Asia Cup 2023: ವಿರಾಟ್​, ರಾಹುಲ್​ ಶತಕದಾಟ… ಪಾಕಿಸ್ತಾನಕ್ಕೆ 357 ರನ್​ಗಳ ಬೃಹತ್​ ಗುರಿ

ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ 3ನೇ ಪಂದ್ಯದಲ್ಲಿ ಭಾರತ – ಪಾಕಿಸ್ತಾನ ಪಂದ್ಯ ನಡೆದಿದ್ದು, ಪಾಕ್​ಗೆ ಭಾರತ 357 ರನ್​ಗಳ​ ಗುರಿ ನೀಡಿದೆ.

ಕೊಲಂಬೊ (ಶ್ರೀಲಂಕಾ): ಪಂದ್ಯಕ್ಕೆ ಮಳೆ ಕಾಡಿದರೆ, ಪಾಕಿಸ್ತಾನ ಬೌಲರ್​ಗಳನ್ನು ವಿರಾಟ್​ ಕೊಹ್ಲಿ ಮತ್ತು ಕೆಎಲ್​ ರಾಹುಲ್​ ಕಾಡಿದರು.

ಈ ಇಬ್ಬರು ಬ್ಯಾಟರ್​ಗಳ ಅಬ್ಬರದ ಶತಕದಾಟದ ನೆರವಿನಿಂದ ಭಾರತ ತಂಡ ಪಾಕಿಸ್ತಾನದ ವಿರುದ್ಧ ನಿಗದಿತ ಓವರ್​​ಗೆ 2 ವಿಕೆಟ್​ ನಷ್ಟಕ್ಕೆ 356 ರನ್ ಗಳಿಸಿದೆ. ಬಾಬರ್​ ನಾಯಕತ್ವದ ಪಾಕ್​ ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ ಎರಡನೇ ಪಂದ್ಯ ಗೆಲ್ಲಲು 357 ರನ್​ ಕಲೆಹಾಕಬೇಕಿದೆ. ​

ಮೀಸಲು ದಿನವೂ ವರುಣನ ಕಾಟದಿಂದ ತಡವಾಗಿ ಪಂದ್ಯ ಆರಂಭವಾಯಿತು . 4:40ಕ್ಕೆ ಆರಂಭವಾದ ಪಂದ್ಯದಲ್ಲಿ ಭಾರತ ಕೆಎಲ್​ ರಾಹುಲ್​ ಮತ್ತು ವಿರಾಟ್​ ಬ್ಯಾಟಿಂಗ್​ ಮುಂದುವರೆಸಿದರು. ಈ ಇಬ್ಬರು ಆಟಗಾರರು ಪಾಕಿಸ್ತಾನದ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪಿಚ್​ಗೆ ಸೆಟ್ ಆಗಲು ಇಬ್ಬರು ಆಟಗಾರರು ಸ್ವಲ್ಪ ಸಮಯ ತೆಗೆದುಕೊಂಡರಾದರೂ ಆ ಬಳಿಕ ಚೇತರಿಸಿಕೊಂಡು ಪರಾಕ್ರಮ ಮೆರೆದರು.

https://platform.twitter.com/embed/Tweet.html?dnt=false&embedId=twitter-widget-0&features=eyJ0ZndfdGltZWxpbmVfbGlzdCI6eyJidWNrZXQiOltdLCJ2ZXJzaW9uIjpudWxsfSwidGZ3X2ZvbGxvd2VyX2NvdW50X3N1bnNldCI6eyJidWNrZXQiOnRydWUsInZlcnNpb24iOm51bGx9LCJ0ZndfdHdlZXRfZWRpdF9iYWNrZW5kIjp7ImJ1Y2tldCI6Im9uIiwidmVyc2lvbiI6bnVsbH0sInRmd19yZWZzcmNfc2Vzc2lvbiI6eyJidWNrZXQiOiJvbiIsInZlcnNpb24iOm51bGx9LCJ0ZndfZm9zbnJfc29mdF9pbnRlcnZlbnRpb25zX2VuYWJsZWQiOnsiYnVja2V0Ijoib24iLCJ2ZXJzaW9uIjpudWxsfSwidGZ3X21peGVkX21lZGlhXzE1ODk3Ijp7ImJ1Y2tldCI6InRyZWF0bWVudCIsInZlcnNpb24iOm51bGx9LCJ0ZndfZXhwZXJpbWVudHNfY29va2llX2V4cGlyYXRpb24iOnsiYnVja2V0IjoxMjA5NjAwLCJ2ZXJzaW9uIjpudWxsfSwidGZ3X3Nob3dfYmlyZHdhdGNoX3Bpdm90c19lbmFibGVkIjp7ImJ1Y2tldCI6Im9uIiwidmVyc2lvbiI6bnVsbH0sInRmd19kdXBsaWNhdGVfc2NyaWJlc190b19zZXR0aW5ncyI6eyJidWNrZXQiOiJvbiIsInZlcnNpb24iOm51bGx9LCJ0ZndfdXNlX3Byb2ZpbGVfaW1hZ2Vfc2hhcGVfZW5hYmxlZCI6eyJidWNrZXQiOiJvbiIsInZlcnNpb24iOm51bGx9LCJ0ZndfdmlkZW9faGxzX2R5bmFtaWNfbWFuaWZlc3RzXzE1MDgyIjp7ImJ1Y2tldCI6InRydWVfYml0cmF0ZSIsInZlcnNpb24iOm51bGx9LCJ0ZndfbGVnYWN5X3RpbWVsaW5lX3N1bnNldCI6eyJidWNrZXQiOnRydWUsInZlcnNpb24iOm51bGx9LCJ0ZndfdHdlZXRfZWRpdF9mcm9udGVuZCI6eyJidWNrZXQiOiJvbiIsInZlcnNpb24iOm51bGx9fQ%3D%3D&frame=false&hideCard=false&hideThread=false&id=1701224185169875300&lang=en&origin=https%3A%2F%2Fm.dailyhunt.in%2Fnews%2Findia%2Fkannada%2Fetv%2Bbharat%2Bkannada-epaper-etvbhkn%2Fhomenews-updates-homenews%3Fmode%3Dpwa&sessionId=596f719bbc6f894dd6645ffc227b449318f0df00&theme=light&widgetsVersion=aaf4084522e3a%3A1674595607486&width=550px

ನಿನ್ನೆ 24.1 ಓವರ್​ಗೆ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಸಲಾಗಿತ್ತು. ಅಲ್ಲಿಂದಲೇ ಇಂದು ಮ್ಯಾಚ್​ ಆರಂಭವಾಯಿತು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕನ್ನಡಿಗ ಕೆಎಲ್​ ರಾಹುಲ್​ ಸಂಪೂರ್ಣ ಪಿಟ್​ ಆಗಿರುವುದನ್ನು ಮೈದಾನದಲ್ಲಿ ತಮ್ಮ ಆಟದ ಮೂಲಕ ಸಾಬೀತು ಮಾಡಿದರು. ಅಲ್ಲದೇ ಅವರನ್ನು ಟೀಕೆ ಮಾಡುತ್ತಿದ್ದ ಎಲ್ಲರಿಗೂ ತಮ್ಮ ಸಿಕ್ಸ್ ಮತ್ತು ಬೌಂಡರಿಗಳಿಂದ ಉತ್ತರಿಸುತ್ತಾ ಅರ್ಧಶತಕವನ್ನು ಪೂರೈಸಿ, ಶತಕವನ್ನು ಗಳಿಸಿದರು. ಅವರು ಈ ಇನ್ನಿಂಗ್ಸ್​ನಲ್ಲಿ 106 ಬಾಲ್​ನ್ನು ಫೇಸ್​ ಮಾಡಿ 12 ಬೌಂಡರಿ ಮತ್ತು 2 ಸಿಕ್ಸ್​ನಿಂದ ಅಜೇಯವಾಗಿ 111 ರನ್​ ಕಲೆಹಾಕಿದರು.

ಇವರ ಜೊತೆ ಕಿಂಗ್​ ಕೊಹ್ಲಿ ಅದ್ಭುತ ಇನ್ನಿಂಗ್ಸ್​ ಸಾಥ್​ ನೀಡಿದರು. ಆರಂಭದಲ್ಲಿ ಹೆಚ್ಚು ರಾಹುಲ್​ಗೆ ಕ್ರೀಸ್​ ಬಿಟ್ಟುಕೊಡುತ್ತಾ ಸಾಗಿದ ವಿರಾಟ್​ ನಿಧಾನವಾಗಿ ಅರ್ಧಶತಕ ಪೂರೈಸಿಕೊಂಡರು. ಅಲ್ಲಿಂದ ತಮ್ಮ ಸ್ಕೋರ್​ಗೆ ವೇಗವನ್ನು ಹೆಚ್ಚಿಸಿದರು. 55 ಬಾಲ್​ ಎದುರಿಸಿ 50 ರನ್​ ಗಳಿಸಿದ ವಿರಾಟ್​ ಮತ್ತೆ ಕೇವಲ 29 ಬಾಲ್​ನಲ್ಲಿ 50 ರನ್​ ಸೇರಿಸಿದರು. 84ನೇ ಬಾಲ್​ನಲ್ಲಿ ವಿರಾಟ್​ ತಮ್ಮ ಏಕದಿನ ಕ್ರಿಕೆಟ್​ನ 47ನೇ ಶತಕವನ್ನು ದಾಖಲಿಸಿದರು. ಇನ್ನಿಂಗ್ಸ್​ ಮುಕ್ತಾಯಕ್ಕೆ ವಿರಾಟ್​ 94 ಬಾಲ್​ನಲ್ಲಿ 3 ಸಿಕ್ಸ್​ ಮತ್ತು 9 ಬೌಂಡರಿಯಿಂದ ಅಜೇಯ 122 ರನ್​ ಕಲೆಹಾಕಿದರು.

https://platform.twitter.com/embed/Tweet.html?dnt=false&embedId=twitter-widget-1&features=eyJ0ZndfdGltZWxpbmVfbGlzdCI6eyJidWNrZXQiOltdLCJ2ZXJzaW9uIjpudWxsfSwidGZ3X2ZvbGxvd2VyX2NvdW50X3N1bnNldCI6eyJidWNrZXQiOnRydWUsInZlcnNpb24iOm51bGx9LCJ0ZndfdHdlZXRfZWRpdF9iYWNrZW5kIjp7ImJ1Y2tldCI6Im9uIiwidmVyc2lvbiI6bnVsbH0sInRmd19yZWZzcmNfc2Vzc2lvbiI6eyJidWNrZXQiOiJvbiIsInZlcnNpb24iOm51bGx9LCJ0ZndfZm9zbnJfc29mdF9pbnRlcnZlbnRpb25zX2VuYWJsZWQiOnsiYnVja2V0Ijoib24iLCJ2ZXJzaW9uIjpudWxsfSwidGZ3X21peGVkX21lZGlhXzE1ODk3Ijp7ImJ1Y2tldCI6InRyZWF0bWVudCIsInZlcnNpb24iOm51bGx9LCJ0ZndfZXhwZXJpbWVudHNfY29va2llX2V4cGlyYXRpb24iOnsiYnVja2V0IjoxMjA5NjAwLCJ2ZXJzaW9uIjpudWxsfSwidGZ3X3Nob3dfYmlyZHdhdGNoX3Bpdm90c19lbmFibGVkIjp7ImJ1Y2tldCI6Im9uIiwidmVyc2lvbiI6bnVsbH0sInRmd19kdXBsaWNhdGVfc2NyaWJlc190b19zZXR0aW5ncyI6eyJidWNrZXQiOiJvbiIsInZlcnNpb24iOm51bGx9LCJ0ZndfdXNlX3Byb2ZpbGVfaW1hZ2Vfc2hhcGVfZW5hYmxlZCI6eyJidWNrZXQiOiJvbiIsInZlcnNpb24iOm51bGx9LCJ0ZndfdmlkZW9faGxzX2R5bmFtaWNfbWFuaWZlc3RzXzE1MDgyIjp7ImJ1Y2tldCI6InRydWVfYml0cmF0ZSIsInZlcnNpb24iOm51bGx9LCJ0ZndfbGVnYWN5X3RpbWVsaW5lX3N1bnNldCI6eyJidWNrZXQiOnRydWUsInZlcnNpb24iOm51bGx9LCJ0ZndfdHdlZXRfZWRpdF9mcm9udGVuZCI6eyJidWNrZXQiOiJvbiIsInZlcnNpb24iOm51bGx9fQ%3D%3D&frame=false&hideCard=false&hideThread=false&id=1701218452952998083&lang=en&origin=https%3A%2F%2Fm.dailyhunt.in%2Fnews%2Findia%2Fkannada%2Fetv%2Bbharat%2Bkannada-epaper-etvbhkn%2Fhomenews-updates-homenews%3Fmode%3Dpwa&sessionId=596f719bbc6f894dd6645ffc227b449318f0df00&theme=light&widgetsVersion=aaf4084522e3a%3A1674595607486&width=550px

ನಿನ್ನೆಯ ಇನ್ನಿಂಗ್ಸ್​ನಲ್ಲಿ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ 121 ರನ್​ನ ಜೊತೆಯಾಟ ಮಾಡಿ ಉತ್ತಮ ಬುನಾದಿ ಹಾಕಿಕೊಟ್ಟಿದ್ದರು. ರೋಹಿತ್​ ಶರ್ಮಾ 56 ರನ್​ ಕಲೆ ಹಾಕಿ ಶಾದಾಬ್​ಗೆ ವಿಕೆಟ್​ ಕೊಟ್ಟರೆ, 58 ರನ್​ ಗಳಿಸಿದ ಗಿಲ್​ ಶಹೀನ್​ಗೆ ಔಟ್​ ಆಗಿದ್ದರು. ಈ ಎರಡು ವಿಕೆಟ್​ ಪತನದ ನಂತರ ವಿರಾಟ್​ 8 ಮತ್ತು ಕೆಎಲ್​ ರಾಹುಲ್ 17 ರನ್​ ಗಳಿಸಿ​ ಕ್ರೀಸ್​ನಲ್ಲಿದ್ದರು.

13 ಸಾವಿರ ರನ್​ ಪೂರೈಸಿದ ಕಿಂಗ್​ ಕೊಹ್ಲಿ: ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ ವೃತ್ತಿಜೀವನದಲ್ಲಿ 13,000 ರನ್​ ಪೂರೈಸಿದರು. ಭಾರತದಲ್ಲಿ ಸಚಿನ್ ತೆಂಡೂಲ್ಕರ್​ ನಂತರ ಈ ಸಾಧನೆ ಮಾಡಿದ ಬ್ಯಾಟರ್​ ವಿರಾಟ್ ಆಗಿದ್ದಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source: https://m.dailyhunt.in/news/india/kannada/etvbhar9348944527258-epaper-etvbhkn/asia+cup+2023+viraat+raahul+shatakadaata+paakistaanakke+357+ran+gala+bruhat+guri-newsid-n536791454?listname=newspaperLanding&topic=sports&index=0&topicIndex=4&mode=pwa&action=click

Leave a Reply

Your email address will not be published. Required fields are marked *