಂಚಿಕೊಳ್ಳಬಹುದು ಎಂದು ಚಿತ್ರತಂಡ ತಿಳಿಸಿದೆ.