Gold Silver Price Today:ಬಂಗಾರದ ಬೆಲೆಯಲ್ಲಿ ಹಿಂದೆಂದೂ ಕಾಣದ ಇಳಿಕೆ ಕಂಡು ಬಂದಿದೆ. ಇನ್ನು ಮುಂದೆ ಕೂಡಾ ಚಿನ್ನ ಇನ್ನಷ್ಟು ಅಗ್ಗವಾಗಲಿದೆ ಎನ್ನುತ್ತಾರೆ ತಜ್ಞರು.

Gold Silver Price Today:ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬರುತ್ತಿದೆ. ಅಕ್ಟೋಬರ್ ತಿಂಗಳ ಆರಂಭದಿಂದಲೇ ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡು ಬರುತ್ತಿದೆ. ಬಹಳ ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ ಕಂಡು ಬಂದಿದೆ. ಇದಲ್ಲದೇ ಇಂದು ಬೆಳ್ಳಿ ಬೆಲೆಯಲ್ಲಿಯೂ ಇಳಿಮುಖ ದಾಖಲಾಗಿದೆ.
4ಸಾವಿರಕ್ಕೂ ಅಧಿಕ ಇಳಿಕೆ ಕಂಡ ಚಿನ್ನ :
ಮೇ 6 ರಂದು, MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,845 ರೂಪಾಯಿಗಳ ದಾಖಲೆಯ ಮಟ್ಟದಲ್ಲಿತ್ತು. ಈಗ MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 57 ಸಾವಿರದ ಆಸುಪಾಸಿನಲ್ಲಿದೆ. ಇದರ ಪ್ರಕಾರ ಸದ್ಯ, ಚಿನ್ನ ಸುಮಾರು ನಾಲ್ಕು ಸಾವಿರ ರೂಪಾಯಿಗಳಷ್ಟು ಅಗ್ಗವಾಗುತ್ತಿದೆ
ಇಂದು ಚಿನ್ನ ಖರೀದಿಸುವುದಾದರೆ ಎಷ್ಟಿದೆ ಬೆಲೆ (10 ಗ್ರಾಂ) :
22 ಕ್ಯಾರೆಟ್ ಚಿನ್ನದ ಬೆಲೆ: 52,600 .ರೂ
24 ಕ್ಯಾರೆಟ್ ಚಿನ್ನದ ಬೆಲೆ: 57,380. ರೂ
ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ಬೆಲೆ ? :
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 52,600 .ರೂ
24 ಕ್ಯಾರೆಟ್ ಚಿನ್ನದ ಬೆಲೆ: 57,380. ರೂ
ಬೆಳ್ಳಿ ಬೆಲೆ ಎಷ್ಟು? :
ಇನ್ನು ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ದಾಖಲಾಗಿದೆ. ಈ ಸುದ್ದಿ ಬರೆಯುವ ವೇಳೆಗೆ 100 ಗ್ರಾಂ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಕುಸಿತ ಕಂಡು ಬಂದಿತ್ತು. 100 ಗ್ರಾಂ ಬೆಳ್ಳಿ ಬೆಲೆ 7,100 ರೂಪಾಯಿ ಆಗಿದ್ದು, 10 ಗ್ರಾಂ ಬೆಳ್ಳಿ ಬೆಲೆ 710 ರೂಪಾಯಿ ಆಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಬೆಂಗಳೂರು: 52,600 ರೂ
ಚೆನ್ನೈ: 52,900. ರೂ
ಮುಂಬೈ: 52,600. ರೂ
ದೆಹಲಿ: 52,750.ರೂ
ಕೇರಳ: 52,600. ರೂ
ಲಕ್ನೋ: 52,750 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 6,900
ಚೆನ್ನೈ: 7,350 ರೂ
ಮುಂಬೈ: 7,100 ರೂ
ದೆಹಲಿ: 7,100 ರೂ
ಕೇರಳ: 7,350 ರೂ
ಲಕ್ನೋ: 7,100 ರೂ
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಅಗ್ಗ:
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಅಮೆರಿಕದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ ಶೇಕಡಾ 0.39 ರಷ್ಟು ಕಡಿಮೆಯಾಗಿ 1,820.60 ಡಾಲರ್ ಮಟ್ಟದಲ್ಲಿದೆ. ಇದಲ್ಲದೇ ಅಮೆರಿಕದಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಅಮೆರಿಕದಲ್ಲಿ, ಬೆಳ್ಳಿಯ ಬೆಲೆ 0.29 ಶೇಕಡಾ ಕುಸಿದು 20.98 ಡಾಲರ್ ಗೆ ತಲುಪಿದೆ.
ಚಿನ್ನದ ಬೆಲೆ ಏಕೆ ಕುಸಿಯುತ್ತಿದೆ? :
ತಜ್ಞರ ಪ್ರಕಾರ, ಅಮೆರಿಕದಲ್ಲಿ ಹೆಚ್ಚಿನ ಬಡ್ಡಿದರಗಳ ಕಾರಣದಿಂದಾಗಿ ಡಾಲರ್ ಸೂಚ್ಯಂಕವು 10 ತಿಂಗಳ ದಾಖಲೆಯ ಮಟ್ಟವನ್ನು ತಲುಪಿದೆ. ಇದರ ಪರಿಣಾಮ ಚಿನ್ನದ ಬೆಲೆಯ ಮೇಲೆ ಗೋಚರಿಸುತ್ತದೆ.
ಚಿನ್ನ ಮತ್ತಷ್ಟು ಕುಸಿಯಬಹುದು :
ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿಮ್ಮ ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ನಂಬರ್ ನಿಂದ ಮಿಸ್ಡ್ ಕಾಲ್ ಕೊಡುತ್ತಿರೋ ಅದೇ ನಂಬರ್ ಗೆ ಮೆಸೇಜ್ ಬರುತ್ತದೆ.
( ಸೂಚನೆ : ಈ ಮೇಲಿನ ದರಗಳನ್ನು ಈ ಸುದ್ದಿ ಬರೆಯುವ ಹೊತ್ತಿನ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಗಳಿಗೆ ಅನುಗುಣವಾಗಿ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡು ಬರಬಹುದು. )