ನ.9 ರಿಂದ ವಿಶ್ವಕಪ್ ಸೆಮಿಫೈನಲ್, ಫೈನಲ್ ಪಂದ್ಯದ ಟಿಕೆಟ್‌ ಮಾರಾಟ ಆರಂಭ; ಖರೀದಿಸುವುದು ಹೇಗೆ?

ICC World Cup 2023: ಈ ಎರಡೂ ಪಂದ್ಯಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ನವೆಂಬರ್ 19 ರಂದು ಅಹಮದಾಬಾದ್ ಮೈದಾನದಲ್ಲಿ ನಡೆಯಲಿದೆ. ಈ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೀಗ ನಾಕೌಟ್ ಪಂದ್ಯಗಳ ಮತ್ತು ಫೈನಲ್ ಪಂದ್ಯದ ಟಿಕೆಟ್ ಮಾರಾಟದ ಬಗ್ಗೆ ಅಭಿಮಾನಿಗಳಿಗೆ ಬಿಗ್ ಅಪ್​ಡೇಟ್ ನೀಡಿದೆ.

ಭಾರತವು ಆತಿಥ್ಯ ವಹಿಸುತ್ತಿರುವ ಏಕದಿನ  ವಿಶ್ವಕಪ್‌​ನ (ICC World Cup 2023) ಲೀಗ್ ಸುತ್ತು ನವೆಂಬರ್ 12 ರಂದು ಕೊನೆಗೊಳ್ಳಲ್ಲಿದೆ. ಇದಾದ ನಂತರ ಮೊದಲ ಸೆಮಿಫೈನಲ್ (Semi-Finals) ಪಂದ್ಯ ನವೆಂಬರ್ 15 ರಂದು ಮತ್ತು ಎರಡನೇ ಸೆಮಿಫೈನಲ್ ಪಂದ್ಯ ನವೆಂಬರ್ 16 ರಂದು ನಡೆಯಲಿದೆ. ಈ ಎರಡೂ ಪಂದ್ಯಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಅಂತಿಮ (Final) ಪಂದ್ಯ ನವೆಂಬರ್ 19 ರಂದು ಅಹಮದಾಬಾದ್ ಮೈದಾನದಲ್ಲಿ ನಡೆಯಲಿದೆ. ಈ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದೀಗ ನಾಕೌಟ್ ಪಂದ್ಯಗಳ ಮತ್ತು ಫೈನಲ್ ಪಂದ್ಯದ ಟಿಕೆಟ್ ಮಾರಾಟದ ಬಗ್ಗೆ ಅಭಿಮಾನಿಗಳಿಗೆ ಬಿಗ್ ಅಪ್​ಡೇಟ್ ನೀಡಿದೆ.

ಇಂದಿನಿಂದ ಟಿಕೆಟ್ ಮಾರಾಟ ಆರಂಭ

ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್ ಮಾರಾಟವನ್ನು ನವೆಂಬರ್ 9 ರ ಸಂಜೆಯಿಂದ ಅಂದರೆ ಇಂದಿನಿಂದ ಆನ್‌ಲೈನ್ ಬುಕಿಂಗ್‌ ಆರಂಭಿಸಲಾಗುವುದು ಎಂದು ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದೆ. ರಾತ್ರಿ 8 ಗಂಟೆಗೆ ಟಿಕೆಟ್ ಮಾರಾಟ ಆರಂಭವಾಗಲಿದೆ. ಬುಕ್ ಮೈ ಶೋನ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಅಭಿಮಾನಿಗಳು ಈ ನಾಕೌಟ್ ಪಂದ್ಯಗಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಈ ವಿಶ್ವಕಪ್‌ನಲ್ಲಿ ಭಾರತ ತಂಡದ ಪಂದ್ಯಗಳ ಟಿಕೆಟ್‌ಗಳನ್ನು ಕೆಲವೇ ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡಲಾಗಿತ್ತು. ಆದ್ದರಿಂದ ನಾಕೌಟ್ ಪಂದ್ಯಗಳಿಗೂ ಇದೇ ರೀತಿಯ ಅಭಿಮಾನಿಗಳ ಕ್ರೇಜ್ ಅನ್ನು ಕಾಣಬಹುದಾಗಿದೆ.

ಭಾರತಕ್ಕೆ ಯಾರು ಎದುರಾಳಿ?

ಭಾರತ ತಂಡ 2023 ರ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನವನ್ನು ತೋರಿಸಿದೆ. ಇದರಲ್ಲಿ ಇದುವರೆಗೆ ಎಂಟು ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಎಲ್ಲವನ್ನು ಗೆದ್ದು ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಅದೇ ವೇಳೆ ಲೀಗ್ ಪಂದ್ಯಗಳು ಮುಗಿದ ಬಳಿಕ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಉಳಿಯುವುದು ಖಚಿತವಾಗಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಿವೆ.

ಪಾಕ್ ಎದುರಾಳಿಯಾದರೆ ಸ್ಥಳ ಬದಲಾವಣೆ

ಸೆಮಿಫೈನಲ್ ಪ್ರವೇಶಿಸುವ ನಾಲ್ಕನೇ ತಂಡಕ್ಕಾಗಿ ಪ್ರಸ್ತುತ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ರೋಚಕ ಕದನ ನಡೆಯುತ್ತಿದೆ. ನ್ಯೂಜಿಲೆಂಡ್ ಅಥವಾ ಅಫ್ಘಾನಿಸ್ತಾನ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದರೆ, ಭಾರತ ತಂಡವು ನವೆಂಬರ್ 15 ರಂದು ಮುಂಬೈನ ವಾಂಖೆಡೆಯಲ್ಲಿ ತನ್ನ ಸೆಮಿಫೈನಲ್‌ ಪಂದ್ಯವನ್ನು ಆಡಲಿದೆ. ಒಂದು ವೇಳೆ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಿದರೆ, ಅದು ನವೆಂಬರ್ 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.

Source : https://tv9kannada.com/sports/cricket-news/icc-world-cup-2023-tickets-for-semi-finals-and-final-on-sale-today-check-time-and-other-details-here-psr-712668.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *