Credit card portability: ಕ್ರೆಡಿಟ್ ಕಾರ್ಡ್ ಪೋರ್ಟೆಬಿಲಿಟಿ ಬಗ್ಗೆ ಕೇಳಿದ್ದೀರಾ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..

Credit card portability: ಮೊಬೈಲ್ ಬಳಕೆದಾರರು ತಮಗೆ ಇಷ್ಟವಿಲ್ಲದ ನೆಟ್‌ವರ್ಕ್‌ನಿಂದ ಮತ್ತೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸುವ ಸಾಧ್ಯತೆಯಿದೆ. ಅದೇ ರೀತಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕ್ರೆಡಿಟ್ ಕಾರ್ಡ್‌ಗಳ ಬಳಕೆಯಲ್ಲಿ ಅದೇ ತಂತ್ರವನ್ನು ಜಾರಿಗೆ ತರಲು ಯೋಜಿಸಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Credit card: ಗ್ರಾಹಕರು ತಮ್ಮ ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ನೆಟ್‌ವರ್ಕ್‌ಗಳನ್ನು ಬದಲಾಯಿಸುವ ಸೌಲಭ್ಯವನ್ನು ಶೀಘ್ರದಲ್ಲೇ ಹೊರತರಲಾಗುವುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೆರಡು ವಾರಗಳಲ್ಲಿ ಕ್ರೆಡಿಟ್ ಕಾರ್ಡ್ ಪೋರ್ಟೆಬಿಲಿಟಿ ಸಾಕಾರಗೊಳ್ಳಲಿದೆ. ಇನ್ನು ಈ ಬಗ್ಗೆ RBI ಇತ್ತೀಚೆಗೆ ಈ ಪ್ರಸ್ತಾವನೆಯೊಂದಿಗೆ ಸುತ್ತೋಲೆ ಹೊರಡಿಸಿದೆ.. ಕ್ರೆಡಿಟ್ ಕಾರ್ಡ್ ಪೋರ್ಟೆಬಿಲಿಟಿ ಸೌಲಭ್ಯವು ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದೆ.

ವೀಸಾ, ಮಾಸ್ಟರ್‌ಕಾರ್ಡ್, ಅಮೇರಿಕನ್ ಎಕ್ಸ್‌ಪ್ರೆಸ್, ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ಭಾರತದ ಪ್ರಮುಖ ಕ್ರೆಡಿಟ್ ಕಾರ್ಡ್ ನೆಟ್‌ವರ್ಕ್‌ಗಳಾಗಿವೆ. ಇವುಗಳ ಹೊರತಾಗಿ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರುಪೇ ವ್ಯವಸ್ಥೆಯನ್ನು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮವು ನಿರ್ವಹಿಸುತ್ತದೆ.

ಇನ್ನು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಈ ಎಲ್ಲ ಕಾರ್ಡ್‌ಗಳನ್ನು ಮಂಜೂರು ಮಾಡಿವೆ.. ಬಳಕೆದಾರರು ಇದೀಗ ಅವುಗಳನ್ನು ವಿತರಿಸುವ ಸಮಯದಲ್ಲಿ ಅಥವಾ ನಂತರ ಮತ್ತೊಂದು ನೆಟ್‌ವರ್ಕ್‌ಗೆ ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ. 

ಈ ಆಯ್ಕೆಯು ಬಳಕೆದಾರರ ಆದ್ಯತೆಗಳಿಗೆ ಮೌಲ್ಯವನ್ನು ನೀಡುತ್ತದೆ. ಪ್ರಸ್ತುತ ನೆಟ್‌ವರ್ಕ್ ಸೇವೆಗಳು ನಿಮಗೆ ಇಷ್ಟವಾಗದಿದ್ದರೆ, ಪೋರ್ಟಬಲ್ ಆಗುವ ಆಯ್ಕೆಯನ್ನು ಪಡೆಯಬಹುದು. ಇದರಿಂದ ಬಳಕೆದಾರರು ಇ-ಕಾಮರ್ಸ್ ಕಂಪನಿಗಳು ಸೇರಿದಂತೆ ಆಯಾ ಕಂಪನಿಗಳು ನೀಡುವ ವಿವಿಧ ಕೊಡುಗೆಗಳನ್ನು ಸುಲಭವಾಗಿ ಪಡೆದುಕೊಳ್ಳುವ ಸೌಲಭ್ಯವನ್ನು ಪಡೆಯಬಹುದು.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/business/credit-card-portability-have-you-heard-about-credit-card-portability-here-are-complete-details-159398

Leave a Reply

Your email address will not be published. Required fields are marked *