Asia Cup 2023 Final: ಟೀಂ ಇಂಡಿಯಾ ಪಾಲಿಗೆ ಡೇರ್ ಡೇವಿಲ್ಸ್ ಆಗ್ತಾರಾ ಲಂಕಾ ನಾಲ್ವರು!

Asia Cup 2023 Final: ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ  ಟೀಂ ಇಂಡಿಯಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಶ್ರೀಲಂಕಾದ ನಾಲ್ವರು ಆಟಗಾರರು ಭಾರತದ ಗೆಲುವಿನ ಹಾದಿಯನ್ನು ಕಠಿಣವಾಗಿಸಬಹುದು ಎಂದು ಹೇಳಲಾಗುತ್ತಿದೆ. 

Asia Cup 2023 Final Ind vs Sri Lanka: ಗುರುವಾರ ರಾತ್ರಿ (ಸೆ. 14, 2023)  ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಏಷ್ಯಾ ಕಪ್ 2023 ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿರುವ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.  ಆದರೆ, ಟೀಂ ಇಂಡಿಯಾ ಪಾಲಿಗೆ ಶ್ರೀಲಂಕಾದ ನಾಲ್ವರು ಆಟಗಾರರು ಡೇರ್ ಡೇವಿಲ್ಸ್ ಆಗ್ತಾರಾ ಅನ್ನೋ ಭಯ ಕೂಡ ಕಾಡುತ್ತಿದೆ. 

ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಭಾರತ ತಂಡ ಟ್ರೋಫಿ ಗೆಲ್ಲಲೆಂದು ಕೋಟ್ಯಾಂತರ ಭಾರತೀಯರು ಕನಸು ಕಾಣುತ್ತಿದ್ದಾರೆ. ಆದರೆ, ರೋಹಿತ್ ಸೇನೆಗೆ ಈ ಗೆಲುವಿನ ಹಾದಿ ಅಷ್ಟು ಸುಲಭವಾಗಿರುವುದಿಲ್ಲ. ಶ್ರೀಲಂಕಾದ ನಾಲ್ವರು ಆಟಗಾರರು ಟೀಂ ಇಂಡಿಯಾದ ಗೆಲುವಿನ ಹಾದಿಯಲ್ಲಿ ಮುಳ್ಳಾಗಬಹುದು ಎಂದು ಹೇಳಲಾಗುತ್ತಿದೆ. ಅದರಲ್ಲೂ, ಶ್ರೀಲಂಕಾದ ಓರ್ವ ಆಟಗಾರ ಟೀಂ ಇಂಡಿಯಾಗೆ ಎಷ್ಟು ಅಪಾಯಕಾರಿ ಎಂದರೆ ರನ್ ಮೇಷನ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಇವರ ಮುಂದೆ ವಿಫಲರಾಗಿದ್ದಾರೆ.  ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ  ಟೀಂ ಇಂಡಿಯಾಗೆ ಅಪಾಯಕಾರಿಯಾದ ಶ್ರೀಲಂಕಾದ ಆ ನಾಲ್ವರು ಆಟಗಾರರ ಬಿ‌ಜಿಗೆ ತಿಳಿಯೋಣ.

ಟೀಂ ಇಂಡಿಯಾದ ಗೆಲುವಿನ ಹಾದಿಯನ್ನು ಕಠಿಣವಾಗಿಸುವ ಶ್ರೀಲಂಕಾದ ನಾಲ್ವರು ಆಟಗಾರರು! 
1. ಕುಸಾಲ್ ಮೆಂಡಿಸ್:-

ಶ್ರೀಲಂಕಾದ ಪ್ರಸಿದ್ದ ಬ್ಯಾಟ್ಸ್‌ಮನ್‌ ಕುಸಲ್ ಮೆಂಡಿಸ್ ಏಷ್ಯಾ ಕಪ್ ಫಿನಲ್ಸ್ ಪಂದ್ಯದಲ್ಲಿ ಭಾರತ ತಂಡಕ್ಕೆ ದೊಡ್ಡ ಬೆದರಿಕೆ ಎಂದು ಸಾಬೀತುಪಡಿಸಬಹುದು. ಪಾಕಿಸ್ತಾನ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ ಕುಸಾಲ್ ಮೆಂಡಿಸ್ 91 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಹೀಗಾಗಿ ಭಾರತದ ಬೌಲರ್‌ಗಳು ಇವರೊಂದಿಗೆ ಜಾಗರೂಕರಾಗಿರುವುದು ತುಂಬಾ ಅಗತ್ಯವಾಗಿದೆ. 

2. ದಸುನ್ ಶನಕ: 
ಶ್ರೀಲಂಕಾ ತಂಡದ ಕ್ಯಾಪ್ಟನ್ ಹಾಗೂ ಶ್ರೀಲಂಕಾದ ಆಲ್ ರೌಂಡರ್ ಆಗಿರುವ ದಸುನ್ ಶನಕ ಕೂಡ ಉತ್ತಮ ಆಟಗಾರರಾಗಿದ್ದು, ಇವರ ನಾಯಕತ್ವದಲ್ಲಿ ತಂಡ ಏಷ್ಯಾಕಪ್ 2023 ರ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಇವರ ವಿರುದ್ಧವೂ ಟೀಂ ಇಂಡಿಯಾ ಎಚ್ಚರಿಕೆಯಿಂದ ಆಟವಾಡಬೇಕಿದೆ. 

3. ದುನಿತ್ ವೆಲಾಲಗೆ: 
ಶ್ರೀಲಂಕಾ ತಂಡದ ಪ್ರಸಿದ್ದ ಎಡಗೈ ಸ್ಪಿನ್ನರ್ ದುನಿತ್ ವೆಲಾಲಗೆ ಕೂಡ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಗೆಲುವಿನ ಹಾದಿಯನ್ನು ಕಠಿಣವಾಗಿಸಬಲ್ಲ ಆಟಗಾರ. ಭಾರತ ವಿರುದ್ಧದ ಕೊನೆಯ ಪಂದ್ಯದ ಅವರ ದಾಖಲೆಯನ್ನು ನಾವು ನೋಡಿದರೆ, 20 ವರ್ಷದ ಈ ಯುವ ಬೌಲರ್ ರೋಹಿತ್-ವಿರಾಟ್ ಸೇರಿದಂತೆ ಭಾರತದ ನಾಲ್ವರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಹಾಗಾಗಿ, ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಈ ಸ್ಪಿನ್ ಬೌಲರ್‌ನೊಂದಿಗೆ ಬಹಳ ಜಾಗರೂಕರಾಗಿರಬೇಕು.

4. ಚರಿತ್ ಅಸಲಂಕಾ: 
ಪಾಕಿಸ್ತಾನ ವಿರುದ್ಧದ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಲಂಕಾದ ಚರಿತ್ ಅಸಲಂಕಾ ಸ್ಪಿನ್ ಆಲ್‌ರೌಂಡರ್ ಆ ಪಂದ್ಯದಲ್ಲಿ ಅವರು 49 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. 

ಶ್ರೀಲಂಕಾ ತಂಡದಲ್ಲಿರುವ ಈ ನಾಲ್ವರು ಆಟಗಾರರು ಭಾರತದ ವಿಜಯದ ಅಭಿಯಾನಕ್ಕೆ ಅಡ್ಡಿಪಡಿಸಬಹುದು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/sports/asia-cup-2023-final-these-4-players-from-sri-lanka-are-dangerous-for-team-india-158514

Leave a Reply

Your email address will not be published. Required fields are marked *