International Karate Championship: ಇತ್ತೀಚಿಗೆ ಆನ್ಲೈನ್ ನಲ್ಲಿ ನಡೆದ ಅಂತರಾಷ್ಟ್ರೀಯ ಆನ್ಲೈನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಆನೇಕಲ್ ಪಟ್ಟಣದ ತಟ್ಟನಹಳ್ಳಿ ಗ್ರಾಮದ ಗುರು ಶಿಷ್ಯ ಟ್ಯಾಲೆಂಟ್ ಅಕಾಡೆಮಿಯಿಂದ ಭಾರತದಿಂದ ಪ್ರತಿನಿಧಿಸಿದರು. ಈ ನಿಟ್ಟಿನಲ್ಲಿ ಆರು ಮಕ್ಕಳು ಭಾಗವಹಿಸಿದ್ದು ನಾಲ್ಕು ಜನ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

International Karate Championship: ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಆನೇಕಲ್ ಪಟ್ಟಣದ ತಟ್ಟನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಚಿನ್ನದ ಪದಕ 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಪಡೆದು ಗ್ರಾಮಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಇತ್ತೀಚಿಗೆ ಆನ್ಲೈನ್ ನಲ್ಲಿ ನಡೆದ ಅಂತರಾಷ್ಟ್ರೀಯ ಆನ್ಲೈನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಆನೇಕಲ್ ಪಟ್ಟಣದ ತಟ್ಟನಹಳ್ಳಿ ಗ್ರಾಮದ ಗುರು ಶಿಷ್ಯ ಟ್ಯಾಲೆಂಟ್ ಅಕಾಡೆಮಿಯಿಂದ ಭಾರತದಿಂದ ಪ್ರತಿನಿಧಿಸಿದರು. ಈ ನಿಟ್ಟಿನಲ್ಲಿ ಆರು ಮಕ್ಕಳು ಭಾಗವಹಿಸಿದ್ದು ನಾಲ್ಕು ಜನ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಇನ್ನು ಚಿನ್ಮಯ್, ಚರಣ್ ಜಿತ್, ಮೌಲ್ಯ ಆರ್, ಮಲ್ಲಪ್ಪ ಎಂಬ ಮಕ್ಕಳು ಚಿನ್ನದ ಪದಕವನ್ನು ಗೆದ್ದರೆ, ದಿವ್ಯ ಕೆ ಬೆಳ್ಳಿ ಪದಕವನ್ನು ಹಾಗೂ ರೋಷನ್ ಕಂಚಿನ ಪದಕವನ್ನು ಗೆದ್ದು ಗ್ರಾಮಕ್ಕೆ ಹಾಗೂ ದೇಶಕ್ಕೆ ಹೆಮ್ಮೆಯ ತಂದಿದ್ದಾರೆ.
ಇನ್ನು ಚಿನ್ನದ ಪದಕ ಗೆದ್ದ ಮಕ್ಕಳಿಗೆ ಊರಿನ ಗ್ರಾಮಸ್ಥರು ಅಭಿನಂದನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಗುರು ಶಿಷ್ಯ ಟಾಲೆಂಟ್ ಅಕಾಡೆಮಿ ಡಾ. ಮಂಜುನಾಥ್ ಮಾತನಾಡಿ ಸರ್ಕಾರಿ ಶಾಲೆ ಮಕ್ಕಳಿಗೆ ಗುರು-ಶಿಷ್ಯ ಟ್ಯಾಲೆಂಟ್ ಅಕಾಡೆಮಿ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಸುಮಾರು ವರ್ಷಗಳಿಂದ ಉಚಿತವಾಗಿ ತರಬೇತಿಯನ್ನು ನೀಡುತ್ತಾ ಬಂದಿದೆ. ಜೊತೆಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಡಾಕ್ಟರ್ ಮಂಜುನಾಥ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗುರು ಶಿಷ್ಯ ಟಾಲೆಂಟ್ ಅಕಾಡೆಮಿಯ ಸಂಸ್ಥಾಪಕರಾದ ಡಾಕ್ಟರ್ ಮಂಜುನಾಥ್ ಕರಾಟೆ ಮಾಸ್ಟರ್ ನಾಗೇಂದ್ರ ರಾವ್ ಊರಿನ ಮುಖ್ಯಸ್ಥರು ಬೈರೇಗೌಡರು ಸಮಾಜ ಸೇವಕರಾದ ಟಿಆರ್ ವೆಂಕಟೇಶ್ ಮತ್ತು ಪಿ ಟಿ ರಾಜಣ್ಣ ಮಂಜಪ್ಪ ಭಾಗವಹಿಸಿದ್ದು ಮಕ್ಕಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1