146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ಬೌಲ್ಡ್, ಕ್ಯಾಚ್, ರನೌಟ್ ಆಗದೆ ಮೈದಾನಕ್ಕೂ ಬರದೆ ಔಟ್ ಆದ ಬ್ಯಾಟರ್!! ಹೇಗೆ ಗೊತ್ತಾ

Timed Out Rule in Cricket: ಇದರ ಪ್ರಕಾರ, ಯಾವುದೇ ಒಬ್ಬ ಆಟಗಾರ ಸಮಯದ ಒಳಗೆ ಮೈದಾನಕ್ಕೆ ಬರದಿದ್ದರೆ, ಆತನನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಯಾರೂ ಈ ನಿಯಮದಿಂದ ಹೊರಗುಳಿರಲಿಲ್ಲ.

Angelo Mathews Timed Out: ಕ್ರಿಕೆಟ್’ನಲ್ಲಿ ‘ಟೈಮ್ಡ್ ಔಟ್’ ಎಂಬ ನಿಯಮವಿದೆ. ಇದರ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಈ ನಿಯಮವನ್ನು ಸಮಯಕ್ಕೆ ಸರಿಯಾಗಿ ಆಟವು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವ ಸಲುವಾಗಿ ಜಾರಿಗೆ ತರಲಾಗಿದೆ. ಒಂದು ವೇಳೆ ಆಟಗಾರ ಅನಾವಶ್ಯಕವಾಗಿ ವಿಳಂಬ ಮಾಡಿದರೆ ಅಥವಾ ಶಿಸ್ತು ಕಾಯ್ದುಕೊಳ್ಳದಿದ್ದರೆ ಅವರ ವಿರುದ್ಧ ಈ ನಿಯಮದ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ.

ಇದರ ಪ್ರಕಾರ, ಯಾವುದೇ ಒಬ್ಬ ಆಟಗಾರ ಸಮಯದ ಒಳಗೆ ಮೈದಾನಕ್ಕೆ ಬರದಿದ್ದರೆ, ಆತನನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಯಾರೂ ಈ ನಿಯಮದಿಂದ ಹೊರಗುಳಿರಲಿಲ್ಲ, ಆದರೆ 2023ರ ವಿಶ್ವಕಪ್‌’ನಲ್ಲಿ ಈ ನಿಯಮ ಚಾಲೂ ಆಗಿದೆ, ಅಂದರೆ 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಓರ್ವ ಬ್ಯಾಟರ್ ಬೌಲ್ಡ್, ಕ್ಯಾಚ್, ರನೌಟ್ ಆಗದೆ ಮೈದಾನಕ್ಕೂ ಬರದೆ ಔಟ್ ಆಗಿದ್ದಾನೆ.

ವಿಶ್ವಕಪ್‌’ನಲ್ಲಿ ಶ್ರೀಲಂಕಾ  ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ನಡೆದ ಘಟನೆ ಕ್ರಿಕೆಟ್‌ ಲೋಕಕ್ಕೆ ಕಪ್ಪು ಮಚ್ಚೆಯಾಗಿ ಉಳಿದಿದೆ. ಜಂಟಲ್‌’ಮ್ಯಾನ್ ಆಟ ಎಂದು ಕರೆಯಲ್ಪಡುವ ಈ ಆಟದಲ್ಲಿ, ಶಕಿಬ್ ಅಲ್ ಹಸನ್ ಅವರು ನಿಯಮಗಳ ಲಾಭವನ್ನು ಪಡೆದುಕೊಂಡು ಶ್ರೀಲಂಕಾ ಆಟಗಾರ ಏಂಜಲೋ ಮ್ಯಾಥ್ಯೂಸ್ ಅವರನ್ನು ಔಟ್ ಮಾಡಿದ್ದಾರೆ.

ಮ್ಯಾಥ್ಯೂಸ್ ತಡವಾಗಿದ್ದೇಕೆ?

ಮೈದಾನಕ್ಕೆ ಬರಲೆಂದು ಹೆಲ್ಮೆಟ್ ಅನ್ನು ಬಿಗಿಗೊಳಿಸುತ್ತಿದ್ದಾಗ ಸ್ಟ್ರಿಪ್ ಮುರಿದುಹೋಗಿದೆ. ಇದೇ ಕಾರಣದಿಂದ ಬದಲಾಯಿಸಿಕೊಂಡು ಬರಲೆಂದು ಡ್ರೆಸ್ಸಿಂಗ್ ರೂಮಿನ ಕಡೆ ಮ್ಯಾಥ್ಯೂಸ್ ತೆರಳಿದ್ದಾರೆ. ಆದರೆ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿ ಲಾಭ ಪಡೆದುಕೊಂಡ ಬಾಂಗ್ಲಾ ನಾಯಕ ಅಂಪೈರ್ ಜೊತೆ ಮಾತನಾಡಿದ್ದಾರೆ..

ಈ ಸಂದರ್ಭದಲ್ಲಿ ಮ್ಯಾಥ್ಯೂಸ್ ಶಕೀಬ್ ಅವರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು ಅದಕ್ಕೆ ಒಪ್ಪಲು ಸಿದ್ಧರಿರಲಿಲ್ಲ. ಈ ಬಳಿಕ ಪರಿಶೀಲಿಸಿದ ಥರ್ಡ್ ಅಂಪೈರ್ ನಿಯಮಾನುಸಾರ ಮ್ಯಾಥ್ಯೂಸ್ ಔಟಾಗಿದ್ದಾರೆ ಎಂದು ನಿರ್ಧಾರ ಹೊರಡಿಸಿತು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ನಿಯಮದ ಪ್ರಕಾರ, ಒಬ್ಬ ಬ್ಯಾಟ್ಸ್‌ಮನ್ ಔಟ್ ಆದ ಬಳಿಕ ಮತ್ತೊಬ್ಬ ಬ್ಯಾಟ್ಸ್‌ಮನ್‌’ಗೆ ಬೌಲ್ ಮಾಡುವ ಚೆಂಡಿನ ನಡುವಿನ ಅಂತರವು 3 ನಿಮಿಷಗಳನ್ನು ಮೀರಬಾರದು.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲು:

ಮ್ಯಾಥ್ಯೂಸ್ ಅವರ ಟೈಮ್ ಔಟ್ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇನ್ನು ಈ ಘಟನೆ ನಡೆದಿರುವುದು ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಇದೇ ಮೊದಲ ಬಾರಿಗೆ. ಇನ್ನು ಪೆವಿಲಿಯನ್‌’ಗೆ ಮರಳಿದ ಮ್ಯಾಥ್ಯೂಸ್ ಡಗ್‌ ಔಟ್‌’ನಲ್ಲಿ ಕುಳಿತಿದ್ದಾಗ ಕಣ್ಣೀರು ಸುರಿಸಿದ್ದರು. ಈ ದೃಶ್ಯ ವೈರಲ್ ಆಗುತ್ತಿದೆ.

Source : https://zeenews.india.com/kannada/sports/world-cup-2023/sri-lanka-batter-angelo-mathews-timed-out-makes-history-with-unusual-dismissal-cricket-news-in-kannada-168968

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *