ಇನ್ಮುಂದೆ ಸ್ಮಾರ್ಟ್ ವಾಚ್ ಬದಲು ಸ್ಮಾರ್ಟ್ ರಿಂಗ್ನಿಂದ ಹೆಲ್ತ್ ಟ್ರ್ಯಾಕ್ ಮಾಡಬಹುದು. ಅಷ್ಟೇ ಅಲ್ಲ, ಇದರಿಂದಲೇ ಡಿಜಿಟಲ್ ಪೇಮೆಂಟ್ ಕೂಡ ಸಾಧ್ಯವಿದೆ.

ಬೆಂಗಳೂರು: ಭಾರತೀಯ ಟೆಕ್ ಸ್ಟಾರ್ಟಪ್ ಮ್ಯೂಸ್ ಎಂಬ ಸಂಸ್ಥೆಯು ಧರಿಸಬಹುದಾದ ಸ್ಮಾರ್ಟ್ಉಂಗುರ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದೆ.
ಈ ಉಂಗುರವು ಸುಧಾರಿತ ಆರೋಗ್ಯ ಟ್ರ್ಯಾಕಿಂಗ್ ಮಾಡುವ ಜೊತೆಗೆ ಹಣ ಪಾವತಿಯ ತಂತ್ರಜ್ಞಾನ ಸೌಲಭ್ಯ ಹೊಂದಿದೆ.
ಬೆಂಗಳೂರು ಮೂಲದ ಮ್ಯೂಸ್ ವೇರಬಲ್ ಸಂಸ್ಥೆಯನ್ನು ಐಐಟಿ ಮದ್ರಾಸ್ನ ಪದವೀಧರರಾದ ಕೆ.ಎಲ್.ಎನ್. ಸಾಯಿ ಪ್ರಶಾಂತ್ ಮತ್ತು ಯತೀಂದ್ರ ಅಜಯ್ ಕೆ.ಎ. ಮತ್ತು ಎನ್ಐಟಿ ವಾರಂಗಲ್ ಪದವೀಧರ ಪ್ರತ್ಯುಷ್ ಕೆ. ಸ್ಥಾಪಿಸಿದ್ದಾರೆ.
ರಿಂಗ್ ಒನ್ ಎಂಬ ಹೆಸರಿನಿಂದ ಕರೆಯಲ್ಪಡುತವ ಈ ಸಾಧನ ಹೃದಯಬಡಿತ, ರಕ್ತದ ಆಕ್ಸಿಜನ್, ತಾಪಮಾನ, ಉಸಿರಾಟ ದರ, ಹೃದಯ ಬಡಿತ ಮತ್ತು ರಕ್ತದೊತ್ತಡ ಅಳೆಯುತ್ತದೆ. ಇದು ಸ್ಮಾರ್ಟ್ ವಾಚ್ಗಳಿಗಿಂತ 10 ಪಟ್ಟು ಹಗುರವಿದ್ದು, ದಿನದ 24 ಗಂಟೆಯೂ ಧರಿಸಬಹುದು. ಇದರ ಬ್ಯಾಟರಿ ಬಾಳ್ವಿಕೆ 7 ದಿನಗಳ ಕಾಲ ಬರಲಿದೆ.
ಪೇಮೆಂಟ್ ಹೇಗೆ?: ಸಣ್ಣ ಪ್ರಮಾಣದ ಮೂಲಕ ಎನ್ಎಫ್ಸಿ ಪೇಮೆಂಟ್ ಮತ್ತು ಆರೋಗ್ಯ ಪತ್ತೆ ಮಾಡುವ ಪ್ರಪಂಚದ ಮೊದಲ ಸ್ಮಾರ್ಟ್ ರಿಂಗ್ ಇದಾಗಿದೆ. ಮ್ಯೂಸ್ಗೆ ದೊಡ್ಡ ಪೇಮೆಂಟ್ ನೆಟ್ವರ್ಕ್ ಸಹಭಾಗಿತ್ವವಿದ್ದು, ಇದರಲ್ಲಿ ಮಾಸ್ಟರ್ ಕಾರ್ಡ್, ವಿಸಾ ಮತ್ತು ರುಪೆ ಇದೆ. ಭಾರತ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಸಿಂಗಾಪುರ್ ಮತ್ತು ಯುಎಇಯಲ್ಲಿ ಲೈವ್ ಪೇಮೆಂಟ್ ಮಾಡಬಹುದು.
ಈ ರಿಂಗ್ನ ಬೆಲೆಯ ಕುರಿತು ಸಂಸ್ಥೆ ತಿಳಿಸಿಲ್ಲ. ಜಾಗತಿಕವಾಗಿ ಸೆಪ್ಟೆಂಬರ್ 27ರಂದು ಈ ಉತ್ಪನ್ನ ಬಿಡುಗಡೆಯಾಗುತ್ತಿದ್ದು, ಭಾರತದಲ್ಲಿ ಅಕ್ಟೋಬರ್ 25ರಂದು ಬಿಡುಗಡೆಯಾಲಿದೆ. ಮುಂಗಡ ಬುಕ್ಕಿಂಗ್ ವೆಬ್ಸೈಟ್ನಲ್ಲಿ ಸಾಧ್ಯವಿದೆ.
“ನಿರ್ದಿಷ್ಟ ದತ್ತಾಂಶವನ್ನು ಪಡೆಯಲು ಮಣಿಕಟ್ಟು ಸೂಕ್ತ ಸ್ಥಾನವಲ್ಲ. ಹಾಗೆಯೇ ಅನೇಕ ಮಂದಿ ಮಲಗುವಾಗ ತಮ್ಮ ಮಣಿಕಟ್ಟಿನ ಟ್ರ್ಯಾಕರ್ ತೆಗೆದಿಡುತ್ತಾರೆ. ಇದಕ್ಕೆ ಬೆರಳು ಸರಿಯಾದ ಸ್ಥಳವಾಗಿದ್ದು, ಇಲ್ಲಿಂತ ಉತ್ತಮ ದತ್ತಾಂಶ ಪಡೆಯಬಹುದು ಎಂಬುದನ್ನು ನಾವು ಪತ್ತೆ ಮಾಡಿದೆವು” ಎನ್ನುತ್ತಾರೆ ಮ್ಯೂಸ್ ವೇರಬಲ್ನ ಸಹ ಸಂಸ್ಥಾಪಕ, ಮುಖ್ಯ ನಿರ್ವಾಹಕ ಅಧಿಕಾರಿ ಪ್ರತ್ಯುಷ್ ಕೆ.
ರಿಂಗ್ ಒನ್ ಫ್ಯಾಷನ್ ಟಚ್ ಕೂಡ ಹೊಂದಿದೆ. ಉಂಗುರದೊಳಗಿನ ಪ್ರದೇಶದಲ್ಲಿ ಚಕ್ರವಿದೆ. ಹೊರಗಿನ ಪ್ರದೇಶವನ್ನು ಸುಲಭವಾಗಿ ತಿರುಗಿಸುವ ಮೂಲಕ ಅಪ್ಡೇಟ್ ಪಡೆಯಬಹುದು. ರಿಂಗ್ ಅನ್ನು ಎಡಭಾಗಕ್ಕೆ ತಿರುಗಿಸಿದರೆ ವರ್ಕೌಟ್ ಶುರು ಮಾಡಬಹುದು. ರಿಂಗ್ ಅನ್ನು ಬಲಭಾಗಕ್ಕೆ ತಿರುಗಿಸಿದರೆ ಸುರಕ್ಷಿತ ಪೇಮೆಂಟ್ ಮೂಡ್ ನಡೆಸಬಹುದು.
ಟೈಟಾನಿಯಂ ಗ್ರೇಡ್ 2 ಮತ್ತು ಸೆರಾಮಿಕ್ನಿಂದ ತಯಾರಿಸಲಾಗಿದೆ. ರಿಂಗ್ ಒನ್ ಹಗುರ, ಗಟ್ಟಿಯಾಗಿದೆ. ಇದು ಬಹುಹಂತದ ಕೋಟಿಂಗ್ ಹೊಂದಿದೆ. ಡೈಮಂಡ್ ಪಾಲಿಶಿಂಗ್ ಮಾಡಲಾಗಿದೆ. ಅದ್ಭುತ ಫಿನಿಶಿಂಗ್ ಕಾಣಬಹುದು. ಸ್ಕ್ರಾಚ್ ತಡೆಯಬಲ್ಲುದು. ಉಂಗುರದ ಒಳಭಾಗದಲ್ಲಿ ವೈದ್ಯಕೀಯ ಮಟ್ಟದ ಎಪೊಕ್ಸಿಯನ್ನು ಬಳಕೆ ಮಾಡಲಾಗಿದ್ದು, ಬಳಕೆದಾರರು ಆರಾಮದಾಯಕವಾಗಿ ಧರಿಸಬಹುದು.
ರಿಂಗ್ ಒನ್ 100 ಮೀಟರ್ ವಾಟರ್ ರೆಸಿಸ್ಟೆಂಟ್ ಆಗಿದ್ದು, ಬಳಕೆದಾರರು ಈಜುವಾಗ, ಸ್ನಾನ ಮಾಡುವಾಗ ತೆಗೆದಿಡುವ ಅವಶ್ಯಕತೆ ಇಲ್ಲ. ಸಿಲ್ವರ್ ಮತ್ತು ಕಪ್ಪು ಬಣ್ಣ, ಗೋಲ್ಡ್ ಮತ್ತು ರೋಸ್ ಗೋಲ್ಡ್ ಬಣ್ಣದಲ್ಲಿ ಸದ್ಯ ಲಭ್ಯವಿದೆ.
ಮ್ಯೂಸ್, 18 ಕ್ಯಾರೆಟ್ ಬಂಗಾರದ ಸ್ಮಾರ್ಟ್ ಉಂಗುರವನ್ನು ಸೀಮಿತ ಸಂಖ್ಯೆಯಲ್ಲಿ ಹೊರತರುವ ಆಲೋಚನೆ ನಡೆಸಿದೆ. ರಿಂಗ್ ಒನ್ 9 ಸೈಜ್ನಲ್ಲಿ ಸಿಗುತ್ತದೆ. ಗ್ರಾಹಕರು ತಮ್ಮ ಪರ್ಫೆಕ್ಟ್ ಗಾತ್ರವನ್ನು ಆಯ್ಕೆ ಮಾಡಬಹುದು. (ಐಎಎನ್ಎಸ್)
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii