ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಪದ ಬದಲಾವಣೆಯ ಶಿಫಾರಸಿಗೆ ಆಕ್ಷೇಪ ವ್ಯಕ್ತವಾಗಿದ್ದು, ಈ ಬಗ್ಗೆ ರಾಜ್ಯಗಳ ಅಭಿಪ್ರಾಯ ಪಡೆಯಲು NCERT ಉನ್ನತ ಮಟ್ಟದ ಸಮಿತಿ ಮತ್ತೊಂದು ಸೂಚನೆ ನೀಡಿದೆ.

ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಉನ್ನತ ಮಟ್ಟದ ಸಮಿತಿಯು ಎಲ್ಲ ತರಗತಿಗಳ ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಪದ ಬದಲಿಗೆ ಭಾರತ, ಪ್ರಾಚೀನ ಇತಿಹಾಸ ಬದಲಿಗೆ ಶಾಸ್ತ್ರೀಯ ಇತಿಹಾಸ ಎಂದು ಬಳಸಲು ಶಿಫಾರಸು ಮಾಡಿತ್ತು.
ಇದರ ಬೆನ್ನಲ್ಲೇ, ಪಠ್ಯಕ್ರಮದಲ್ಲಿ ಬದಲಾವಣೆಗೆ ಶೈಕ್ಷಣಿಕ ತಜ್ಞರ ಜೊತೆಗೆ ವಿಸ್ತೃತವಾಗಿ ಚರ್ಚಿಸಬೇಕು. ಅಂತಿಮ ನಿರ್ಧಾರಕ್ಕೂ ಮುನ್ನ ಎನ್‌ಸಿಇಆರ್‌ಟಿ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ಗುರುವಾರ ಸೂಚಿಸಿದೆ.
ಶಾಲಾ ಪಠ್ಯಪುಸ್ತಕಗಳಲ್ಲಿನ ಇಂಡಿಯಾ ಪದವನ್ನು ಕಿತ್ತು ಹಾಕಿ ಭಾರತವನ್ನು ಬಳಕೆ ಮಾಡಲು 7 ಸದಸ್ಯರ ಉನ್ನತ ಮಟ್ಟದ ಸಮಿತಿಯು ನಿನ್ನೆಯಷ್ಟೇ ಸೂಚಿಸಿತ್ತು. ಇದು ಕೆಲ ರಾಜ್ಯಗಳಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ರಾಜ್ಯಗಳ ಅಭಿಪ್ರಾಯವನ್ನೂ ಆಲಿಸಿ ಎಂದು ಮತ್ತೊಂದು ಸೂಚನೆಯನ್ನು ನೀಡಲಾಗಿದೆ.
ಆಕ್ಷೇಪಕ್ಕೆ ಅವಕಾಶ: ಹಿರಿಯ ಮಾಧ್ಯಮಿಕ ಹಂತದವರೆಗಿನ ಪಠ್ಯಕ್ರಮಗಳು ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಆಯಾ ಸರ್ಕಾರಗಳು ತಮ್ಮ ಸಲಹೆಗಳನ್ನು ನೀಡಬಹುದು. ಉನ್ನತ ಶಿಕ್ಷಣವು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಎಲ್ಲರೂ ಪದಗಳ ಬದಲಿಗೆ ಒಪ್ಪಿಕೊಳ್ಳುವ ಅಥವಾ ವಿರೋಧಿಸುವ ಅವಕಾಶವಿದೆ. ಹೀಗಾಗಿ ಈ ಬಗ್ಗೆ ರಾಜ್ಯ ಸರ್ಕಾರಗಳು ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಬಹುದು ಎಂದು ಸಮಿತಿ ಹೇಳಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ನರೇಂದ್ರ ಕುಮಾರ್ ಜೈನ್, ಸಂವಿಧಾನದ 2 ನೇ ವಿಧಿಯಲ್ಲಿ ಇಂಡಿಯಾ ಅಂದರೆ ಭಾರತ ಎಂದು ಬರೆಯಲಾಗಿದೆ. ಈಗ, ಭಾರತ ಎಂಬ ಪದವು ಗುಲಾಮಿ ಪದ ಎಂದು ಕೇಂದ್ರ ಸರ್ಕಾರ ಭಾವಿಸುತ್ತಿದೆ. ಬದಲಾಯಿಸಲು ಬಯಸಿದ್ದು, ಎನ್‌ಸಿಇಆರ್‌ಟಿ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಒಪ್ಪಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದರು.
ಆದಾಗ್ಯೂ, ರಾಜ್ಯ ಸರ್ಕಾರಗಳು ತಮ್ಮ ಸಲಹೆಗಳನ್ನು ನೀಡಬಹುದು. ಹಿರಿಯ ಮಾಧ್ಯಮಿಕ ಹಂತದವರೆಗಿನ ಶಿಕ್ಷಣದ ಅಧ್ಯಾಯಗಳು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುತ್ತವೆ. ಉನ್ನತ ಶಿಕ್ಷಣವು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಎಲ್ಲರೂ ಅದನ್ನು ಒಪ್ಪಿಕೊಳ್ಳಲು ಸಜ್ಜಾಗಬೇಕು. ಆಕ್ಷೇಪಣೆಗಳಿದ್ದಲ್ಲಿ ಮಂಡಿಸಬಹುದು ಎಂದು ಜೈನ್ ಹೇಳಿದರು.
ಬದಲಾವಣೆಗೆ ವಿರೋಧ; ತೆಲಂಗಾಣದಿಂದ ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ರಾಜ್ಯಸಭಾ ಸಂಸದ ಕೆ ಕೇಶವ ರಾವ್, ಶಾಸ್ತ್ರೀಯ ಇತಿಹಾಸವು ತನ್ನದೇ ಆದ ವ್ಯಾಖ್ಯಾನವನ್ನು ಹೊಂದಿದೆ. ಇದಕ್ಕೆ ವಿರೋಧವಿಲ್ಲ. ಸಮಸ್ಯೆ ಅಂತಿಮ ರೂಪ ಪಡೆಯುವ ಮೊದಲು ಚರ್ಚಿಸಲಿ. ಆದರೆ ಸರ್ಕಾರ ಹಠಾತ್ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯಸಭೆಯ ಮಾಜಿ ಸಂಸದ ಮತ್ತು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರು ಈ ಶಿಫಾರಸನ್ನು ತೀವ್ರವಾಗಿ ವಿರೋಧಿಸಿದರು. ಎನ್‌ಸಿಇಆರ್‌ಟಿ ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು. ಆದಾಗ್ಯೂ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು NCERT ಹೇಳಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1