WhatsApp may extend status duration: ವಾಟ್ಸಾಪ್ ಅಪ್ಡೇಟ್ಗಳ ಬಗ್ಗೆ ಸದಾ ಮಾಹಿತಿಯನ್ನು ತಿಳಿಸುವ WABetaInfo ನ ವರದಿಯ ಪ್ರಕಾರ, ಕಂಪನಿಯು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎರಡು ವಾರಗಳವರೆಗೆ ಲೈವ್ ಆಗಿ ಇರಿಸಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬಳಕೆದಾರರು ತಮ್ಮ ಸ್ಟೇಟಸ್ ಗೋಚರಿಸುವ ಅವಧಿಯನ್ನು ನಿಗದಿ ಪಡಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ ಎನ್ನಲಾಗಿದೆ.

2 ಬಿಲಿಯನ್ ಜಾಗತಿಕ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ದಿನಕ್ಕೊಂದು ನೂತನ ಫೀಚರ್ಗಳನ್ನು ಘೋಷಿಸುತ್ತಿದೆ. ನೂತನ ಅಪ್ಡೇಟ್ಗಳನ್ನು ನೀಡಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಾಟ್ಸ್ಆ್ಯಪ್ ಇದೀಗ ಬೆರಗುಗೊಳಿಸುವ ಅಪ್ಡೇಟ್ ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್ನಲ್ಲಿ ಪ್ರಸ್ತುತ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು 24 ಗಂಟೆಗಳವರೆಗೆ ಇರುವ ರೀತಿಯಲ್ಲಿ ಪೋಸ್ಟ್ ಮಾಡಬಹುದು. ಆದರೆ ಇತ್ತೀಚಿನ ವರದಿಯ ಪ್ರಕಾರ ಈ 24 ಗಂಟೆಗಳ ಅವಧಿಯನ್ನು ವಾಟ್ಸ್ಆ್ಯಪ್ ವಿಸ್ತರಿಸಲಿದೆಯಂತೆ.
ವಾಟ್ಸ್ಆ್ಯಪ್ ಅಪ್ಡೇಟ್ಗಳ ಬಗ್ಗೆ ಸದಾ ಮಾಹಿತಿಯನ್ನು ತಿಳಿಸುವ WABetaInfo ನ ವರದಿಯ ಪ್ರಕಾರ, ಕಂಪನಿಯು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎರಡು ವಾರಗಳವರೆಗೆ ಲೈವ್ ಆಗಿ ಇರಿಸಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬಳಕೆದಾರರು ತಮ್ಮ ಸ್ಟೇಟಸ್ ಗೋಚರಿಸುವ ಅವಧಿಯನ್ನು ನಿಗದಿ ಪಡಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ ಎನ್ನಲಾಗಿದೆ.
ಮುಂಬರುವ ಅಪ್ಡೇಟ್ನಲ್ಲಿ, ವಾಟ್ಸ್ಆ್ಯಪ್ ಬಳಕೆದಾರರಿಗೆ ಸ್ಟೇಟಸ್ ವಿಭಾಗದಲ್ಲಿ ನಾಲ್ಕು ಅವಧಿಯ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ: 24 ಗಂಟೆಗಳು, 3 ದಿನಗಳು, 1 ವಾರ ಮತ್ತು 2 ವಾರಗಳು. ಇದು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎಷ್ಟು ಸಮಯದವರೆಗೆ ವೀಕ್ಷಿಸಲು ಲಭ್ಯವಾಗಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಆಗಿದೆ.
ವಾಟ್ಸ್ಆ್ಯಪ್ನಲ್ಲಿ ಫಿಲ್ಟರ್ ಆಯ್ಕೆ
ಸದ್ಯದಲ್ಲೇ ವಾಟ್ಸ್ಆ್ಯಪ್ನಲ್ಲಿ ಫಿಲ್ಟರ್ ಆಯ್ಕೆ ಬರಲಿದ್ದು, ಇದು ಚಾಟ್ ಲಿಸ್ಟ್ನಲ್ಲಿ ಮಹತ್ವದ ಬದಲಾವಣೆ ತರಲಿದೆ. ವಾಟ್ಸ್ಆ್ಯಪ್ ಬೀಟಾ 2.23.14.17 ಅಪ್ಡೇಟ್ನಲ್ಲಿ ಇದು ಕಂಡುಬಂದಿದೆ. ಈ ಹೊಸ ಟೂಲ್ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಫಿಲ್ಟರ್ನಲ್ಲಿ ಮೂರು ಆಯ್ಕೆಗಳು ಇರಲಿದೆ. ಅನ್ರೀಡ್ ಮೆಸೇಜೆಸ್, ವೈಯಕ್ತಿಕ ಸಂಭಾಷಣೆಗಳು ಮತ್ತು ವ್ಯವಹಾರ ಸಂಭಾಷಣೆಗಳು ಹೀಗೆ ಮೂರು ಆಯ್ಕೆಗಳು ಇರಲಿದೆ. ವಾಟ್ಸ್ಆ್ಯಪ್ ಮೇಲ್ಬಾಗದ ಬಲ ಮೂಲೆಯಲ್ಲಿ ಈ ಫಿಲ್ಟನ್ ಬಟನ್ ಇರಲಿದೆ ಎಂದು ಹೇಳಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0