ಭಾರತ ಪಾಕ್​ ಹೈವೋಲ್ಟೇಜ್​ ಪಂದ್ಯ.. ವಿಶ್ವಕಪ್​ ಉದ್ಘಾಟನಾ ಸಂಭ್ರಮ, ಮುಂಬೈಯಿಂದ ವಿಶೇಷ ರೈಲಿನ ವ್ಯವಸ್ಥೆ

ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕ್ರೀಡಾಂಗಣಗಳಿಗೆ ಮುಗಿಬೀಳುತ್ತಾರೆ. ವಿಶ್ವಕಪ್‌ನ ಅಂಗವಾಗಿ ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಹುಕಾಲದ ಪ್ರತಿಸ್ಪರ್ಧಿಗಳ ನಡುವಿನ ಪಂದ್ಯ ನಡೆಯಲಿದೆ. ಹೀಗಾಗಿ ಹೆಚ್ಚುವರಿಯಾಗಿ ರೈಲಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಅಹಮದಾಬಾದ್‌, ಗುಜರಾತ್​: ಭಾರತ-ಪಾಕಿಸ್ತಾನ ಪಂದ್ಯ ಎಂದರೆ ಆ ಮಜಾನೇ ಬೇರೆ ಇರುತ್ತದೆ. ಆ ಕದನವನ್ನು ವೀಕ್ಷಿಸಲು ಅಭಿಮಾನಿಗಳು ಕ್ರೀಡಾಂಗಣಗಳಿಗೆ ಮುಗಿಬೀಳುವುದು ಸಾಮಾನ್ಯ. ವಿಶ್ವಕಪ್‌ನ ನಿಮಿತ್ತ ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಹುಕಾಲದ ಪ್ರತಿಸ್ಪರ್ಧಿಗಳ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಮುಂಬೈನಿಂದ ಅಹಮದಾಬಾದ್‌ಗೆ ವಂದೇ ಭಾರತ್ ಸೇರಿದಂತೆ ಎರಡು ವಿಶೇಷ ರೈಲುಗಳನ್ನು ಓಡಿಸಲು ಪಶ್ಚಿಮ ರೈಲ್ವೆ ಸಿದ್ಧತೆ ನಡೆಸಿದೆ.

ಪಶ್ಚಿಮ ರೈಲ್ವೆಯು ಕ್ರೀಡಾಕೂಟಕ್ಕಾಗಿ ಎರಡು ನಗರಗಳ ನಡುವೆ ರೈಲುಗಳನ್ನು ಓಡಿಸುತ್ತಿರುವುದು ಇದೇ ಮೊದಲು. ಸಂಪೂರ್ಣ ಎಸಿ ರೈಲು ಶುಕ್ರವಾರ ರಾತ್ರಿ 9.30ಕ್ಕೆ ಮುಂಬೈನಿಂದ ಹೊರಟು ಮರುದಿನ ಬೆಳಗ್ಗೆ 5.30ಕ್ಕೆ ಅಹಮದಾಬಾದ್ ತಲುಪಲಿದೆ. ಅಲ್ಲದೇ, ಪಂದ್ಯದ ಮರುದಿನ ಮುಂಜಾನೆ 4 ಗಂಟೆಗೆ ಅಹಮದಾಬಾದ್‌ನಿಂದ ಹೊರಡುವ ರೈಲು ಮಧ್ಯಾಹ್ನ ಮುಂಬೈ ತಲುಪಲಿದೆ.

ಪಂದ್ಯಕ್ಕೂ ಮುನ್ನ ಸಂಭ್ರಮ: ವಿಶ್ವಕಪ್‌ನಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಬಿಸಿಸಿಐ ವಿಶೇಷ ವ್ಯವಸ್ಥೆ ಕೈಗೊಂಡಿದೆ. ಈ ವಿಶ್ವಕಪ್ ಯಾವುದೇ ಉದ್ಘಾಟನಾ ಸಮಾರಂಭವಿಲ್ಲದೇ ಆರಂಭವಾಗಿರುವುದು ಗೊತ್ತಿರುವ ಸಂಗತಿ. ಈ ಹಿನ್ನಲೆ ಭಾರತ – ಪಾಕ್ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಿಸಿಸಿಐ ವಿಶೇಷ ಕಾರ್ಯಕ್ರಮ ಆಯೋಜಿಸಲಿದೆ ಎಂದು ವರದಿಯಾಗಿದೆ.

ಈ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಅವರನ್ನು ಬಿಸಿಸಿಐ ಆಹ್ವಾನಿಸಿದ್ದು ಗೊತ್ತೇ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಈ ಅದ್ಧೂರಿ ಸಮಾರಂಭದಲ್ಲಿ ಬಾಲಿವುಡ್ ಗಾಯಕ ಅರ್ಜಿತ್ ಸಿಂಗ್ ಕಾರ್ಯಕ್ರಮ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೈದರಾಬಾದ್​ ನಿರ್ಗಮಿಸಿದ ಪಾಕ್​: ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿರುವ ಮಹಾಯುದ್ಧಕ್ಕೆ ಕಾಲ ಸಮೀಪಿಸುತ್ತಿದೆ. ಈ ಪ್ರತಿಷ್ಠಿತ ಪಂದ್ಯಕ್ಕಾಗಿ ಪಾಕಿಸ್ತಾನ ಬುಧವಾರ ಅಹಮದಾಬಾದ್ ತಲುಪಿದೆ. ಪಾಕಿಸ್ತಾನವು ಹೈದರಾಬಾದ್‌ನಲ್ಲಿ 15 ದಿನಗಳನ್ನು ಕಳೆದಿದ್ದು, ವಿಶ್ವಕಪ್‌ನಲ್ಲಿ ಅಭ್ಯಾಸದ ಜೊತೆಗೆ ಎರಡು ಪಂದ್ಯಗಳನ್ನು ಆಡಿದೆ ಎಂದು ತಿಳಿದಿದೆ. ಉಪ್ಪಲ್‌ನಲ್ಲಿ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಸತತ ಜಯ ಸಾಧಿಸಿದ ಪಾಕಿಸ್ತಾನ ಭಾರತದೊಂದಿಗೆ ಮೆಗಾ ಫೈಟ್‌ಗಾಗಿ ವಿಶೇಷ ವಿಮಾನದಲ್ಲಿ ನಗರದಿಂದ ನಿರ್ಗಮಿಸಿದ್ದಾರೆ. ಇಂದಿನಿಂದ ಎರಡು ದಿನಗಳ ಕಾಲ ಪಾಕ್​ ತಂಡ ಅಲ್ಲಿ ಅಭ್ಯಾಸ ನಡೆಸಲಿದೆ.

ಅಹಮದಾಬಾದ್​ನಲ್ಲಿ ಗಿಲ್ ಕೂಡ ಅನುಮಾನ: ಡೆಂಘೀ ಜ್ವರದಿಂದ ಚೇತರಿಸಿಕೊಂಡಿರುವ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಬುಧವಾರ ಅಹಮದಾಬಾದ್ ತಲುಪಿದ್ದಾರೆ. ಆದರೆ, ಶನಿವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ. ಗುರುವಾರ ಗಿಲ್ ಅಭ್ಯಾಸ ನಡೆಸುತ್ತಾರೋ ಇಲ್ಲವೋ ಗೊತ್ತಿಲ್ಲ. ಅವರು ಚೆನ್ನಾಗಿ ಚೇತರಿಸಿಕೊಳ್ಳಬೇಕಾಗಿದೆ. ಆದರೆ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುತ್ತಾರೆಯೇ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗಿಲ್ ಈಗಾಗಲೇ ವಿಶ್ವಕಪ್‌ನಲ್ಲಿ ಭಾರತದ ಮೊದಲ ಎರಡು ಪಂದ್ಯಗಳನ್ನು ಅಲಭ್ಯ ಇರುವುದು ಗೊತ್ತಿರುವ ಸಂಗತಿ.

Source : https://m.dailyhunt.in/news/india/kannada/etvbhar9348944527258-epaper-etvbhkn/bhaarata+paak+haivoltej+pandya+vishvakap+udghaatana+sambhrama+mumbaiyindha+vishesha+railina+vyavasthe-newsid-n546532924?listname=newspaperLanding&topic=homenews&index=7&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *