ಮಂಡ್ಯದ ಹೈದಾ ವಿಶ್ವಾಸ್, 80ಕೆಜಿ ಸೀನಿಯರ್ ವಿಭಾಗದಲ್ಲಿ 40 ದೇಶದಿಂದ ಬಂದಿದ್ದ ದೇಹ ದೃಢ ಸರ್ಧಿಗಳನ್ನ ಹಿಮ್ಮೆಟ್ಟಿಸಿ ಚಿನ್ನದ ಪದಕವನ್ನ ಪಡೆದಿದ್ದಾರೆ. ಜೊತೆಗೆ ಕ್ಲಾಸಿಕಲ್ ಬಾಡಿ ಬಿಲ್ಡಿಂಗ್ ವಿಭಾಗದಲ್ಲೂ ಬೆಳ್ಳಿ ಪದಕ ಪಡೆದು ದೇಶದ ಕೀರ್ತಿಯನ್ನ ಕನ್ನಡ ನಾಡಿನ ಹೆಸರನ್ನು ಮಿಂಚಿಸಿದ್ದಾರೆ.

ಸಾಧನೆ ಮಾಡಬೇಕು ಅನ್ನೋ ಛಲವಿದ್ರೇ ಏನ್ನನ್ನ ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಈ ಯುವಕನೇ ಸಾಕ್ಷಿ..ಕಳೆದ 13 ವರ್ಷಗಳಿಂದ ಬಾಡಿ ಬಿಲ್ಡ್ ಮಾಡಿ ಈಗ ಮಿಸ್ಟರ್ ಯುನಿವರ್ಸ್ ಪಟ್ಟವನ್ನ ತನ್ನಾಗಿಸಿಕೊಂಡಿದ್ದಾನೆ ಈ ಮಂಡ್ಯದ ಹೈದಾ..!.
ಹೌದು, ಹೀಗೆ ಕತ್ತಿನಲ್ಲಿ ಎರಡು ಪದಕ, ಕೈನಲ್ಲಿ ಎರಡು ಟ್ರೋಫಿ ಹಿಡಿದು ನಿಂತಿರೋ ಯುವಕನ ಹೆಸರು ವಿಶ್ವಾಸ್. ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಕುಟುಂಬದೊಂದಿಗೆ ವಾಸವಾಗಿರೋ ವಿಶ್ವಾಸ್ ಕಳೆದ ವಾರ ಥೈಲಾಂಡ್ ನಲ್ಲಿ ನಡೆದ ಬಾಡಿ ಬಿಲ್ದಿಂಗ್ ಕಂಪೀಟೇಷನ್ ನಲ್ಲಿ ಭಾರತವನ್ನ ಪ್ರತಿನಿಧಿಸಿ ಸೀನಿಯರ್ ವಿಭಾಗದಲ್ಲಿ ಮಿಸ್ಟರ್ ಯುನಿವರ್ಸ್ ಪಟ್ಟವನ್ನ ಪಡೆದಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಮಿಸ್ಟರ್ ಯುನಿವರ್ಸ್ ಪಟ್ಟ!
ಮಂಡ್ಯದ ಹೈದಾ ವಿಶ್ವಾಸ್ , 80ಕೆಜಿ ಸೀನಿಯರ್ ವಿಭಾಗದಲ್ಲಿ 40 ದೇಶದಿಂದ ಬಂದಿದ್ದ ದೇಹ ದೃಢ ಸರ್ಧಿಗಳನ್ನ ಹಿಮ್ಮೆಟ್ಟಿಸಿ ಚಿನ್ನದ ಪದಕವನ್ನ ಪಡೆದಿದ್ದಾರೆ. ಜೊತೆಗೆ ಕ್ಲಾಸಿಕಲ್ ಬಾಡಿ ಬಿಲ್ಡಿಂಗ್ ವಿಭಾಗದಲ್ಲೂ ಬೆಳ್ಳಿ ಪದಕ ಪಡೆದು ದೇಶದ ಕೀರ್ತಿಯನ್ನ ಕನ್ನಡ ನಾಡಿನ ಹೆಸರನ್ನು ಮಿಂಚಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡದ ಯುವಕ ಅದು ನಮ್ಮ ಮಂಡ್ಯದ ಯುವಕ ಈ ರೀತಿ ದೇಹ ದೃಢ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಚಿನ್ನದ ಪದಕ ಪಡೆದಿರೋದು ಹೆಮ್ಮೆಯ ವಿಚಾರವೇ ಸರಿ. ಪ್ರಸ್ತುತ, ಮುಂದೆ ಇದೇ ವರ್ಷದ ಅಂತ್ಯದಲ್ಲಿ ನಡೆಯುವ ಮಿಸ್ಟರ್ ವರ್ಲ್ಡ್ ನಲ್ಲಿ ಭಾಗಿಯಾಗಿ ಭಾರತಕ್ಕೆ ಮತ್ತೊಂದು ಕೀರ್ತಿ ತರೋದಕ್ಕಾಗಿ ವರ್ಕ್ ಔಟ್ ಮಾಡ್ತಿದ್ದಾರೆ ವಿಶ್ವಾಸ್. ಅವರಿಗೆ ನಮ್ಮ ಕಡೆಯಿಂದಲೂ ಆಲ್ ದ ಬೆಸ್ಟ್..
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0