SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಖ್ಯಾತನಾಮರು – ರಿಷಬ್​, ರಕ್ಷಿತ್, ಯಶ್​​​​​ ಸೇರಿ ಹಲವರಿಗೆ ಒಲಿದ ಸೈಮಾ

SIIMA Awards 2023: ಕನ್ನಡದ ಹಲವು ಸಿನಿ ಗಣ್ಯರು ಸೌತ್​ ಇಂಡಿಯನ್​​​ ಇಂಟರ್​​ನ್ಯಾಷನಲ್​​​ ಮೂವಿ ಅವಾರ್ಡ್ಸ್ (SIIMA) ಮುಡಿಗೇರಿಸಿಕೊಂಡಿದ್ದಾರೆ.

ಸೌತ್​ ಇಂಡಿಯನ್​​​ ಇಂಟರ್​​ನ್ಯಾಷನಲ್​​​ ಮೂವಿ ಅವಾರ್ಡ್ಸ್ (SIIMA) ಶುಕ್ರವಾರದಂದು ಅದ್ಧೂರಿಯಾಗಿ ಆರಂಭಗೊಂಡಿದೆ.

11ನೇ ಆವೃತ್ತಿಯ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನ ವರ್ಲ್ಡ್ ಟ್ರೇಡ್​ ಸೆಂಟರ್​ನಲ್ಲಿ ನಡೆಯುತ್ತಿದೆ. ಇಂದೂ ಕೂಡ ಈ ವರ್ಣರಂಜಿತ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಸಿನಿ ಕ್ಷೇತ್ರದ ದಿಗ್ಗಜರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂದು ಮತ್ತೆ ಹಲವರ ಪಾಲಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಲಿದೆ.

ಭಾರತೀಯ ಚಿತ್ರರಂಗದಲ್ಲೇ ಅಭೂತಪೂರ್ವ ಯಶಸ್ಸು ಕಂಡು ಗಣ್ಯಾತಿಗಣ್ಯರ ಮೆಚ್ಚುಗೆಗೆ ಪಾತ್ರವಾದ ಸಿನಿಮಾ ಕಾಂತಾರ. ಅಭಿಮಾನಿಗಳು ಮಾತ್ರವಲ್ಲದೇ, ಪ್ರೇಕ್ಷಕರು, ವಿಮರ್ಶಕರು, ಚಿತ್ರರಂಗದ ಗಣ್ಯಾತಿಗಣ್ಯರಿಂದಲೂ ಮೆಚ್ಚುಗೆ ಸ್ವೀಕರಿಸಿದ ಚಿತ್ರವಿದು. ವರ್ಷವಾದರೂ ಇನ್ನೂ ಸಖತ್​ ಸದ್ದು ಮಾಡುವ ಸಿನಿಮಾವಿದು. ಈ ಚಿತ್ರವನ್ನು ನಿರ್ದೇಶಿಸಿ, ಅದ್ಭುತ ನಟನೆ ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾದವರು ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ. ನಾಯಕ ನಟ ಸೇರಿ ಚಿತ್ರತಂಡದವರೂ ಕೂಡ ಈ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಕಾಂತಾರ ಸಿನಿಮಾದಲ್ಲಿನ ಅದ್ಭುತ ನಟನೆಗೆ ರಿಷಬ್​ ಶೆಟ್ಟಿ ಅವರು ಅತ್ಯುತ್ತಮ ನಟ (ಕ್ರಿಟಿಕ್ಸ್​) ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ವಿಶೇಷ ಮೆಚ್ಚುಗೆ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಕಾಂತಾರ ಚಿತ್ರದ ಅಚ್ಯುತ್​ ಕುಮಾರ್​​​ ನೆಗೆಟಿವ್​ ರೋಲ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರಕ್ಷಿತ್​​ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ. ಗಾಳಿಪಟ 2 ಚಿತ್ರದಲ್ಲಿನ ಪೋಷಕ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ಯಾಂಡಲ್​ವುಡ್​ನ ದೂದ್​​ಪೇಡಾ ದಿಗಂತ್​​ ಪಡೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದಿಂದ ಕಾಂತಾರ ಸಿನಿಮಾ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಾಂತಾರ ಡೈರೆಕ್ಟರ್‌ ರಿಷಬ್ ಶೆಟ್ಟಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಲಭಿಸಿದೆ. ಇನ್ನೂ ನಾಯಕಿ ಸಪ್ತಮಿ ಗೌಡ ‘ಅತ್ಯುತ್ತಮ ನಟಿ’ (ವಿಮರ್ಶಕರ ಆಯ್ಕೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ಲಾಕ್​​ ಬಸ್ಟರ್ ‘ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಯಶ್‌ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ, ಶ್ರೀನಿಧಿ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ನೀಡಲಾಗಿದೆ.

ಸೈಮಾ ವಿಜೇತರು (ಕಲಾವಿದರು – ಸಿನಿಮಾ – ಪ್ರಶಸ್ತಿ):

  • ರಿಷಬ್​ ಶೆಟ್ಟಿ – ಕಾಂತಾರ – ಅತ್ಯುತ್ತಮ ನಟ (ಕ್ರಿಟಿಕ್ಸ್​) ಪ್ರಶಸ್ತಿ.
  • ರಿಷಬ್​ ಶೆಟ್ಟಿ – ಕಾಂತಾರ – ವಿಶೇಷ ಮೆಚ್ಚುಗೆ ಪ್ರಶಸ್ತಿ.
  • ರಿಷಬ್​ ಶೆಟ್ಟಿ – ಕಾಂತಾರ – ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
  • ಅಚ್ಯುತ್​ ಕುಮಾರ್​​​ – ಕಾಂತಾರ – ನೆಗೆಟಿವ್​ ರೋಲ್​ಗೆ ಅತ್ಯುತ್ತಮ ನಟ ಪ್ರಶಸ್ತಿ.
  • ಸಪ್ತಮಿ ಗೌಡ – ಕಾಂತಾರ – ಅತ್ಯುತ್ತಮ ನಟಿ (ವಿಮರ್ಷಕರ ಆಯ್ಕೆ) ಪ್ರಶಸ್ತಿ.
  • ರಕ್ಷಿತ್​​ ಶೆಟ್ಟಿ – 777 ಚಾರ್ಲಿ – ಅತ್ಯುತ್ತಮ ಚಿತ್ರ (ಪರಂವಃ ಸ್ಟುಡಿಯೋಸ್) ಪ್ರಶಸ್ತಿ.
  • ರಕ್ಷಿತ್ ಶೆಟ್ಟಿ – 777 ಚಾರ್ಲಿ – ಅತ್ಯುತ್ತಮ ನಟ ಪ್ರಶಸ್ತಿ.
  • ದಿಗಂತ್​​ – ಗಾಳಿಪಟ 2 – ಪೋಷಕ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ.
  • ಯಶ್​​​ – ಕೆಜಿಎಫ್​ 2 – ಅತ್ಯುತ್ತಮ ನಟ ಪ್ರಶಸ್ತಿ.
  • ಶ್ರೀನಿಧಿ ಶೆಟ್ಟಿ – ಕೆಜಿಎಫ್​ 2 – ಅತ್ಯುತ್ತಮ ನಟಿ ಪ್ರಶಸ್ತಿ.
  • ಪೃಥ್ವಿ ಶಾಮನೂರು – ಪದವಿ ಪೂರ್ವ – ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ.
  • ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ – ಡೊಳ್ಳು – ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ ಪ್ರಶಸ್ತಿ.
  • ಸಾಗರ್ ಪುರಾಣಿಕ್ – ಡೊಳ್ಳು – ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿ.
  • ಶುಭಾ ರಕ್ಷಾ – ಹೋಮ್ ಮಿನಿಸ್ಟರ್‌ – ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ.
  • ಪ್ರಕಾಶ್ ತುಮಿನಾಡ್ – ಕಾಂತಾರ – ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ.
  • ಭುವನ್ ಗೌಡ – ಕೆಜಿಎಫ್‌ ಚಾಪ್ಟರ್‌ 2 – ಅತ್ಯುತ್ತಮ ಛಾಯಾಗ್ರಹಣ.
  • ಸುನಿಧಿ ಚೌಹಾಣ್ – ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು – ಅತ್ಯುತ್ತಮ ಗಾಯಕಿ ಪ್ರಶಸ್ತಿ.
  • ವಿಜಯ್ ಪ್ರಕಾಶ್ – ಕಾಂತಾರದ ಸಿಂಗಾರ ಸಿರಿಯೇ ಸಾಂಗ್​​ – ಅತ್ಯುತ್ತಮ ಗಾಯಕ ಪ್ರಶಸ್ತಿ.
  • ಪ್ರಮೋದ್ ಮರವಂತೆ – ಕಾಂತಾರದ ಸಿಂಗಾರ ಸಿರಿಯೇ ಸಾಂಗ್ – ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ.
  • ಅಜನೀಶ್ ಲೋಕನಾಥ್ – ಕಾಂತಾರ – ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ.
  • ಮುಕೇಶ್ ಲಕ್ಷ್ಮಣ್ – ಕಾಂತಾರ – ವಿಶೇಷ ಮೆಚ್ಚುಗೆ ಪ್ರಶಸ್ತಿ.
  • ನೀತಾ ಅಶೋಕ್ – ವಿಕ್ರಾಂತ್ ರೋಣ – ಅತ್ಯುತ್ತಮ ಉದಯೋನ್ಮುಖ ನಟಿ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://m.dailyhunt.in/news/india/kannada/etvbhar9348944527258-epaper-etvbhkn/siima+2023+pratishthita+prashasti+mudigerisikonda+kannadadha+khyaatanaamaru+rishab+rakshit+yash+seri+halavarige+olidha+saima-newsid-n538228256?listname=newspaperLanding&index=17&topicIndex=0&mode=pwa&action=click

Leave a Reply

Your email address will not be published. Required fields are marked *