ಇದೀಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕಂಪನಿಯ ಆಂಟಾಸಿಡ್ ಸಿರಪ್ ಡೈಜಿನ್ ಜೆಲ್ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಡೈಜಿನ್ ಜೆಲ್ ಸೇವನೆಯನ್ನು ತಕ್ಷಣವೇ ನಿಲ್ಲಿಸಲು ರೋಗಿಗಳಿಗೆ ಸೂಚಿಸಲಾಗಿದೆ.

ಬೆಂಗಳೂರು : ನೀವು ಸಹ ಹೊಟ್ಟೆ ನೋವಿನ ಪರಿಹಾರಕ್ಕಾಗಿ Digene Gel ಸೇವಿಸುತ್ತೀರಾ ? ಹಾಗಿದ್ದರೆ ಈ ಸಿರಪ್ ಸೇವನೆಯನ್ನು ತಕ್ಷಣವೇ ನಿಲ್ಲಿಸಿ ಬಿಡಿ. ಈ ಸಿರಪ್ ಅನ್ನು ಅಬಾಟ್ ಕಂಪನಿ ತಯಾರಿಸುತ್ತದೆ. ಇದೀಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕಂಪನಿಯ ಆಂಟಾಸಿಡ್ ಸಿರಪ್ ಡೈಜಿನ್ ಜೆಲ್ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಗೋವಾ ಪ್ಲಾಂಟ್ ನಲ್ಲಿ ತಯಾರಿಸಲಾದ ಡೈಜಿನ್ ಜೆಲ್ ಸೇವನೆಯನ್ನು ತಕ್ಷಣವೇ ನಿಲ್ಲಿಸಲು ರೋಗಿಗಳಿಗೆ ಸೂಚಿಸಲಾಗಿದೆ.
ಗ್ರಾಹಕರ ದೂರಿನ ಆಧಾರದ ಮೇಲೆ ಕ್ರಮ :
ಆಗಸ್ಟ್ 9 ರಂದು ಗ್ರಾಹಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಸಿಜಿಐ ತಿಳಿಸಿದೆ. ಸಾಮಾನ್ಯವಾಗಿ ಡೈಜಿನ್ ಸಿರಪ್ ನ ರುಚಿ ಸಿಹಿಯಾಗಿರುತ್ತದೆ ಮತ್ತು ಇದು ತಿಳಿ ಗುಲಾಬಿ ಬಣ್ಣದಲ್ಲಿ ಬರುತ್ತದೆ. ಆದರೆ ಎರಡನೇ ಬ್ಯಾಚ್ನ ಬಾಟಲಿಯ ಸಿರಪ್ ರುಚಿ ಕಹಿಯಾಗಿದ್ದು, ಕಟುವಾದ ವಾಸನೆಯೊಂದಿಗೆ ಬಿಳಿ ಬಣ್ಣದಿಂದ ಕೂಡಿದೆ ಎಂದು ಗ್ರಾಹಕರು ತಮ್ಮ ದೂರಿನಲ್ಲಿ ಹೇಳಿದ್ದಾರೆ. ಇದಾದ ಬಳಿಕ ಆಗಸ್ಟ್ 11ರ ಬ್ಯಾಚ್ನಲ್ಲಿ ಸಿದ್ಧಪಡಿಸಿದ್ದ ಡೈಜಿನ್ ಜೆಲ್ ಅನ್ನು ಹಿಂಪಡೆದಿರುವುದಾಗಿ ಅಬಾಟ್ ಕಂಪನಿ ಹೇಳಿದೆ. ಈ ಜೆಲ್ ಬಿಳಿ ಬಣ್ಣದಿಂದ ಕೂಡಿದ್ದು, ಜೆಲ್ ಕಹಿ ರುಚಿಯನ್ನು ಹೊಂದಿದ್ದು, ಕಟುವಾದ ವಾಸನೆಯಿಂದ ಕೂಡಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಗ್ರಾಹಕರಿಗೆ DCGI ಸೂಚನೆ :
ಸುರಕ್ಷತಾ ಕಾಳಜಿಯ ದೃಷ್ಟಿಯಿಂದ, DCGI ರೋಗಿಗಳು ಮತ್ತು ಗ್ರಾಹಕರನ್ನು ಅಬಾಟ್ನ ಗೋವಾ ಸ್ಥಾವರದಲ್ಲಿ ತಯಾರಿಸಿದ ಆಂಟಾಸಿಡ್ ಜೆಲ್ ಅನ್ನು ಸೇವಿಸುವುದನ್ನು ನಿಲ್ಲಿಸುವಂತೆ DCGI ಯ ವೆಬ್ಸೈಟ್ನಲ್ಲಿ ಮನವಿ ಮಾಡಲಾಗಿದೆ. ಬಿಳಿಬಣ್ಣದ ಉತ್ಪನ್ನವು ಅಸುರಕ್ಷಿತವಾಗಿರಬಹುದು ಮತ್ತು ಅದರ ಬಳಕೆಯು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಡಿಸಿಜಿಐ ವೆಬ್ಸೈಟ್ನಲ್ಲಿ ನೀಡಿರುವ ಸೂಚನೆಯಲ್ಲಿ, ಹೇಳಲಾಗಿದೆ.
ಸಗಟು ಮಾರಾಟಗಾರರು ತಮ್ಮ ಆಕ್ಟಿವ್ ಶೆಲ್ಫ್ ನಿಂದ ಈ ಉತ್ಪನ್ನವನ್ನು ತೆಗೆದುಹಾಕಬೇಕು ಎಂದು DCGI ಹೇಳಿದೆ. ಈ ಉತ್ಪನ್ನದ ಸೇವನೆಯಿಂದ ಉಂಟಾಗುವ ಯಾವುದೇ ಅಡ್ಡಪರಿಣಾಮಗಳ ಬಗ್ಗೆ ವೈದ್ಯರು ತಮ್ಮ ರೋಗಿಗಳಿಗೆ ತಿಳಿಸಬೇಕು ಎಂದು ಡಿಸಿಜಿಐ ಕೋರಿದೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii