ಸುದ್ದಿಗಳ ಹೆಡ್​ಲೈನ್​ ಲಿಂಕ್​ ಕಣ್ಮರೆ, ಕೇವಲ ಇಮೇಜ್​ ಮಾತ್ರ ಪೋಸ್ಟ್​​; Xನಲ್ಲಿ ಮತ್ತೊಂದು ಬದಲಾವಣೆ

ಈ ಹಿಂದೆ ಪತ್ರಕರ್ತರಿಗೆ ನೇರವಾಗಿ ಸುದ್ದಿಯನ್ನು ನೀಡಿ ಹೆಚ್ಚಿನ ಆದಾಯ ಗಳಿಸಿ ಎಂದಿದ್ದ ಮಸ್ಕ್​ ಇದೀಗ ಆ ಯೋಜನೆಯತ್ತ ಹೆಜ್ಜೆ ಇಟ್ಟಿದ್ದಾರೆ.

ಎಲೋನ್​ ಮಸ್ಕ್​ ಟ್ವಿಟರ್​​ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮಾಡುತ್ತಿರುವ ಹೊಸ ಹೊಸ ಮಾರ್ಪಡುಗಳಿಗೆ ಕೊನೆಯಿಲ್ಲ.

ಇದೀಗ ತಮ್ಮ ಮೈಕ್ರೋಬ್ಲಾಗಿಂಗ್​ ತಾಣ ಎಕ್ಸ್​ನಲ್ಲಿ ಮತ್ತೊಂದು ಹೊಸ ಬದಲಾವಣೆಯೊಂದನ್ನು ಮಾಡಿ ಗಮನ ಸೆಳೆದಿದ್ದಾರೆ. ಈ ಹಿಂದೆ ಸುದ್ದಿ ಅಥವಾ ಲೇಖನ (News and Article) ಓದುಗರು ತಮ್ಮ ಆಸಕ್ತಿ ವಿಷಯಗಳನ್ನು ಎಕ್ಸ್​ನಲ್ಲಿ ಪೋಸ್ಟ್​ ಮಾಡಲಾದ ಸುದ್ದಿ ಲಿಂಕ್​ಗಳ ಮೂಲಕವೇ ಓದುವ ಅವಕಾಶವನ್ನು ನೀಡಲಾಗಿತ್ತು. ಆದರೆ, ಈ ಪದ್ದತಿಗೆ ಇದೀಗ ಮಸ್ಕ್​ ಬ್ರೇಕ್​ ಹಾಕಿದ್ದಾರೆ.

ಇನ್ಮುಂದೆ ಸುದ್ದಿ ಆರ್ಟಿಕಲ್​ ಲಿಂಕ್​ ಅನ್ನು ಹಂಚಿಕೊಂಡರೂ ಹೆಡ್​ಲೈನ್​ ಮತ್ತು ಸಂಪೂರ್ಣ ಸುದ್ದಿ ಓದಲು ಇರುವ ಲಿಂಕ್​ ಇಲ್ಲದೇ, ಕೇವಲ ಫೋಟೋವನ್ನು ಮಾತ್ರ ಬಿಂಬಿಸುತ್ತದೆ. ಇದರಿಂದ ಬಳಕೆದಾರರು ಇದು ನ್ಯೂಸ್​ ಅರ್ಟಿಕಲ್​ ಎಂದು ಅರಿಯಲು ಕಷ್ಟವಾಗುವುದರ ಜೊತೆಗೆ ಸುದ್ದಿಯನ್ನು ಓದಲು ಸಾಧ್ಯವಿಲ್ಲ.

ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದ್ದು, ಐಒಎಸ್​ ಬಳಕೆದಾರರು ತಮ್ಮ ಸುದ್ದಿ ಲಿಂಕ್​ ಅನ್ನು ಪೋಸ್ಟ್​ ಮಾಡಲು ಹೋದಾಗ ಅವರಿಗೆ ಈ ಸಮಸ್ಯೆ ಎದುರಾಗಿದೆ. ಅಲ್ಲದೇ, ಪೋಸ್ಟ್​ ಮಾಡಿದಾಗ ಕೇವಲ ಇಮೇಜ್​​ ಮತ್ತು ಡೊಮೈನ್​ ಹೆಸರು ಮಾತ್ರ ಕಾಣಿಸಿಕೊಂಡಿದೆ. ಸುದ್ದಿಯ ಹೆಡ್​ಲೈನ್​ ಹಾಗೂ ಲಿಂಕ್​ ನಾಪತ್ತೆಯಾಗಿದೆ ಎಂದು ವರ್ಜ್​ ವರದಿ ಮಾಡಿದೆ.

ಕಂಗಾಲಾದ ಬಳಕೆದಾರರು: ಈ ಬದಲಾವಣೆಯಿಂದಾಗಿ ಎಕ್ಸ್​ ಬಳಕೆದಾರರು ಸುದ್ದಿಯ ತಲೆ ಬರಹ ಇಲ್ಲದೇ, ಕೇವಲ ಇಮೇಜ್​ ಮತ್ತು ಡೊಮೈನ್​ ಹೆಸರನ್ನು ನೋಡಿ ಏನಿದು ಎಂದು ತಿಳಿಯದೇ ಕೆಲವು ನಿಮಿಷ ಅಚ್ಚರಿಗೆ ಒಳಗಾದರು.

ಇತ್ತೀಚೆಗಷ್ಟೇ ಮಸ್ಕ್​ ತಮ್ಮ ಎಕ್ಸ್​ ಫ್ಲಾಟ್​ಫಾರ್ಮ್​ನಲ್ಲಿ ನೇರವಾಗಿ ಹೆಚ್ಚೆಚ್ಚು ವಿಷಯಗಳನ್ನು ಪೋಸ್ಟ್​ ಮಾಡಲು ಬಳಕೆದಾರರಿಗೆ ಪ್ರೋತ್ಸಾಹಿಸಿದ್ದರು. ಅಲ್ಲದೇ, ಕಳೆದ ತಿಂಗಳು ಆಗಸ್ಟ್​ನಲ್ಲಿ ಪತ್ರಕರ್ತರಿಗೆ ನೇರವಾಗಿ ತಮ್ಮ ಸುದ್ದಿಗಳನ್ನು ಎಕ್ಸ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಅಧಿಕ ಆದಾಯ ಪಡೆಯಬಹುದು ಎಂದು ಕೂಡ ತಿಳಿಸಿದ್ದರು.

ನಿಮ್ಮ ನ್ಯೂಸ್​ ಅರ್ಟಿಕಲ್​ ಅನ್ನು ಅನ್ನು ಕೇವಲ ಮುಖ್ಯ ಇಮೇಜ್​ ಮತ್ತು ಯುಆರ್​ಎಲ್​ ಅನ್ನು ಪೋಸ್ಟ್​ ಮಾಡಿದಾಗ ಎಕ್ಸ್​​ ಅದರ ತಲೆಬರಹ (ಹೆಡ್​ಲೈನ್​) ಮತ್ತು ಟೆಕ್ಸ್ಟ್​​​ ಮತ್ತು ಲಿಂಕ್​ ಅನ್ನು ಕಣ್ಮರೆಯಾಗಿಸಿ, ಕೇವಲ ಇಮೇಜ್​ ಮಾತ್ರ ಪ್ರಕಟಿಸುತ್ತದೆ. ಇದು ನೇರವಾಗಿ ನನ್ನ ಬಳಿ ಬರುತ್ತಿದೆ. ಇದರ ಅಂದವನ್ನು ನಾವು ಮತ್ತಷ್ಟು ಹೆಚ್ಚಿಸುತ್ತೇವೆ ಎಂದು ಮಸ್ಕ್​​ ಪೋಸ್ಟ್​​ ಮಾಡುವ ಮೂಲಕ ತಿಳಿಸಿದ್ದರು.

ಇನ್ನು ಈ ಹೊಸ ಬದಲಾವಣೆಗೆ ಬಳಕೆದಾರರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಇದೊಂದು ಅದ್ಬುತ ಎಂದಿದ್ದಾರೆ. ನಾನು ನಿಮ್ಮ ಫ್ಲಾಟ್​ಫಾರ್ಮ್​ನಲ್ಲಿ ಹಲವು ಬದಲಾವಣೆಗಳನ್ನು ನೋಡುತ್ತಿದ್ದೇವೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಜನರು ಬಳಕೆ ಮಾಡುತ್ತಿದ್ದಾರೆ. ಆದರೆ, ಇದು ಒಳ್ಳೆ ಐಡಿಯಾ ಎಂದು ನಾನು ಪರಿಗಣಿಸುವುದಿಲ್ಲ ಎಂದಿದ್ದಾರೆ ಬಳಕೆದಾರರೊಬ್ಬರು.

Source : https://m.dailyhunt.in/news/india/kannada/etvbhar9348944527258-epaper-etvbhkn/suddigala+hed+lain+link+kanmare+kevala+imej+maatra+post+xnalli+mattondu+badalaavane-newsid-n544242668?listname=newspaperLanding&topic=homenews&index=12&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *