LPG Gas Cylinder: ಕಾಲಕಾಲಕ್ಕೆ ಎಲ್ ಪಿ ಜಿ ಗ್ಯಾಸ್ ಖಾಲಿಯಾದ ನಂತರ ಸಿಲಿಂಡರ್’ಗಳನ್ನು ಬುಕ್ಕಿಂಗ್ ಮಾಡಬೇಕು, ಆದರೆ ಸಿಲಿಂಡರ್ ಬೆಲೆ ನೋಡಿದರೆ ಅಯ್ಯೋ ಎಂದು ತಲೆ ಮೇಲೆ ಕೈಯಿಟ್ಟು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

LPG Gas Cylinder: LPG ಗ್ಯಾಸ್ ಅನ್ನು ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಗಳಲ್ಲೂ ಬಳಕೆ ಮಾಡಲಾಗುತ್ತದೆ. ಜನರು ಸುಲಭವಾಗಿ ಅಡುಗೆ ಮಾಡಲು ಇದನ್ನು ಬಳಸುತ್ತಾರೆ. ಆದರೆ ಬೆಲೆ ಏರಿಕೆ ಸಮಸ್ಯೆ ಮಧ್ಯಮ ವರ್ಗದ ಮತ್ತು ಬಡ ಕುಟುಂಬದ ಜನತೆಗೆ ಸಂಕಷ್ಟ ತಂದೊಡ್ಡಿದೆ.
ಕಾಲಕಾಲಕ್ಕೆ ಎಲ್ ಪಿ ಜಿ ಗ್ಯಾಸ್ ಖಾಲಿಯಾದ ನಂತರ ಸಿಲಿಂಡರ್’ಗಳನ್ನು ಬುಕ್ಕಿಂಗ್ ಮಾಡಬೇಕು, ಆದರೆ ಸಿಲಿಂಡರ್ ಬೆಲೆ ನೋಡಿದರೆ ಅಯ್ಯೋ ಎಂದು ತಲೆ ಮೇಲೆ ಕೈಯಿಟ್ಟು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಾವಿಂದು ಈ ಸಮಸ್ಯೆಗೆ ಸುಲಭ ಪರಿಹಾರವನ್ನು ತಂದಿದ್ದು, ಇದು ನಿಮಗೆ ಭಾರೀ ರಿಯಾಯಿತಿಯನ್ನು ನೀಡಲಿದೆ.
ಪ್ರಸ್ತುತ ಯುಗವು ಡಿಜಿಟಲ್ ಯುಗವಾಗಿದೆ ಮತ್ತು ಹೆಚ್ಚಿನ ಕೆಲಸಗಳನ್ನು ಆನ್’ಲೈನ್ ಮೂಲಕವೇ ಮಾಡಲಾಗುತ್ತದೆ. ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಕೂಡ ಆನ್ಲೈನ್’ನಲ್ಲಿಯೂ ಮಾಡಬಹುದು. ಹೀಗೆ ಮಾಡುವುದರಿಂದ ಸುಲಭವಾಗಿ ಬುಕ್ ಆಗುವುದಲ್ಲದೆ, ಆನ್’ಲೈನ್’ನಲ್ಲಿ ಪಾವತಿ ಕೂಡ ಮಾಡಬಹುದು. ಇದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಸಹ ಗ್ರಾಹಕರು ಪಡೆಯುತ್ತಾರೆ.
ಜನರು ಆನ್ಲೈನ್’ನಲ್ಲಿ ಪಾವತಿಸಿದಾಗ, ಅನೇಕ ಅಪ್ಲಿಕೇಶನ್ಗಳು ಜನರಿಗೆ ರಿಯಾಯಿತಿ ಕೂಪನ್’ಗಳು ಅಥವಾ ಕ್ಯಾಶ್ಬ್ಯಾಕ್ ನೀಡುತ್ತವೆ. ಇದನ್ನು ಬಳಸುವುದರಿಂದ, ಜನರು ಸಿಲಿಂಡರ್ ಬುಕ್ಕಿಂಗ್ ಮಾಡುವಾಗ ರಿಯಾಯಿತಿ ಅಥವಾ ಕ್ಯಾಶ್ಬ್ಯಾಕ್ ಪಡೆಯುತ್ತಾರೆ. ರಿಯಾಯಿತಿ ಮತ್ತು ಕ್ಯಾಶ್ಬ್ಯಾಕ್ ಮೊತ್ತವು ಆನ್’ಲೈನ್ ಸಿಲಿಂಡರ್ ಅನ್ನು ಬುಕ್ ಮಾಡಿದ ಅಪ್ಲಿಕೇಶನ್ ಅನ್ನು ಅವಲಂಬಿಸಿರುತ್ತದೆ.
ರಿಯಾಯಿತಿ ಮತ್ತು ಕ್ಯಾಶ್ ಬ್ಯಾಕ್ ಹೊರತಾಗಿ ಗ್ರಾಹಕರು ಆನ್ಲೈನ್ ಬುಕ್ಕಿಂಗ್ ಮೂಲಕ ಈ ಕೆಳಗಿನ ಸೌಲಭ್ಯಗಳನ್ನು ಪಡೆಯುತ್ತಾರೆ.
– ಆನ್ಲೈನ್ ಬುಕಿಂಗ್’ಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ.
– LPG ರಿ-ಬುಕ್ ಮಾಡಲು ಸುರಕ್ಷಿತ ಮತ್ತು ಅನುಕೂಲಕರ ಮಾರ್ಗ.
– ಗ್ಯಾಸ್ ಏಜೆನ್ಸಿಗೆ ಭೇಟಿ ನೀಡುವ ಅಥವಾ ಡೀಲರ್ ಅನ್ನು ನಿಯಮಿತವಾಗಿ ಸಂಪರ್ಕಿಸುವ ಯಾವುದೇ ತೊಂದರೆ ಇಲ್ಲ.
– ಗ್ಯಾಸ್ ಸಿಲಿಂಡರ್ ಅನ್ನು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಬುಕ್ ಮಾಡಬಹುದು.
– ಸುಲಭ ಪಾವತಿ ವಿಧಾನ
– ಡೆಲಿವರಿ ಟ್ರ್ಯಾಕಿಂಗ್ ಸೇವೆ ಕೂಡ ಲಭ್