ಕಲಬುರಗಿ: ಕೆಇಎ ಪರೀಕ್ಷೆಯಲ್ಲಿ (KEA Exams) ಬ್ಲೂಟೂತ್ ಮೂಲಕ ಅಕ್ರಮ ನಡೆಸುತ್ತಿದ್ದ ಗ್ಯಾಂಗ್ ಪತ್ತೆ ನಂತರ ಮತ್ತೊಂದು ಅಘಾತಕಾರಿ ಮಾಹಿತಿ ಹೊರ ಬಂದಿದೆ. ಉದ್ಯೋಗದ ಕನಸು ಹೊತ್ತು ಪರೀಕ್ಷೆ ಬರೆದ ಅಭ್ಯರ್ಥಿಗಳ ಪಾಲಿಗೆ ಇದು ನಿಜಕ್ಕೂ ಅಘಾತಕಾರಿಯ ಸುದ್ದಿ ಆಗಿದೆ. ಅಭ್ಯರ್ಥಿಯೊಬ್ಬನ ಓಎಂಆರ್ ಶೀಟ್ ಮತ್ತು ಹಾಲ್ ಟಿಕೆಟ್ ಸಾಮಾಜಿಕ ಜಾಲದಲ್ಲಿ (Social Media) ವೈರಲ್ ಆಗಿದೆ. ಹುಬ್ಬಳ್ಳಿಯಿಂದ ಈ ಓಎಂಆರ್ ಶೀಟ್ (OMR Sheet) ವೈರಲ್ ಆಗಿರುವ ಶಂಕೆ ವ್ಯಕ್ತವಾಗಿದೆ. ಪರೀಕ್ಷಾ ಕೇಂದ್ರದೊಳಗೆ ಕ್ಯಾಮೆರಾ ಅಥವಾ ಮೊಬೈಲ್ ತೆಗೆದುಕೊಂಡು ಹೋಗುತ್ತಿಲ್ಲ. ಆದ್ರೂ ಓಎಂಆರ್ ಶೀಟ್ ಹೊರಗೆ ಬಂದಿದ್ದು ಹೇಗೆ ಎಂಬ ಪ್ರಶ್ನೆಯೊಂದು ಮೂಡಿದೆ.

ಈ ಓಎಂಆರ್ ಶೀಟ್ ಹೊರಬಂದ ಬೆನ್ನಲ್ಲೇ ಕಲಬುರಗಿ, ಯಾದಗಿರಿ ಹೊರತುಪಡಿಸಿಯೂ ಬೇರೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆಯಾ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಓಎಂಆರ್ ಶೀಟ್ ಜೊತೆಯಲ್ಲಿ ಅಭ್ಯರ್ಥಿಯ ಹಾಲ್ ಟಿಕೆಟ್ ಸಹ ಇರೋದನ್ನು ಗಮನಿಸಬಹುದಾಗಿದೆ.
ಸಮಗ್ರ ತನಿಖೆಗೆ ಅಭ್ಯರ್ಥಿಗಳ ಆಗ್ರಹ
ಈ ಫೋಟೋ ಹೊರಗಡೆ ಇರುವವರಿಗೆ ಕಳುಹಿಸಿದರೆ ಯಾವ ಅಭ್ಯರ್ಥಿಗೆ ಯಾವ ಪ್ಯಾಟರ್ನ್ ಪ್ರಶ್ನೆಗಳಿವೆ ಎನ್ನುವುದು ಉತ್ತರ ಹೇಳುವವರಿಗೆ ಸುಲಭವಾಗುತ್ತದೆ. ವೈರಲ್ ಆಗಿರುವ ಹಾಲ್ ಟಿಕೆಟ್ ಇರೋ ಅಭ್ಯರ್ಥಿ ಮತ್ತು ಆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕನ ವಿಚಾರಣೆ ನಡೆಸಿದರೆ ಸತ್ಯ ಬಯಲಿಗೆ ಬರಲಿದೆ. ಹಾಗಾಗಿ ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ರಾಜ್ಯದ ಬೇರೆ ಬೇರೆ ಕಡೆಯೂ ಅಕ್ರಮ ನಡೆದಿರುವ ಶಂಕೆಗೆ ಈ ಫೋಟೋ ಸಾಕ್ಷಿ ನೀಡುತ್ತಿದೆ. ಕೆಇಎ ಪರೀಕ್ಷಾ ಅಕ್ರಮಗಳು ಬಗೆದಷ್ಟೂ ಬಯಲಾಗುತ್ತಲೇ ಇದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1