PAN Card: ಪ್ಯಾನ್‌ ಕಾರ್ಡ್‌ ಹಾಳಾಗಿದೆಯೇ? ಮತ್ತೆ ಪ್ರಿಂಟ್‌ ಪಡೆಯುವುದು ಹೇಗೆ? ಇಲ್ಲಿದೆ ವಿವರ

How To Reprint Pan Card: ನಿಮ್ಮ ಪ್ಯಾನ್‌ ಕಾರ್ಡ್‌ ಹಳತಾಗಿದ್ದರೆ ಅಥವಾ ಕಳೆದು ಹೋದರೆ, ನೀವು ಮತ್ತೆ ಪ್ರಿಂಟ್‌ ಪಡೆಯಬಹುದು. ಇದಕ್ಕೆ ಕೇವಲ 50 ರೂಪಾಯಿಗೆ ಮನೆಯಲ್ಲಿಯೇ ಹೊಸ ಪ್ಯಾನ್ ಕಾರ್ಡ್ ಪ್ರಿಂಡ್‌ ಪಡೆಯಬಹುದು. ಈ ಕುರಿತ ಪೂರ್ಣ ವಿವರ ಇಲ್ಲಿದೆ.

ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ಹಿಡಿದು ಹೂಡಿಕೆ, ಆಸ್ತಿ ಖರೀದಿಸುವುದು, ಬ್ಯಾಂಕ್ ಖಾತೆ ತೆರೆಯುವುದು ಇತ್ಯಾದಿ ಎಲ್ಲಾ ಕಾರ್ಯಗಳಿಗೆ ಪ್ಯಾನ್‌ ಕಾರ್ಡ್‌ ಅತ್ಯಗತ್ಯ. ಹೀಗಾಗಿ, ಪ್ಯಾನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ದೀರ್ಘಕಾಲದವರೆಗೆ ಪ್ಯಾನ್ ಕಾರ್ಡ್ ಬಳಸುವುದರಿಂದ, ಅದು ಕೆಲವೊಮ್ಮೆ ಹಾಳಾಗಬಹುದು ಅಥವಾ ಕಳೆದು ಹೋಗಬಹದು. ಈ ಸಂದರ್ಭದಲ್ಲಿ ನೀವು ಸುಲಭವಾಗಿ ಪಾನ್ ಕಾರ್ಡ್ ಅನ್ನು ಮತ್ತೆ ಪ್ರಿಂಟ್‌ ಪಡೆಯಬಹುದು. ಇದಕ್ಕಾಗಿ ನೀವು ಕೆಲವು ಸುಲಭ ಹಂತಗಳನ್ನು ಅನುಸರಿಸಬೇಕು. ಇದರ ನಂತರ ಕಾರ್ಡ್ ಅನ್ನು ನಿಮ್ಮ ಮನೆಗೇ ತಲುಪಿಸಲಾಗುತ್ತದೆ. ಇದಕ್ಕಾಗಿ ನೀವು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ.

ಪ್ಯಾನ್‌ ಕಾರ್ಡ್ ಪ್ರಿಂಟ್‌ ಪಡೆಯಲು ಶುಲ್ಕ ಎಷ್ಟು?

ಸ್ಥಳೀಯ ಕಾಮನ್‌ ಸರ್ವೀಸ್‌ ಸೆಂಟರ್‌ಗಳಲ್ಲಿ ಅಥವಾ ಸೈಬರ್‌ ಸೆಂಟರ್‌ಗಳಲ್ಲಿ ಎರಡನೇ ಪ್ಯಾನ್ ಕಾರ್ಡ್ ಪ್ರಿಂಟ್‌ ಪಡೆಯಲು 100 ರೂ. ನಿಂದ 200 ರೂ.ವರೆಗೆ ಶುಲ್ಕ ಪಡೆಯುತ್ತಾರೆ. ಆದರೆ ಎನ್‌ಎಸ್‌ಡಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಕೇವಲ ರೂ 50 ಪಾವತಿಸಿ ಪ್ಯಾನ್ ಕಾರ್ಡ್ ಪ್ರಿಂಟ್‌ ಪಡೆಯಬಹುದು. ನೀವು ಕೂಡ ಹೊಸ ಪ್ಯಾನ್ ಕಾರ್ಡ್ ಪಡೆಯಲು ಬಯಸಿದರೆ, ರೀಪ್ರಿಂಟ್‌ ಪಡೆಯುವುದು ಹೇಗೆಂಬ ಮಾಹಿತಿ ಇಲ್ಲಿದೆ.

PAN ಕಾರ್ಡ್ ರೀಪ್ರಿಂಟ್‌ ಪಡೆಯುವುದು ಹೇಗೆ?

1. ಇದಕ್ಕಾಗಿ ನೀವು Googleಗೆ ಹೋಗಿ Reprint Pan Card ಎಂದು ಸರ್ಚ್‌ ಮಾಡಿ.
2. ನಂತರ NSDLನ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಕಾಣಿಸುತ್ತದೆ. ಇದನ್ನು ಕ್ಲಿಕ್‌ ಮಾಡಿ ಪ್ಯಾನ್ ಕಾರ್ಡ್ ರೀಪ್ರಿಂಟ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಇದರ ನಂತರ ಪ್ಯಾನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್‌ನಂತಹ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ.
4. ಇದರ ನಂತರ ನೀವು ನಿಯಮಗಳು ಮತ್ತು ಷರತ್ತುಗಳನ್ನು ಅಗ್ರೀ ಮಾಡಿ ಸಬ್ಮಿಟ್‌ ಬಟನ್‌ ಒತ್ತಬೇಕು.
5. ಇದರ ನಂತರ, ನಿಮ್ಮ ಪ್ಯಾನ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ದಾಖಲಿಸುವ ಪುಟ ತೆರೆಯುತ್ತದೆ. ಅದನ್ನು ಪರಿಶೀಲಿಸಿ.
6. ಇದರ ನಂತರ ನೀವು OTP ಪಡೆಯಲು ಇರುವ ಬಟನ್‌ ಕ್ಲಿಕ್ ಮಾಡಿ.
7. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಇಲ್ಲಿ ನಮೂದಿಸಿ.
8. ಇದರ ನಂತರ ಅದನ್ನು ವ್ಯಾಲಿಡೇಶನ್‌ ಮಾಡಬೇಕಾಗುತ್ತದೆ.
9. ಇದರ ನಂತರ ನೀವು ಪ್ಯಾನ್ ಕಾರ್ಡ್ ಪಡೆಯಲು 50 ರೂ. ಶುಲ್ಕ ಪಾವತಿಸಬೇಕು.
10. ಶುಲ್ಕವನ್ನು ಪಾವತಿಸಲು ನೀವು ನೆಟ್ ಬ್ಯಾಂಕಿಂಗ್ ಅಥವಾ UPI ಅನ್ನು ಬಳಸಬಹುದು.

11. ಶುಲ್ಕ ಪಾವತಿಯ ನಂತರ, ನಿಮ್ಮ PAN ಕಾರ್ಡ್ ರೀಪ್ರಿಂಟ್‌ ಅನ್ನು 7 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.

Source : https://kannada.economictimes.com/class-room/pan-card-reprint-get-pan-card-at-home-for-just-rs-50-know-its-easy-process/articleshow/104997612.cms

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *