ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ: ವಿಕ್ರಮ್-ಪ್ರಗ್ಯಾನ್’ಗೆ ಮರುಜೀವ ನೀಡುತ್ತಾ ‘ಶಿವಶಕ್ತಿ’?

Shivshakti Point Sunrise: ಇನ್ನೊಂದೆಡೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾಗಲಿದೆ. ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಸೂರ್ಯನ ಶಾಖದಿಂದ ಶಕ್ತಿಯನ್ನು ಪಡೆದು ಮತ್ತೆ ಕಾರ್ಯ ಪ್ರಾರಂಭಿಸುತ್ತದೆ.

Shivshakti Point Sunrise: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಒಮ್ಮೆ ಕೆಲಸ ಮಾಡಲು ಪ್ರಾರಂಭಿಸುವುದನ್ನು ನೋಡಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಚಂದ್ರನಲ್ಲಿ ಇರುಳು ಕಳೆದು ಬೆಳಕು ಮೂಡಿದೆ. ನಿದ್ರೆಯಲ್ಲಿದ್ದ ಪ್ರಗ್ಯಾನ್ ಹಾಗೂ ವಿಕ್ರಮ್ ಮತ್ತೆ ಕೆಲಸ ಮಾಡುವ ಸಾಧ್ಯತೆ ಇದೆ.

ಇನ್ನೊಂದೆಡೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾಗಲಿದೆ. ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಸೂರ್ಯನ ಶಾಖದಿಂದ ಶಕ್ತಿಯನ್ನು ಪಡೆದು ಮತ್ತೆ ಕಾರ್ಯ ಪ್ರಾರಂಭಿಸುತ್ತದೆ. ಎರಡರ ಸೌರ ಫಲಕಗಳ ಮೇಲೆ ಸಾಕಷ್ಟು ಪ್ರಮಾಣದ ಸೂರ್ಯನ ಬೆಳಕು ಬಿದ್ದರೆ ಅವು ಎಚ್ಚರಗೊಂಡು, ಕೆಲಸ ಮಾಡಲು ಪ್ರಾರಂಭಿಸುತ್ತವೆ ಎಂದು ಇಸ್ರೋ ಹೇಳಿದೆ.

ಭೂಮಿಯಿಂದ ಸುಮಾರು ಮೂರು ಲಕ್ಷದ 75 ಸಾವಿರ ಕಿಲೋಮೀಟರ್ ದೂರದಲ್ಲಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಚಂದ್ರಯಾನದ ಲ್ಯಾಂಡರ್ ಮತ್ತು ರೋವರ್ ಕಾಲಿಟ್ಟಿದ್ದು ಇತಿಹಾಸ ಸೃಷ್ಟಿಸಿದೆ,  

ವಿಜ್ಞಾನಿಗಳು ಚಂದ್ರಯಾನ-3ರೊಂದಿಗಿನ ಸಂಪರ್ಕವನ್ನು ಮರು ಸ್ಥಾಪಿಸಲು ಸಿದ್ಧತೆ ಆರಂಭಿಸಿದ್ದಾರೆ. ನಾಳೆ ಅಂದರೆ ಸೆಪ್ಟೆಂಬರ್ 22ರಂದು ಶಿವಶಕ್ತಿ ಪಾಯಿಂಟ್ ಇರುವ ಜಾಗಕ್ಕೆ ಸೂರ್ಯನ ಬೆಳಕು ಬೀಳಲಿದೆ. ಈ ಸಂದರ್ಭದಲ್ಲಿ ಎರಡು ಸೌರ ಫಲಕಗಳ ಮೇಲೆ ಸೂರ್ಯನ ಶಾಖ ಬಿದ್ದಾಗ, ವಿಕ್ರಮ್ ಮತ್ತು ಪ್ರಗ್ಯಾನ್ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತಿದೆ.

ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿ ಇತಿಹಾಸವನ್ನು ಸೃಷ್ಟಿಸಿತು. ಅದರ ಪೇಲೋಡ್‌’ಗಳು ಚಂದ್ರನಲ್ಲಿ ಒಂದು ದಿನ ಅಂದರೆ  ಭೂಮಿಯ 14 ದಿನಗಳ ಕಾಲ ಕೆಲಸ ಮಾಡಿದ್ದವು.  ಅಷ್ಟೇ ಅಲ್ಲದೆ, ಚಂದ್ರನ ಮಣ್ಣಿನಲ್ಲಿ ಸಲ್ಫರ್, ಕಬ್ಬಿಣ ಮತ್ತು ಆಮ್ಲಜನಕ ಸೇರಿದಂತೆ ಇತರ ಖನಿಜಗಳ ಉಪಸ್ಥಿತಿಯನ್ನು ಖಚಿತಪಡಿಸಿತ್ತು.

ಇನ್ನು ಲ್ಯಾಂಡರ್ ಮತ್ತು ವಿಕ್ರಮ್‌’ನಲ್ಲಿ ಅಳವಡಿಸಿರುವ ಸೌರ ಫಲಕಗಳ ಮೇಲೆ ಸೂರ್ಯನ ಬೆಳಕು ಬಿದ್ದಾಗ ಆ ಬ್ಯಾಟರಿಗಳು ಚಾರ್ಜ್ ಆಗುತ್ತವೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/india/sunrise-at-moons-south-pole-reviving-shiva-shakti-to-vikram-pragyan-159891

Leave a Reply

Your email address will not be published. Required fields are marked *