ಜಾನಿ ಡೆಪ್ ಅವರು ‘ದಿ ಬ್ರೇವ್’ ಸಿನಿಮಾದ ಬಳಿಕ ಯಾವುದೇ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿರಲಿಲ್ಲ. ಈಗ ಅವರಿಗೆ ಮತ್ತೆ ನಿರ್ದೇಶನ ಮಾಡುವ ಉತ್ಸಾಹ ಬಂದಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಅವರು ಮತ್ತೆ ನಿರ್ದೇಶಕನ ಚೇರ್ನಲ್ಲಿ ಕುಳಿತಿದ್ದು, ‘ಮೋದಿ’ ಸಿನಿಮಾಗೆ ಶೂಟಿಂಗ್ ಶುರು ಮಾಡಿದ್ದಾರೆ.

ಹಾಲಿವುಡ್ನಲ್ಲಿ ‘ಮೋದಿ’ (Modi) ಶೀರ್ಷಿಕೆಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಚಿತ್ರದ ಮೇಲೆ ಬಹಳ ನಿರೀಕ್ಷೆ ಮೂಡಿದೆ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ವಿಶೇಷ ಏನೆಂದರೆ. ಈ ಸಿನಿಮಾಗೆ ಖ್ಯಾತ ನಟ ಜಾನಿ ಡೆಪ್ (Johnny Depp) ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೆಸರಾಂತ ಕಲಾವಿದ ಅಲ್ ಪಚಿನೋ ಅವರು ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಅಂದಹಾಗೆ, ಇದೊಂದು ಬಯೋಪಿಕ್. ಹಾಗಂತ ನರೇಂದ್ರ ಮೋದಿ (Narendra Modi) ಅವರ ಬಯೋಪಿಕ್ ಅಲ್ಲ. ಲಲಿತ್ ಮೋದಿ, ನೀರವ್ ಮೋದಿ ಕಥೆಯೂ ಈ ಸಿನಿಮಾದಲ್ಲಿ ಇರುವುದಿಲ್ಲ! ಹಾಗಾದರೆ ಇದು ಯಾರ ಜೀವನದ ಕಥೆ? ಆ ಪ್ರಶ್ನೆಗೆ ಉತ್ತರ ಇಲ್ಲಿದೆ..
‘ಪೈರೆಟ್ಸ್ ಆಫ್ ದಿ ಕೆರಿಬಿಯನ್’ ಖ್ಯಾತಿಯ ನಟ ಜಾನಿ ಡೆಪ್ ಅವರು ಹಾಲಿವುಡ್ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ನಿರ್ದೇಶನದಲ್ಲೂ ಅವರಿಗೆ ಆಸಕ್ತಿ ಇದೆ. 1997ರಲ್ಲಿ ಅವರು ‘ದಿ ಬ್ರೇವ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅದು ಅವರ ಮೊದಲ ನಿರ್ದೇಶನದ ಪ್ರಯತ್ನ. ಆ ಬಳಿಕ ಮತ್ತೆ ಯಾವುದೇ ಚಿತ್ರಕ್ಕೆ ಅವರು ಆ್ಯಕ್ಷನ್-ಕಟ್ ಹೇಳಿರಲಿಲ್ಲ. ಈಗ ಜಾನಿ ಡೆಪ್ ಅವರಿಗೆ ಮತ್ತೆ ನಿರ್ದೇಶನ ಮಾಡುವ ಉತ್ಸಾಹ ಬಂದಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಅವರು ಮತ್ತೆ ನಿರ್ದೇಶಕನ ಚೇರ್ನಲ್ಲಿ ಕುಳಿತಿದ್ದು, ‘ಮೋದಿ’ ಸಿನಿಮಾಗೆ ಶೂಟಿಂಗ್ ಶುರು ಮಾಡಿದ್ದಾರೆ.
20ನೇ ಶತಮಾನದ ಆರಂಭದಲ್ಲಿ ಪ್ರಸಿದ್ಧವಾಗಿದ್ದ ಇಟಲಿಯ ಚಿತ್ರಕಾರ ಅಮೆಡಿಯೋ ಮೋದಿಗ್ಲಿಯಾನಿ ಜೀವನದ ಕುರಿತು ‘ಮೋದಿ’ ಸಿನಿಮಾ ತಯಾರಾಗುತ್ತಿದೆ. ಆಧುನಿಕ ಶೈಲಿಯ ಚಿತ್ರಗಳನ್ನು ರಚಿಸುವ ಮೂಲಕ ಮೋದಿಗ್ಲಿಯಾನಿ ಗಮನ ಸೆಳೆದಿದ್ದರು. ಆದರೆ ಆ ಕಲಾಕೃತಿಗಳಿಗೆ ಅಂದಿನ ಕಾಲದಲ್ಲಿ ಸೂಕ್ತ ಮನ್ನಣೆ ಸಿಕ್ಕಿರಲಿಲ್ಲ. ಅವರ ಮರಣದ ನಂತರ ಆ ಚಿತ್ರಗಳಿಗೆ ಜನಪ್ರಿಯತೆ ಸಿಕ್ಕಿತು. ಕೇವಲ 35ನೇ ವಯಸ್ಸಿನಲ್ಲಿ ನಿಧನರಾದ ಮೋದಿಗ್ಲಿಯಾನಿ ಜೀವನದ ಘಟನೆಗಳು ಇಂಟರೆಸ್ಟಿಂಗ್ ಆಗಿವೆ. ಅವುಗಳನ್ನು ಆಧಾರವಾಗಿ ಇಟ್ಟುಕೊಂಡು ‘ಮೋದಿ’ ಸಿನಿಮಾ ತಯಾರಾಗುತ್ತಿದೆ.
ಇಟಾಲಿಯನ್ ನಟ ರಿಕಾರ್ದೋ ಸ್ಕಮಾರ್ಚೋ ಅವರು ‘ಮೋದಿ’ ಸಿನಿಮಾದಲ್ಲಿ ಅಮೆಡಿಯೋ ಮೋದಿಗ್ಲಿಯಾನಿ ಪಾತ್ರವನ್ನು ಮಾಡುತ್ತಿದ್ದಾರೆ. ಹಾಲಿವುಡ್ನ ಲೆಜೆಂಡರಿ ನಟ ಅಲ್ ಪಚಿನೋ ಅವರು ಕೂಡ ಈ ಚಿತ್ರದಲ್ಲಿ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಲ್ಲದೇ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಮೋದಿ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0