Job Alert : ಉದ್ಯೋಗ ನಿರೀಕ್ಷಿತರಿಗೆ ಸಿಹಿಸುದ್ದಿ : ಸೇನೆಯಲ್ಲಿ 41,822 ಹುದ್ದೆಗಳಿಗೆ ನೇಮಕಾತಿ, 10ನೇ ಕ್ಲಾಸ್ ಆಗದ್ರೆ, ಅರ್ಜಿ ಸಲ್ಲಿಸಿ

ನವದೆಹಲಿ : ನೀವು ಭಾರತೀಯ ಸೇನೆಗೆ ಸೇರಲು ಬಯಸುತ್ತೀರಾ.? ಹಾಗಿದ್ರೆ, ನಿಮಗೆ ಶುಭ ಸುದ್ದಿ ಸಿಕ್ಕಿದೆ. ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ವಿಭಾಗದಲ್ಲಿ (MES) 41,000 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಮಿಲಿಟರಿ ಎಂಜಿನಿಯರಿಂಗ್ ಸೇವೆಯು ನೇಮಕಾತಿಗೆ ಸಂಬಂಧಿಸಿದಂತೆ ಕಿರು ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ವಿವಿಧ ವಿಭಾಗದಲ್ಲಿ 41,822 ಹುದ್ದೆಗಳು ಖಾಲಿ ಇವೆ.

ಮಾಧ್ಯಮ ವರದಿಗಳ ಪ್ರಕಾರ, ಮಿಲಿಟರಿ ಎಂಜಿನಿಯರಿಂಗ್ ಸೇವೆಯಲ್ಲಿ ಖಾಲಿ ಇರುವ ಸ್ಥಾನಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಿಲಿಟರಿ ಎಂಜಿನಿಯರಿಂಗ್ ಸೇವೆಯು ಸದ್ಯಕ್ಕೆ ಖಾಲಿ ಹುದ್ದೆಯ ಬಗ್ಗೆ ಮಾತ್ರ ಮಾಹಿತಿಯನ್ನ ಒದಗಿಸಿದೆ. ಅರ್ಜಿಯ ಪ್ರಾರಂಭ, ಕೊನೆಯ ದಿನಾಂಕ ಮತ್ತು ಆಯ್ಕೆ ಪ್ರಕ್ರಿಯೆ ಸೇರಿದಂತೆ ಇತರ ಪ್ರಮುಖ ಮಾಹಿತಿಯನ್ನ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಈ ನಿಟ್ಟಿನಲ್ಲಿ ವಿವರವಾದ ಅಧಿಸೂಚನೆಯನ್ನ ಶೀಘ್ರದಲ್ಲೇ ಹೊರಡಿಸಲಾಗುವುದು.

ಭಾರತೀಯ ಮಿಲಿಟರಿ ಸೇವೆಯಲ್ಲಿ (MES) ಮೇಲ್ವಿಚಾರಕ, ಡ್ರಾಫ್ಟ್ಸ್ಮನ್ ಮತ್ತು ಸ್ಟೋರ್ ಕೀಪರ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹುದ್ದೆಗಳು ಮತ್ತು ಖಾಲಿ ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ.

ಹುದ್ದೆಗಳ ವಿವರ.!
1. ಆರ್ಕಿಟೆಕ್ಟ್ ಕೇಡರ್ ಗ್ರೂಪ್ : 44
2. ಬ್ಯಾರಕ್ ಮತ್ತು ಸ್ಟೋರ್ ಆಫೀಸರ್ : 120
3. ಮೇಲ್ವಿಚಾರಕ (ಬ್ಯಾರಕ್ & ಸ್ಟೋರ್) : 534
4. ಡ್ರಾಫ್ಟ್ಸ್ಮನ್ : 944
5. ಸ್ಟೋರ್ ಕೀಪರ್ : 2026
6. ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ : 11316
7. ಮೆಟ್ : 27920
ಒಟ್ಟು : 41822

ಎಂಇಎಸ್ ನೇಮಕಾತಿ ಪ್ರಕ್ರಿಯೆ.!
ಮಿಲಿಟರಿ ಎಂಜಿನಿಯರಿಂಗ್ ಸೇವೆ ಹೊರಡಿಸಿದ ಕಿರು ಅಧಿಸೂಚನೆಯ ಪ್ರಕಾರ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆಯ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆಯನ್ನು ಯಾರು ನಡೆಸುತ್ತಾರೆ.?
ಮಿಲಿಟರಿ ಎಂಜಿನಿಯರಿಂಗ್ ಸೇವೆ ಹೊರಡಿಸಿದ ಸಂಕ್ಷಿಪ್ತ ಅಧಿಸೂಚನೆಯ ಪ್ರಕಾರ, ನೇಮಕಾತಿ ಪ್ರಕ್ರಿಯೆಯನ್ನ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಂದರೆ ಎಸ್‌ಎಸ್ಸಿ ಅಥವಾ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಡೆಸುತ್ತದೆ.

MES ನೇಮಕಾತಿಗೆ ಅರ್ಹತೆ.?
ಎಂಇಎಸ್ ಸೇರಲು 10/12ನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಹತೆಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿ ಪೂರ್ಣ ಅಧಿಸೂಚನೆಯಲ್ಲಿ ಲಭ್ಯವಿದೆ.

ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್ ಎಂದರೇನು?
ಮಿಲಿಟರಿ ಎಂಜಿನಿಯರಿಂಗ್ ಸೇವೆಯು ಭಾರತೀಯ ಸೇನೆಯ ಎಂಜಿನಿಯರ್ಸ್ ಕಾರ್ಪ್ಸ್’ನ ಪ್ರಮುಖ ಭಾಗವಾಗಿದೆ. ಇದು ಭಾರತದ ಅತಿದೊಡ್ಡ ನಿರ್ಮಾಣ ಮತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಕಾರ್ಯತಂತ್ರದ ಮತ್ತು ಕಾರ್ಯಾಚರಣೆಯ ಮೂಲಸೌಕರ್ಯವನ್ನ ಒದಗಿಸುತ್ತದೆ. ಇದು ದೇಶದ ಅತ್ಯಂತ ಹಳೆಯ ರಕ್ಷಣಾ ಮೂಲಸೌಕರ್ಯ-ಅಭಿವೃದ್ಧಿ ಸಂಸ್ಥೆಗಳಲ್ಲಿ ಒಂದಾಗಿದೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://m.dailyhunt.in/news/india/kannada/kannadanewsnow-epaper-kanowcom/job+alert+udyoga+nirikshitarige+sihisuddi+seneyalli+41+822+huddegalige+nemakaati+10ne+klaas+aagadre+arji+sallisi-newsid-n533242666?listname=topicsList&index=0&topicIndex=0&mode=pwa&action=click

Leave a Reply

Your email address will not be published. Required fields are marked *