200 ರೂಪಾಯಿ ಅಲ್ಲ ಗ್ಯಾಸ್ ಸಿಲಿಂಡರ್ ಮೇಲೆ 400 ರೂಪಾಯಿ ದರ ಕಡಿತ ! ಯಾರಿಗೆ ಈ ಲಾಭ ?

LPG Gas Cylinder Price :ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ನಿರಂತರ ಹೊಸ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಂತೆ ಈಗ ಗ್ಯಾಸ್ ಸಿಲಿಂಡರ್ ದರವನ್ನು ಕೂಡಾ ಕಡಿಮೆ ಮಾಡಿದೆ. 

LPG Gas Cylinder Price : ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ನಿರಂತರ ಹೊಸ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈರುಳ್ಳಿಗೆ ರಫ್ತು ಸುಂಕವನ್ನು ವಿಧಿಸಿದ ನಂತರ, ಸರ್ಕಾರ ಈಗ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ದರವನ್ನು ಕಡಿತ ಮಾಡಿದೆ. ಸರ್ಕಾರದ ನಿರ್ಧಾರದ ನಂತರ ಈಗ ಎಲ್ಲಾ ಗೃಹಬಳಕೆದಾರರಿಗೆ ಗ್ಯಾಸ್ ಸಿಲಿಂಡರ್ 200 ರೂಪಾಯಿ ಅಗ್ಗವಾಗಿ ಸಿಗಲಿದೆ. ಇದಲ್ಲದೇ ಉಜ್ವಲ ಯೋಜನೆಯಡಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಸರ್ಕಾರ ಉಚಿತವಾಗಿ ನೀಡಲಿದೆ.

903 ರೂಪಾಯಿಗೆ ಸಿಲಿಂಡರ್ : 
ಸರ್ಕಾರದ ಈ ಹೆಜ್ಜೆಯನ್ನು ಚುನಾವಣಾ ಸಿದ್ಧತೆ ಎಂದೇ ಪರಿಗಣಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳವಾರ ಮೋದಿ  ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ. ಕಡಿತಗೊಳಿಸಿದೆ. 

ಯಾರಿಗೆ ಸಿಗಲಿದೆ. 400 ರೂ. ಕಡಿಮೆ ದರದಲ್ಲಿ ಎಲ್ ಪಿಜಿ : 
ಸರ್ಕಾರವು ಸಿಲಿಂಡರ್‌ ಮೇಲೆ  200ರೂಪಾಯಿ ಕಡಿತಗೊಳಿಸಿದ ನಂತರ, ಉಜ್ವಲ ಯೋಜನೆಯ ಫಲಾನುಭವಿಗಳು ಒಟ್ಟು 400 ರೂ. ಲಾಭವನ್ನು ಪಡೆಯುತ್ತಾರೆ. ಅವರಿಗೆ ಸರ್ಕಾರ ಈಗಾಗಲೇ 200 ರೂ.  ಸಬ್ಸಿಡಿ ನೀಡುತ್ತಿದೆ. ಈಗ ಮತ್ತೆ ಸಿಲಿಂಡರ್ ದರ 200 ರೂಪಾಯಿ ಕಡಿಮೆ ಮಾಡಿದ ನಂತರ ಉಜ್ವಲ ಫಲಾನುಭವಿಗಳು 400 ರೂಪಾಯಿ ಕಡಿಮೆ ದರದಲ್ಲಿ ಸಿಲಿಂಡರ್ ದೊರೆಯಲಿದೆ. 

75 ಲಕ್ಷ ಕುಟುಂಬಗಳು ಉಜ್ವಲ ಯೋಜನೆಯ ಕನೆಕ್ಷನ್ ಪಡೆದ ನಂತರ ಹೊಸ ಫಲಾನುಭವಿಗಳ ಸಂಖ್ಯೆ 10.35 ಕೋಟಿಗೆ ಏರಲಿದೆ. ಈ ನಡವೆ, ಹೆಚ್ಚುತ್ತಿರುವ ಹಣದುಬ್ಬರಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಮಧ್ಯಪ್ರದೇಶದಲ್ಲಿ ಸರಕಾರ ಅಧಿಕಾರಕ್ಕೆ ಬಂದರೆ 500 ರೂಪಾಯಿಗೆ ಎಲ್ ಪಿಜಿ ನೀಡುವುದಾಗಿ ಭರವಸೆ ನೀಡಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಕೂಡಾ ಅದೇ ಬೆಲೆಗೆ ಎಲ್ಪಿಜಿ ನೀಡುತ್ತಿದೆ. ನವೆಂಬರ್-ಡಿಸೆಂಬರ್‌ನಲ್ಲಿ ಎರಡೂ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ, ಈ ನಿರ್ಧಾರವನ್ನು ಚುನಾವಣೆಯೊಂದಿಗೆ ಜೋಡಿಸಲು ಠಾಕೂರ್ ನಿರಾಕರಿಸಿದ್ದಾರೆ. ಓಣಂ ಮತ್ತು ರಕ್ಷಾ ಬಂಧನದ ಸಂದರ್ಭದಲ್ಲಿ ಮಹಿಳೆಯರಿಗೆ ಮೋದಿ  ಸರ್ಕಾರ ನೀಡಿದ ಉಡುಗೊರೆ ಇದಾಗಿದೆ ಎಂದು ಹೇಳಿದ್ದಾರೆ. 

Source : https://zeenews.india.com/kannada/business/lpg-price-cut-10-crore-customers-will-get-400-cheaper-gas-cylinder-155177

Leave a Reply

Your email address will not be published. Required fields are marked *