ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಎಸ್‌ಎಸ್‌ಎಲ್‌ಸಿ ಬೋರ್ಡ್! ಈಗ ಆನ್‌ಲೈನ್ ಮೂಲಕವೂ ಸಾಧ್ಯ ಈ ಕೆಲಸ

SSLC Board: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ ಇನ್ನು ಮುಂದೆ ಈ ಕೆಲಸಕ್ಕಾಗಿ ಬೇರೆಲ್ಲೂ ಅಲೆದಾಡುವ ಅಗತ್ಯವಿಲ್ಲ. ಬದಲಿಗೆ ಆನ್‌ಲೈನ್ ಮೂಲಕವೇ ಈ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. 

SSLC Board: ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಬೋರ್ಡ್ ಗುಡ್ ನ್ಯೂಸ್ ಒಂದನ್ನು ನೀಡಿದೆ. ನೀವು ನಿಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ತಿದ್ದುಪಡಿ ಮಾಡಬೇಕೆಂದಿದ್ದರೆ ಇನ್ನು ಮುಂದೆ ಈ ಕೆಲಸವನ್ನು ಆನ್‌ಲೈನ್ ನಲ್ಲಿ ಸುಲಭವಾಗಿ ಪೂರ್ಣಗೊಳಿಸಬಹುದು. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.

ಹೌದು,  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ ಇನ್ನು ಮುಂದೆ ಈ ಕೆಲಸಕ್ಕಾಗಿ ಬೇರೆಲ್ಲೂ ಅಲೆದಾಡುವ ಅಗತ್ಯವಿಲ್ಲ. ಬದಲಿಗೆ ಆನ್‌ಲೈನ್ ಮೂಲಕವೇ ಈ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. 

ಈ ಮೊದಲು ಅಂಕಪಟ್ಟಿಯಲ್ಲಿ ಅಭ್ಯರ್ಥಿ ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ  ವಿದ್ಯಾರ್ಥಿಗಳು ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕರ ಮುಖಾಂತರ ಅಗತ್ಯ ದಾಖಲೆ ಮತ್ತು ನಿಗದಿತ ಶುಲ್ಕದೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ವಿಭಾಗೀಯ ಕಛೇರಿಗಳಿಗೆ/ಮಂಡಳಿಗೆ ಅಂಚೆ ಮೂಲಕ ಸಲ್ಲಿಸಬೇಕಾಗಿತ್ತು. ಆದರೆ, ಇದೀಗ ಪತ್ರ ವ್ಯವಹಾರವನ್ನು ತಡೆಗಟ್ಟಿ   ಆನ್‌ಲೈನ್ ಸೇವೆ ನೀಡುವುದು ಸೂಕ್ತವೆಂದು ಮನಗಂದಿರುವ ಎಸ್‌ಎಸ್‌ಎಲ್‌ಸಿ ಬೋರ್ಡ್ ವಿದ್ಯಾರ್ಥಿಗಳಿಗಾಗಿ ಈ ನೂತನ ಸೌಲಭ್ಯವನ್ನು ಕಲ್ಪಿಸಿದೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪರಿಷ್ಕೃತ ಅಂಕಪಟ್ಟಿಯನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ವಿಧಾನ ಈ ಕೆಳಕಂಡಂತಿದೆ:- 
* ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಳು ಅಂಕಪಟ್ಟಿಯಲ್ಲಿ ಅಭ್ಯರ್ಥಿ/ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ, ಅಭ್ಯರ್ಥಿಗಳು ತಾವು ಅಭ್ಯಸಿಸಿದ ಶಾಲೆಯ ಶಾಲಾ ಮುಖ್ಯೋಪಾಧ್ಯಾಯರಿಗೆ ಪೂರಕ ದಾಖಲೆಗಳನ್ನು ಸಲ್ಲಿಸತಕ್ಕದ್ದು.

*  ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಜಾಲಕಾಣದ ಶಾಲಾ ಲಾಗಿನ್ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಿಗದಿತ ಶುಲ್ಕವನ್ನು ಆನ್‌ಲೈನ್ ಮುಖಾಂತರ ಅಂದರೆ  ಎಲ್ಲಾ ಬ್ಯಾಂಕಿನ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್, ಮತ್ತು ಇಂಟರ್‌ನೇಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. 

* ಒಂದೊಮ್ಮೆ ಈ ಸೌಲಭ್ಯ ಇಲ್ಲದವರು ಆಫ್‌ಲೈನ್‌ನಲ್ಲಿ ಪಾವತಿಸಲು, ಚಲನ್‌ನನ್ನು ಸದರಿ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕ್ನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದಾಗಿರುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.

*  ಪ್ರಕ್ರಿಯೆ ಪೂರ್ಣಗೊಂಡ ನಂತರ ಮಾಹಿತಿಯು ಸಂಬಂಧಿಸಿದ ವಿಭಾಗೀಯ ಕಛೇರಿ/ಮಂಡಲಿಯ ಲಾಗಿನ್ಗೆ ಹೋಗುತ್ತದೆ.

* ಶಾಲಾ ಮುಖ್ಯೋಪಾಧ್ಯಾಯರು ಅಪ್ಲೋಡ್ ಮಾಡಲಾದ ಅಗತ್ಯ ದಾಖಲೆಗಳನ್ನು ವಿಭಾಗೀಯ/ಮಂಡಳಿ ಕಛೇರಿಗಳಲ್ಲಿ ನಿಯಮಾನುಸಾರ ಪರಿಶೀಲಿಸಿ, ಪ್ರಸ್ತಾವನೆಯು ತಿದ್ದುಪಡಿಗೆ ಅರ್ಹವಿದ್ದಲ್ಲಿ ಸಂಬಂಧಿಸಿದ ವಿದ್ಯಾರ್ಥಿಯ ಹಿಂದಿನ ಮೂಲ ಅಂಕಪಟ್ಟಿಯನ್ನು ವಿಭಾಗೀಯ ಕಛೇರಿ/ಮಂಡಲಿಗೆ ಭೌತಿಕವಾಗಿ ಕಳುಹಿಸುವಂತೆ ಮುಖ್ಯ ಶಿಕ್ಷಕರಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ರವಾನಿಸಲಾಗುವುದು.

* ಹಿಂದಿನ ಮೂಲ ಅಂಕಪಟ್ಟಿಯನ್ನು ವಿಭಾಗೀಯ ಕಛೇರಿ/ಮಂಡಲಿಗೆ ಸ್ವೀಕೃತವಾದ ನಂತರ ಅದನ್ನು ನಾಶಪಡಿಸಿ,  ಪ್ರಸ್ತಾವನೆಯಲ್ಲಿ ಕೋರಿರುವ ತಿದ್ದುಪಡಿಗಳನ್ನು ಅಳವಡಿಸಿ ಪರಿಷ್ಕೃತ ಅಂಕಪಟ್ಟಿಯನ್ನು ಸಂಬಂಧಿಸಿದ ಶಾಲೆಗೆ ಸ್ಪೀಡ್ ಪೋಸ್ಟ್ ಮುಖಾಂತರ ರವಾನಿಸುವುದು. 

* ಆನ್ಲೈನ್ ಮುಖಾಂತರ ಪ್ರಸ್ತಾವನೆಯನ್ನು ಸಲ್ಲಿಸುವ ಸಂದರ್ಭದಲ್ಲಿ ಅಪ್ಲೋಡ್ ಮಾಡುವ ದಾಖಲೆಗಳನ್ನು ತಿದ್ದುಪಡಿ/ನಕಲಿ ಮಾಡಿದಲ್ಲಿ ಅಂತಹ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.

ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳ ಕುರಿತು ಶಾಲಾ ಹಂತದಲ್ಲಿ ಮತ್ತು ವಿಭಾಗೀಯ ಕಛೇರಿಯ  ಕ್ರಮವಹಿಸುವ ಬಗ್ಗೆ ವಿವರವಾದ  ಮಾಹಿತಿಯನ್ನು ಈ ಸುತ್ತೋಲೆಯೊಂದಿಗೆ ಆದೇಶ ಹೊರಡಿಸಲಾಗಿದೆ. ಅದರಂತೆ ರಾಜ್ಯದ ಎಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಮತ್ತು ವಿಭಾಗೀಯ ಕಛೇರಿ/ಮಂಡಲಿಯಲ್ಲಿ ಕ್ರಮವಹಿಸಲು ತಿಳಿಸಿದೆ. 

Source : https://zeenews.india.com/kannada/career/sslc-board-gave-good-news-to-students-now-this-work-is-also-possible-through-online-163981

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *